Site icon Vistara News

Viral Video: ಸಣ್ಣ ಕಾರಿಗೆ ಡಿಕ್ಕಿ ಹೊಡೆದು ಗಿರಗಿರ ಪಲ್ಟಿ ಹೊಡೆದ ಎಸ್‌ಯವಿ!

Viral Video

ಸಿಕಂದರಾಬಾದ್: ಸಂಚಾರ ನಿಯಮಗಳು (Traffic rules) ಇರುವುದು ಸವಾರರು (riders) ಮತ್ತು ಪಾದಚಾರಿಗಳ (pedestrians) ಸುರಕ್ಷತೆಗಾಗಿ. ಈ ನಿಯಮಗಳನ್ನು ಉಲ್ಲಂಘಿಸುವುದು ಬಹಳ ಅಪಾಯಕಾರಿ. ಇದು ಮಾರಣಾಂತಿಕವೂ ಆಗಬಹುದು. ಹೀಗಾಗಿಯೇ ಸಂಚಾರ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಜಾರಿಗೆ ತರಲಾಗುತ್ತದೆ.

ಟ್ರಾಫಿಕ್ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದರಿಂದ ದೊಡ್ಡ ಅಪಘಾತಗಳು ಸಂಭವಿಸುತ್ತವೆ ಎಂಬುದನ್ನು ಸಾಬೀತುಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ. ಈ ವಿಡಿಯೋದಲ್ಲಿ ಚಾಲಕ ಸಿಗ್ನಲ್ ಜಂಪ್ ಮಾಡಿದ ಅನಂತರ ಕಾರು ಪಲ್ಟಿಯಾಗಿದ್ದು ವಿರುದ್ಧ ದಿಕ್ಕಿನಿಂದ ಬಂದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಈ ಘಟನೆ ನಡೆದಿರುವ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕೆಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಸಿಕಂದರಾಬಾದ್‌ನ ಜುಬಿಲಿ ಬಸ್ ನಿಲ್ದಾಣದ ಬಳಿ ಕಪ್ಪು ಬಣ್ಣದ ಎಸ್‌ಯುವಿಯು ಹೆಚ್ಚಿನ ವೇಗದಲ್ಲಿ ಸಿಗ್ನಲ್ ಅನ್ನು ಜಂಪ್ ಮಾಡಿದೆ. ಅತಿ ವೇಗವಾಗಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಯೇ ಬಿಳಿ ಕಾರಿಗೆ ಡಿಕ್ಕಿಯಾಗಿದೆ. ರಸ್ತೆ ಮಧ್ಯೆಯೇ ಕಾರು ಉರುಳಿ ಬಿದ್ದಿದೆ. ಈ ಭೀಕರ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಿಗ್ನಲ್ ಜಂಪಿಂಗ್ ಮತ್ತು ಅತಿವೇಗದ ಅಪಾಯಗಳನ್ನು ಎತ್ತಿ ತೋರಿಸುತ್ತದೆ.

ಘಟನಾ ಸ್ಥಳದಲ್ಲಿದ್ದ ಜನರು ಅಪಘಾತದ ಸ್ಥಳಕ್ಕೆ ಧಾವಿಸಿದ್ದಾರೆ. ಎಲ್ಲರೂ ಸೇರಿ ಕಾರಿನಲ್ಲಿದ್ದವರು ಸಹಾಯ ಮಾಡಲು ಮುಂದಾಗಿದ್ದಾರೆ. ಭೀಕರ ಅಪಘಾತ ಸಂಭವಿಸಿದರೂ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.


ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಅಪಘಾತ ಸ್ಥಳಕ್ಕೆ ಧಾವಿಸುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಕಾನ್‌ಸ್ಟೆಬಲ್ ಅವರ ನಿಧಾನ ಪ್ರತಿಕ್ರಿಯೆಗಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: Viral Video: ಏಕಾಏಕಿ ಕುಸಿದು ಸಾವನ್ನಪ್ಪಿದ ಮೆಡಿಕಲ್ ಸಿಬ್ಬಂದಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಅಪಘಾತಕ್ಕೀಡಾದವರಿಗೆ ಸಹಾಯ ಮಾಡಲು ಮತ್ತು ಪಲ್ಟಿಯಾದ ಕಾರಿನೊಳಗೆ ಸಿಕ್ಕಿಬಿದ್ದವರನ್ನು ರಕ್ಷಿಸಲು ಅವರು ತಕ್ಷಣವೇ ವಾಹನದ ಕಡೆಗೆ ಓಡಬೇಕು ಎಂದು ಅನೇಕ ನೆಟ್ಟಿಗರು ವಾದಿಸಿದ್ದಾರೆ.

ಇಂತಹ ಅಪಘಾತಗಳನ್ನು ತಪ್ಪಿಸಲು ವಾಹನ ಸವಾರರು ಸಂಚಾರ ನಿಯಮಗಳನ್ನು ಅನುಸರಿಸಬೇಕು. ವೇಗದ ಚಾಲನೆ, ರಸ್ತೆ ನಿಯಮಗಳನ್ನು ಪಾಲಿಸದೇ ಇರುವುದು ವಾಹನ ಸವಾರರಿಗೆ ಮತ್ತು ರಸ್ತೆಯಲ್ಲಿರುವ ಇತರ ಸವಾರರು ಮತ್ತು ಪಾದಚಾರಿಗಳಿಗೆ ಮಾರಕವಾಗಬಹುದು.

Exit mobile version