Site icon Vistara News

Viral Video: ಸುಡುವ ಮರಳಿನಲ್ಲಿ ಹಪ್ಪಳ ಸುಟ್ಟ ಬಿಎಸ್‌ಎಫ್‌ ಯೋಧ; ಎಲ್ಲೆಡೆ ಇದೇ ವಿಡಿಯೋ ವೈರಲ್‌

Viral Video

ನವದೆಹಲಿ: ದಕ್ಷಿಣ ಭಾರತದಲ್ಲಿ ಮಳೆ ಶುರುವಾಗಿದ್ದರೂ ಉತ್ತರಭಾರತ(North India)ದಲ್ಲಿ ಮಾತ್ರ ವರುಣನ ಕೃಪೆ ಇನ್ನೂ ಆಗಿಲ್ಲ. ರಣಬಿಸಿಲಿಗೆ ಹೈರಾಣಾಗಿರುವ ಜನ ಇದೀಗ ಬಿಸಿಗಾಳಿ(Heat wave)ಯ ತಾಪಕ್ಕೆ ಸಿಲುಕಿ ಬಸವಳಿದಿದ್ದಾರೆ. ಸಾಮಾನ್ಯ ತಾಪಾಮಾನವೇ 47°C.ಕ್ಕೆ ಏರಿಕೆ ಆಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿಯೇ ಹವಾಮಾನ ಇಲಾಖೆ(IMD) ದಿಲ್ಲಿ, ರಾಜಸ್ಥಾನ, ಪಂಜಾಬ್‌, ಹರ್ಯಾಣ ಮತ್ತು ಉತ್ತರಪ್ರದೇಶಗಳ ಕೆಲವು ಪ್ರದೇಶಗಳಲ್ಲಿ ರೆಡ್‌ ಅಲರ್ಟ್‌(Red alert) ಘೋಷಿಸಿದೆ. ಮುಂದಿನ ಐದು ದಿನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಹಡಗೆಡುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಇದರ ನಡುವೆ ರಾಜಸ್ಥಾನದಲ್ಲಿ ಯೋಧರೊಬ್ಬರು ಸುಡುವ ಮರಳಿನಲ್ಲಿ ಹಪ್ಪಳ ಸುಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌(Viral Video) ಆಗಿದೆ.

ರಾಜಸ್ಥಾನದ ಬಿಕಾನೆರ್‌ ನಲ್ಲಿ ಬಿಎಸ್ ಎಫ್ ಯೋಧರೊಬ್ಬರು ಸುಡು ಬಿಸಿಲಿನಲ್ಲಿ ಮರಳ ಮೇಲೆ ಹಪ್ಪಳ ಹುರಿದಿದ್ದಾರೆ. ಖಾಜುವಾಲದ ಬಳಿ ಇರುವ ಭಾರತ-ಪಾಕ್ ಗಡಿಯಲ್ಲಿ ಈ ದೃಶ್ಯ ಕಂಡುಬಂದಿದ್ದು, ಪ್ರದೇಶದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಾಗಿದೆ. ಇನ್ನು ಮರುಭೂಮಿಯಲ್ಲಿ ಯೋಧ ಕೈಯಲ್ಲಿ ಹಪ್ಪಳ ಹಿಡಿದು ಮರಳನ್ನು ಮೆಲ್ಲಗೆ ಸರಿಸುತ್ತಾರೆ. ನಂತರ ಅದರ ಒಳಗೆ ಹಪ್ಪಳ ಇಟ್ಟು ಮರಳನ್ನು ಮುಚ್ಚುತ್ತಾರೆ. ಕೆಲ ಸಮಯ ಹಾಗೇ ಬಿಟ್ಟು ನಂತರ ಮೆಲ್ಲಗೆ ಮರಳನ್ನು ಸರಿಸುತ್ತಾರೆ. ಆಗಾ ಹಪ್ಪಳ ಚೆನ್ನಾಗಿ ರೋಸ್ಟ್‌ ಆಗುತ್ತದೆ. ಹಪ್ಪಳ ಎಷ್ಟು ರೋಸ್ಟ್‌ ಆಗಿದೆ ಎಂಬುದನ್ನು ಯೋಧ ಮುರಿದು ತೋರಿಸುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಇನ್ನು ಈ ವಿಡಿಯೋವನ್ನು ರಾಜಸ್ಥಾನದ ಬಿಕಾನೇರ್‌ನಲ್ಲಿ ತಾಪಮಾನವು 47 °C ಗೆ ಏರಿದೆ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರಮಾಣದ ಬಿಸಿಲಿನಲ್ಲಿಯೂ ಬದ್ಧತೆಯಿಂದ ದೇಶದ ರಕ್ಷಣೆ ಮಾಡುತ್ತಿರುವ ಯೋಧರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಧನ್ಯವಾದ ತಿಳಿಸಿದ್ದಾರೆ. ಅಂತರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಮರಳು ಕುಲುಮೆಯಂತೆ ಭಾಸವಾಗುತ್ತದೆ, ಆದರೆ ತಾಯ್ನಾಡಿಗೆ ಸೇವೆ ಸಲ್ಲಿಸುತ್ತಿರುವ ನಮ್ಮ ಸೈನಿಕರು ದೃಢವಾಗಿ ನಿಂತಿದ್ದಾರೆ ಎಂದು ಈ ವೀಡಿಯೊಗೆ ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ

ಇದನ್ನೂ ಓದಿ:Mother Dies: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು; 35 ಲಕ್ಷ ಬಿಲ್‌ ಕಟ್ಟಿ ಮೃತದೇಹ ತೆಗೆದುಕೊಳ್ಳಿ ಎಂದ ಆಸ್ಪತ್ರೆ!

“ನಮ್ಮ ಯೋಧರು ಸದಾ ನಮ್ಮ ರಕ್ಷಣೆಗೆ ನಿಂತಿದ್ದಾರೆ.. ಅದೂ +47 ಡಿಗ್ರಿ ಅಥವಾ -47 ಡಿಗ್ರಿ ಆಗಿದ್ದರೂ… ಸೆಲ್ಯೂಟ್!” ಒಬ್ಬ ವ್ಯಕ್ತಿಯನ್ನು ಬರೆದಿದ್ದರೆ, ಮತ್ತೊಬ್ಬರು, “ನಮ್ಮ ಧೈರ್ಯಶಾಲಿಗಳಿಗೆ ಸೆಲ್ಯೂಟ್. ಈ ಬಿಸಿಯ ಅಲೆಯಲ್ಲೂ ನಮ್ಮ ಸೈನಿಕರು ಗಡಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಯೋಧರಿಗೆ ಗ್ರ್ಯಾಂಡ್ ಸೆಲ್ಯೂಟ್ ಮತ್ತು ದೊಡ್ಡ ಗೌರವ! ಜೈ ಹಿಂದ್!” ಎಂದು ಕಮೆಂಟ್‌ ಮಾಡಿದ್ದಾರೆ.

Exit mobile version