ಲಕ್ನೋ: ಉತ್ತರ ಪ್ರದೇಶದಲ್ಲಿ ಉದ್ಯಮಿಯೊಬ್ಬ ತನ್ನ ಮಗನ ಸ್ನೇಹಿತನನ್ನು ಪಂಚತಾರಾ ಹೋಟೆಲ್‌ನ ಟೆರೇಸ್‌ನಿಂದ ತಳ್ಳಿದ ಆಘಾತಕಾರಿ ಘಟನೆ ನಡೆದಿದೆ. ಭಾನುವಾರ ಮುಂಜಾನೆ ಬರೇಲಿಯ ಹೋಟೆಲ್ ಒಂದರಲ್ಲಿ ಈ ಘಟನೆ ನಡೆದಿದೆ. ಯುವಕನೊಂದಿಗೆ ಜಗಳವಾಡಿದ ಉದ್ಯಮಿ ಬಳಿಕ ಆತನನ್ನು ಟೆರೇಸ್‌ನಿಂದ ತಳ್ಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral News).
ಪ್ರೀ ವೆಡ್ಡಿಂಗ್ ಪಾರ್ಟಿ ವೇಳೆ ಈ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿ ಕೂಡ ಉದ್ಯಮಿ ಎನ್ನಲಾಗಿದೆ. ಆತನನ್ನು ಹೆಸರು ಸಾರ್ಥಕ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಜೀವ್ ಅರೋರಾ ಆರೋಪಿ.
UP : बरेली के होटल रेडिसन में व्यापारी नेता के पुत्र सार्थक अग्रवाल को मारपीट के बाद फर्स्ट फ्लोर से नीचे फेंक दिया। उसको गंभीर चोटें आई हैं।
— Sachin Gupta (@SachinGuptaUP) April 21, 2024
दरअसल, होटल में एक फैमिली प्रोग्राम था। कुछ व्यापारी शराब पीए हुए थे। रिदिम अरोड़ा, सतीश अरोड़ा पर FIR हुई। pic.twitter.com/WEaRJxRSTR
ವಿಡಿಯೊದಲ್ಲಿ ಏನಿದೆ?
ಸಂಜೀವ್ ಅರೋರಾ ಟೆರೇಸ್‌ಗೆ ಆಗಮಿಸುತ್ತಿದ್ದಂತೆ ಸಾರ್ಥಕ್ ಅಗರವಾಲ್ ಆತನ ಕಾಲಿಗೆ ಬೀಳುತ್ತಾನೆ. ಆದರೂ ಸಮಾಧಾನಗೊಳ್ಳದ ಸಂಜೀವ್ ಅರೋರಾ ಕೆನ್ನೆಗೆ ಸರಿಯಾಗಿ ಬಾರಿಸುತ್ತಾನೆ. ಬೇಡ ಬೇಡ ಎಂದರೂ ಹಲ್ಲೆ ನಡೆಸುತ್ತಾನೆ. ಬಳಿಕ ಸಾರ್ಥಕ್‌ನನ್ನು ಟೆರೇಸ್‌ನಿಂದ ಕೆಳಗೆ ತಳ್ಳುತ್ತಾನೆ.
ಘಟನೆ ವಿವರ
ಸಾರ್ಥಕ್ ಅಗರವಾಲ್, ರಿದಿಮ್ ಅರೋರಾ ಮತ್ತಿತರರು ಹೋಟೆಲ್‌ನ ಟೆರೇಸ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಮಾತಿಗೆ ಮಾತು ನಡೆದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವಾಗ್ವಾದ ನಡೆದಿದೆ. ಬಳಿಕ ರಿದಿಮ್ ತನ್ನ ತಂದೆ, ಜವಳಿ ಉದ್ಯಮಿ ಸಂಜೀವ್ ಅರೋರಾಗೆ ಕರೆ ಮಾಡಿದ್ದ. ಕೂಡಲೇ ಸಂಜೀವ್ ಟೆರೇಸ್‌ಗೆ ಆಗಮಿಸಿದ್ದ. ಆತ ಬರುತ್ತಲೇ ಸಾರ್ಥಕ್ ಅಗರ್ವಾಲ್ ಸಂಜೀವ್ ಕಾಲಿಗೆ ಕೂಡ ಬೀಳುತ್ತಾನೆ. ಆದರೆ ಸಂಜೀವ್ ಕ್ಷಮಿಸುವುದಿಲ್ಲ. ಸಾರ್ಥಕ್‌ನ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿ ಟೆರೇಸ್‌ನಿಂದ ತಳ್ಳುತ್ತಾನೆ. ಅಷ್ಟೇ ಅಲ್ಲದೆ ಹತ್ತಿರದಲ್ಲೇ ನಿಂತಿದ್ದ ಇನ್ನೊಬ್ಬ ವ್ಯಕ್ತಿಯ ಮೇಲೂ ಕೂಡ ಹಲ್ಲೆ ಮಾಡಿದ್ದಾನೆ. ಮದ್ಯ ಸೇವಿಸಿ ಸಂಜೀವ್ ಈ ರೀತಿ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಆರೋಪಿ ಮದ್ಯ ಸೇವಿಸಿ ಯಾವುದೇ ಪ್ರಚೋದನೆ ಇಲ್ಲದೆ ಸಂತ್ರಸ್ತನ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ಹಾನಿ ಉಂಟು ಮಾಡುವ ಹಲ್ಲೆ ಎನ್ನುವ ಪ್ರಕರಣವನ್ನು ಆತನ ವಿರುದ್ಧ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Viral News: ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನೇತಾಡುವ ಯುವಕ; ಶಾಕಿಂಗ್ ವಿಡಿಯೊ ನೋಡಿ
ತಂದೆಯ ತೋಳಿನಿಂದ ಜಾರಿ 40 ಅಡಿ ಕೆಳಗೆ ಬಿದ್ದ ಮಗು
ಕೆಲವು ದಿನಗಳ ಹಿಂದೆ ಶಾಪಿಂಗ್ ಮಾಲ್‌ನ ಮೂರನೇ ಮಹಡಿಯ ಎಸ್ಕಲೇಟರ್ ಹತ್ತುವಾಗ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ 40 ಅಡಿಗಳಷ್ಟು ಕೆಳಗೆ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿತ್ತು. ಮಾರ್ಚ್ 19ರ ರಾತ್ರಿ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಮಾಲ್‌ನಲ್ಲಿ ಈ ಆಘಾತ ಸಂಭವಿಸಿದ್ದು, ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ವೈರಲ್ ಆಗಿತ್ತು.
ಸಿಸಿ ಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ತೋಳಿನಲ್ಲಿ ಮಗುವನ್ನು ಎತ್ತಿಕೊಂಡು ಎಸ್ಕಲೇಟರ್ ಬಳಿ ಬರುವುದು ಸೆರೆಯಾಗಿದೆ. ಈ ವೇಳೆ ಅವರ ಜತೆ ಇನ್ನೊಂದು ಮಗು ಕೂಡ ಹೆಜ್ಜೆ ಹಾಕುತ್ತಿರುತ್ತದೆ. ಎಸ್ಕಲೇಟರ್ ಹತ್ತಲು ದೊಡ್ಡ ಮಗುವಿಗೆ ಸಹಾಯ ಮಾಡಲು ಆ ವ್ಯಕ್ತಿ ಮುಂದಾಗುತ್ತಾರೆ. ಈ ವೇಳೆ ಆಕಸ್ಮಿಕವಾಗಿ ತೋಳಿನಲ್ಲಿದ್ದ 1 ವರ್ಷದ ಮಗು ಕೈಯಿಂದ ಜಾರಿ 40 ಅಡಿಗಳಷ್ಟು ಆಳಕ್ಕೆ ಬಿದ್ದಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು.