Site icon Vistara News

Fact Check: ಓವೈಸಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮಹಿಳೆ ಅಲ್ಲವೆ?

Viral Video

ಹೈದರಾಬಾದ್: ಭಾರತೀಯ ಜನತಾ ಪಕ್ಷದ (BJP) ಹೈದರಾಬಾದ್ ನ (Hyderabad) ಅಭ್ಯರ್ಥಿ ಮಾಧವಿ ಲತಾ (Madhavi Latha) ಅವರು ತಾವು ಮಹಿಳೆಯೇ ಅಲ್ಲ ಎಂದು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದ್ದು, ಇದನ್ನು ನೋಡಿರುವ ನೆಟ್ಟಿಗರು (Fact Check) ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾಧವಿ ಲತಾ ಅವರು “ನಾನು ಮಹಿಳೆ ಅಲ್ಲ” ಎಂದು ಹೇಳುವ ವಿಡಿಯೋವನ್ನು ಕತ್ತರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ಹೈದರಾಬಾದ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಮಹಿಳೆ ಅಲ್ಲ ಎಂದು ಸುಳ್ಳು ಪ್ರಚಾರವನ್ನೂ ಮಾಡಲಾಗುತ್ತಿದೆ. ಇದರ ಮೂಲ ಸಂದರ್ಶನದಲ್ಲಿ ಲತಾ ಅವರು ತಾನು ಕೇವಲ ಮಹಿಳೆಯಲ್ಲ ಆದರೆ ಶಕ್ತಿ ಎಂದು ಹೇಳಿದ್ದರು.

ಓವೈಸಿ ವಿರುದ್ಧ ಕಣಕ್ಕೆ

ತೆಲಂಗಾಣದ ಹೈದರಾಬಾದ್‌ನಲ್ಲಿ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನ ಹಾಲಿ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ನಟಿ ಲತಾ ಅವರು ಇತ್ತೀಚೆಗೆ ಪ್ರಚಾರ ಕಾರ್ಯಕ್ರಮವೊಂದರಲ್ಲಿ 221 ಕೋಟಿ ರೂ. ಮೌಲ್ಯದ ಕುಟುಂಬದ ಆಸ್ತಿಯನ್ನು ಘೋಷಿಸಿದ ನಂತರ ಹೈದರಾಬಾದ್ ಕ್ಷೇತ್ರದ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral News: ಸಿಂಗಾಪುರ ಏರ್‌ಲೈನ್ಸ್‌ ಪೈಲಟ್‌ ಅಂತಾ ಹೇಳ್ಕೊಂಡು ಪೋಸ್‌ ಕೊಡ್ತಿದ್ದವ ಲಾಕ್‌!

ವಿಡಿಯೋದಲ್ಲಿ ಏನಿದೆ?

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಲತಾ ಅವರು ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಮಹಿಳೆಯಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, “ನಾನು ಮಹಿಳೆ ಅಲ್ಲ, ದಯವಿಟ್ಟು ನನ್ನನ್ನು ಮಹಿಳೆ ಎಂದು ಕರೆಯಬೇಡಿ”’ ಎಂದು ನೇರವಾಗಿ ಹೇಳಿದ್ದಾರೆ. ಆದರೆ ಮುಂದೆ ಅವರು, ನಾನು ಮಹಿಳೆ ಅಲ್ಲ, ಕೇವಲ ಮಹಿಳೆ ಅಲ್ಲ, ಮಹಾ ಶಕ್ತಿ ಎಂದು ಮಾಧವಿ ಲತಾ ಹೇಳಿದ್ದರು. ಆದರೆ ಈ ಭಾಗ ತೋರಿಸದೆ ತಾವು ಮಹಿಳೆ ಅಲ್ಲ ಎಂದ ದೃಶ್ಯವನ್ನಷ್ಟೇ ಕಟ್ ಮಾಡಿ ಶೇರ್ ಮಾಡಲಾಗುತ್ತದೆ.

ಈ ಕುರಿತು ಹಲವಾರು ಮಂದಿ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಹಾಗಾದರೆ ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಹಿಳೆ ಅಲ್ಲವೇ, ಮುಖ ನೋಡುವಾಗ ಮಹಿಳೆಯಂತೆ ಕಾಣುತ್ತಾರೆ, ಹಾಗಾದರೆ ಅವರು ಮಂಗಳಮುಖಿಯೇ… ಹೀಗೆ ಹಲವು ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ.


ಸತ್ಯ ಏನು?

ಲತಾ ಅವರು ಮಹಿಳೆ ಅಲ್ಲ ಎಂದು ನೀಡಿರುವ ಹೇಳಿಕೆಯನ್ನು ಕತ್ತರಿಸಿ ಹಂಚಿಕೊಳ್ಳಲಾಗಿದೆ ಎಂದು ಬೂಮ್ ಕಂಡುಹಿಡಿದಿದೆ. ‘ನ್ಯೂಸ್ ನೇಷನ್’ ಎಂಬ ಹಿಂದಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಲತಾ ಅವರು, ಓವೈಸಿ ವಿರುದ್ಧ ಸ್ಪರ್ಧಿಸುತ್ತಿರುವ ವಿಚಾರವಾಗಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಲ್ಲದೇ ತಾವು ಬಿಜೆಪಿ ಸೇರಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ಹೈದರಾಬಾದ್‌ನ ಹಳೆಯ ನಗರ ಭಾಗದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದಿರುವ ಅವರು, ನಗರದ ಅತಿದೊಡ್ಡ ಕೊಳೆಗೇರಿ ವಸಾಹತುಗಳಲ್ಲಿ ಒಂದಾದ ತಾಲಾಬ್ ಕಟ್ಟಾ ಮುಂತಾದವುಗಳ ಬಗ್ಗೆ ವರದಿಗಾರ ಪ್ರಶ್ನೆಗಳಿಗೆ ಉತ್ತರಿಸಿದರು. ಒಬ್ಬ ಮಹಿಳೆಯಾಗಿ ನೀವು ಆ ಪರಿಸ್ಥಿತಿಯನ್ನು ಹೇಗೆ ಎದುರಿಸಲು ಯೋಜಿಸುತ್ತೀರಿ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಟ್ಟಾದ ಸ್ವರದಲ್ಲಿ ನಾನು ಮಹಿಳೆ ಅಲ್ಲ, ನಾನು ಶಕ್ತಿ. ನೀವು ಅದನ್ನು ಮೊದಲು ಸ್ಪಷ್ಟಪಡಿಸಬೇಕು. ನನ್ನನ್ನು ಮಹಿಳೆ ಎಂದು ಪದೇ ಪದೇ ಕರೆಯಬೇಡಿ. ನೀವು ನನ್ನನ್ನು ದುರ್ಬಲ ಎಂದು ಪರಿಗಣಿಸುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ.

ಇದಾದ ನಂತರ ಲತಾ ಕ್ಯಾಮೆರಾದತ್ತ ತಿರುಗಿ, ನೇರವಾಗಿ ವೀಕ್ಷಕರನ್ನು ಉದ್ದೇಶಿಸಿ, ನಾನು ಒಬ್ಬ ಮಹಿಳೆ ಅಲ್ಲ, ತನ್ನ ಸಹೋದರ ಸಹೋದರಿಯರ ಶಕ್ತಿಯಿಂದ ಇಲ್ಲಿರುವ ಶಕ್ತಿ ಸ್ವತಃ ನಾನು. ಅವರ ಶಕ್ತಿಯಿಂದಾಗಿ ನಾನು ಉಳಿದಿದ್ದೇನೆ ಎಂದು ತಿಳಿಸಿದ್ದಾರೆ.

ಶಕ್ತಿ ಎಂಬ ಪದವನ್ನು ಹಿಂದೂ ಧರ್ಮದಲ್ಲಿ ವಿವಿಧ ರೂಪಗಳಲ್ಲಿ ಪೂಜಿಸುವ ದೈವಿಕ ಸ್ತ್ರೀಲಿಂಗ ಶಕ್ತಿಯನ್ನು ಉಲ್ಲೇಖಿಸಲು ಇದನ್ನು ಬಳಸಲಾಗುತ್ತದೆ. ವೈರಲ್ ಆಗಿರುವ ವಿಡಿಯೋದಲ್ಲಿ ಲತಾ ಅವರ ಹೇಳಿಕೆಯನ್ನು ಕತ್ತರಿಸಿ ಹಾಕಲಾಗಿದೆ.

Exit mobile version