ಸಾಮಾನ್ಯವಾಗಿ ಮಗು ಹುಟ್ಟಿದ 7- 8 ತಿಂಗಳ ಬಳಿಕ ಹಲ್ಲು ಬರುತ್ತದೆ. ಆದರೆ ಇಲ್ಲೊಂದು ಮಗು ಹುಟ್ಟುತ್ತಲೇ ಬಾಯಿ ತುಂಬಾ ಹಲ್ಲನ್ನು (Baby Born With Teeth) ಹೊಂದಿದ್ದು, ಈ ಕುರಿತು ಅಚ್ಚರಿಯನ್ನು ವ್ಯಕ್ತಪಡಿಸಿ ತಾಯಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ (Viral Video) ಹಂಚಿಕೊಂಡಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್‌ಸ್ಟಾ ಗ್ರಾಮ್‌ನಲ್ಲಿ 29.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಸಾಮಾನ್ಯವಾಗಿ ಮಕ್ಕಳು ಹಲ್ಲಿಲ್ಲದೆ ಹುಟ್ಟುತ್ತವೆ. ಮಗು ಬೆಳೆದಾಗ, ಅವರ ಹಾಲು ಹಲ್ಲುಗಳು ಬೆಳೆಯಲು ಪ್ರಾರಂಭಿಸುತ್ತವೆ. ಕ್ರಮೇಣ ಹಾಲು ಹಲ್ಲು ಕಳೆದುಕೊಂಡು ʼಬುದ್ಧಿವಂತಿಕೆಯ ಹಲ್ಲುʼಗಳನ್ನು ಒಳಗೊಂಡಂತೆ ಸರಾಸರಿ 32 ಶಾಶ್ವತ ಹಲ್ಲುಗಳು ಬರುತ್ತವೆ. 21ನೇ ವಯಸ್ಸಿನವರೆಗೂ ಹಲ್ಲಿನ ಬೆಳವಣಿಗೆಯಾಗುತ್ತದೆ.
ಹಲ್ಲುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಿವಿಧ ಅಂಶಗಳಿವೆ. ಇವುಗಳು ಸರಿಯಾದ ಪೋಷಣೆಯನ್ನು ಒಳಗೊಂಡಿವೆ. ಆದರೆ ಇಲ್ಲೊಂದು ಹುಟ್ಟಿದ ಮಗುವಿಗೆ 32 ಹಲ್ಲುಗಳಿದ್ದ ಅಚ್ಚರಿಯ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ತನ್ನ ಮಗಳು 32 ಹಲ್ಲುಗಳನ್ನು ಹೊಂದಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ಸಾಕಷ್ಟು ಮಂದಿಯ ಗಮನ ಸೆಳೆದಿದೆ.
ಈ ಕುರಿತು ಬರೆದಿರುವ ಮಹಿಳೆ, ತನ್ನ ಮಗಳು ಅಪರೂಪದ ಕಾಯಿಲೆಯಿಂದ ಜನಿಸಿದಳು. ಅವಳು 32 ಹಲ್ಲುಗಳೊಂದಿಗೆ ಜನಿಸಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಲು ಸಾರ್ವಜನಿಕರೊಂದಿಗೆ ಇದನ್ನು ಹಂಚಿಕೊಳ್ಳುತ್ತಿರುವುದಾಗಿ ಮಹಿಳೆ ತಿಳಿಸಿದ್ದಾಳೆ. ವಿಡಿಯೋದಲ್ಲಿ ಮಹಿಳೆ ಸಂಪೂರ್ಣ ಹಲ್ಲುಗಳೊಂದಿಗೆ ಜನಿಸಿದ ತಮ್ಮ ಮಗಳನ್ನು ತೋರಿಸಿದ್ದಾರೆ. ಮಗಳು ಹುಟ್ಟುವಾಗಲೇ ಸಂಪೂರ್ಣ ಹಲ್ಲುಗಳನ್ನು ಹೊಂದಿದ್ದಳು ಎಂಬುದನ್ನು ಅವರು ಹೇಳಿದ್ದಾರೆ.
ಈ ಸ್ಥಿತಿಯನ್ನು ಸಾಮಾನ್ಯವಾಗಿ ಹಲ್ಲುಗಳನ್ನು ಹಾಲು ಹಲ್ಲು ಎಂದು ಕರೆಯಲಾಗುತ್ತದೆ. ಇದು ಮಗುವಿಗೆ ಹೆಚ್ಚು ಹಾನಿಕಾರಕವಲ್ಲದಿದ್ದರೂ ಇದು ತಾಯಿಗೆ ತೊಂದರೆ ಉಂಟುಮಾಡಬಹುದು. ಯಾಕೆಂದರೆ ಅವಳು ತನ್ನ ಮಗುವಿಗೆ ಆಹಾರವನ್ನು ನೀಡಲು ಕಷ್ಟವಾಗಬಹುದು. ಇದಲ್ಲದೆ ಹಲ್ಲುಗಳು ಮುರಿದರೆ ಮಗು ನುಂಗುವ ಅಪಾಯವಿದೆ.
ಇದನ್ನೂ ಓದಿ: Viral Video: ವೃದ್ಧನ ಮೊಬೈಲ್ ಕಸಿದು ಓಡಿದ ಯುವಕನಿಗೆ ಯಾವ ಗತಿಯಾಯಿತು ನೋಡಿ!
ಈ ವಿಡಿಯೋ ಕ್ಲಿಪ್ ಅನ್ನು ಅಪ್‌ಲೋಡ್ ಮಾಡಿದ ಅನಂತರ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಮಗುವನ್ನು ನೋಡಿ ಹೆದರಿದ್ದರು.
ಬಳಕೆದಾರರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, ಮಗು ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ. ಮಗು ಬೆಳೆಯುವಾಗ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಕ್ಷಮಿಸಿ, ಆದರೆ ಮಗುವು ಭಯಾನಕವಾಗಿ ಕಾಣುತ್ತಿದೆ ಎಂದಿದ್ದಾರೆ.