Site icon Vistara News

Viral Video: ಕಾರು ತಡೆದ ಟ್ರಾಫಿಕ್‌ ಪೊಲೀಸ್‌ ಕ್ಯಾಬ್‌ ಡ್ರೈವರ್‌ ಮಾಡಿದ್ದೇನು ಗೊತ್ತಾ?

Viral Video

ಹರಿಯಾಣ: ದಾಖಲೆ ಪರಿಶೀಲನೆ ವೇಳೆ ಕಿಡಿಗೇಡಿ ಕ್ಯಾಬ್‌ ಡ್ರೈವರ್‌(Cab Driver)ವೊಬ್ಬ ಟ್ರಾಫಿಕ್‌ ಪೊಲೀಸ್‌ ಅನ್ನೇ ಕಾರಿನಲ್ಲಿ ಎಳೆದಾಡಿದ ಘಟನೆ ಹರ್ಯಾಣ(Haryana)ದ ಬಲ್ಲಾಬ್‌ಗರ್‌ನಲ್ಲಿ ನಡೆದಿದೆ. ಟ್ರಾಫಿಕ್‌ ಸಿಗ್ನಲ್‌ ಬಿದ್ದ ತಕ್ಷಣ ಟ್ರಾಫಿಕ್‌ ಪೊಲೀಸ್‌ ಕಾರೊಂದನ್ನು ತಡೆದು ದಾಖಲೆ ಪರಿಶೀಲನೆ ಮುಂದಾದಾಗ ಈ ಘಟನೆ ನಡೆದಿದೆ. ಈ ಶಾಕಿಂಗ್‌ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ

ವರದಿ ಪ್ರಕಾರ, ರಾಜಸ್ಥಾನ ರಿಜಿಸ್ಟರ್ಡ್‌ ಕಾರು ಕಾರನ್ನು ತಡೆದ ಟ್ರಾಫಿಕ್‌ ಪೊಲೀಸರು ದಾಖಲೆ ಪರಿಶೀಲನೆಗೆ ಮುಂದಾಗುತ್ತಾರೆ. ದಾಖಲೆ ಪರಿಶೀಲನೆ ವೇಳೆ ಕಾರು ಚಾಲಕ ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ ನಡುವೆ ಭಾರೀ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಚಾಲಕ ಕಾರು ಚಲಾಯಿಸಿದ್ದಾನೆ. ಕಾರಿನ ಬಾಗಿಲಿನಲ್ಲಿ ಪೊಲೀಸ್‌ ನೇತಾಡುತ್ತಿದ್ದಂತೆ ಚಾಲಕ ಕಾರನ್ನು ವೇಗವಾಗಿ ಮುಂದಕ್ಕೆ ಚಲಾಯಿಸಿದ್ದಾನೆ. ಸ್ವಲ್ಪ ಮುಂದಕ್ಕೆ ಕಾರು ಚಲಾಯಿಸಿದ ಬಳಿಕ ತಕ್ಷಣ ನಿಲ್ಲಿಸುತ್ತಾನೆ. ಕಾರಿನಿಂದ ಮತ್ತೊರ್ವ ವ್ಯಕ್ತಿ ಹೊರಗೆ ಬರುತ್ತಾನೆ.

ಘಟನೆಯಲ್ಲಿ ಪೊಲೀಸ್‌ಗೆ ಗಂಭೀರ ಗಾಯಗಳಾಗಿವೆ. ಕಾರು ನಿಲ್ಲುತ್ತಿದ್ದಂತೆ ಚಾಲಕನನ್ನು ಕಾಲರ್‌ನಿಂದ ಹೊರಗೆಳೆದಿದ್ದಾನೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಕಿಡಿಗೇಡಿ ಚಾಲಕನ ವಿರುದ್ಧ ಕೊಲೆ ಯತ್ನ ಕೇಸ್‌ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Heat wave: ಉಷ್ಣ ಮಾರುತಕ್ಕೆ ತತ್ತರಿಸಿದ ಉತ್ತರ ಭಾರತ; ದೇಶಾದ್ಯಂತ 143 ಜನ ಬಲಿ

ಗುಜರಾತ್‌ನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿದೆ. ವಾಹನ ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ವಾಹನದ ಬಾಗಿಲು ತೆರೆದುಕೊಂಡು ಇಬ್ಬರು ವಿದ್ಯಾರ್ಥಿನಿಯರು ವಾಹನದಿಂದ ಹೊರಬಿದ್ದು ಗಾಯಗೊಂಡ ಘಟನೆ ಗುಜರಾತ್‌ನ ವಡೋದರದಲ್ಲಿ ನಡೆದಿದೆ. ಮಾರುತಿ ಇಕೋ ವಾಹನದಲ್ಲಿ ಮಕ್ಕಳನ್ನು ತುಂಬಿಸಿಕೊಂಡು ಚಾಲಕ ಶಾಲೆಯತ್ತ ವೇಗವಾಗಿ ವಾಹನವನ್ನು ಚಲಾಯಿಸಿದ್ದಾನೆ. ಆ ವೇಳೆ ಕಾರಿನ ಹಿಂಬದಿಯ ಬಾಗಿಲು ಸರಿಯಾಗಿ ಹಾಕದ ಕಾರಣ ಅದು ತೆರೆದುಕೊಂಡು ಹಿಂದೆ ಕುಳಿತಿದ್ದ ಇಬ್ಬರು ವಿದ್ಯಾರ್ಥಿನಿಯರು ರಸ್ತೆಯ ಮೇಲೆ ಬಿದ್ದಿದ್ದಾರೆ. ಈ ಘಟನೆಯಿಂದ ಆ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯವಾಗಿದೆ.

ಹಿಂಬದಿಯಿಂದ ಯಾವುದೇ ವಾಹನ ಬಾರದ ಕಾರಣ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರನ್ನು ಸ್ಥಳೀಯರು ಮೇಲಕ್ಕೆತ್ತಿ ಚಿಕಿತ್ಸೆ ಮಾಡಿದ್ದಾರೆ. ಆದರೆ ಚಾಲಕ ಮಾತ್ರ ಮಕ್ಕಳು ಬಿದ್ದಿರುವುದು ತಿಳಿದರೂ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಸ್ಥಳೀಯರು ವಿದ್ಯಾರ್ಥಿನಿಯ ಮನೆಯವರಿಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

Exit mobile version