ಮುಂಬೈ: ಜಿಮ್ ಮಾಡಲು ಬಂದಿದ್ದ ಯುವಕನ ಮೇಲೆ ಟ್ರೈನರ್(gym trainer) ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಲುಂದ್‌ನಲ್ಲಿ ಈ ಘಟನೆ ನಡೆದಿದ್ದು, ಸಿಟ್ಟಿನ ಭರದಲ್ಲಿ ಮದ್ಗಲ್‌ನಲ್ಲಿ ಯುವಕನ ತಲೆಗೆ ಹೊಡೆದಿದ್ದಾನೆ. ಪರಿಣಾಮವಾಗಿ ಯುವಕ ತಲೆಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ತನ್ನ ವಿರುದ್ಧ ಜಿಮ್‌ಗೆ ಬರುತ್ತಿದ್ದ ಯುವಕ ಮಾಡಿದ ತಮಾಷೆಯಿಂದ ಸಿಟ್ಟಿಗೆದ್ದು ಜಿಮ್ ಟ್ರೈನರ್ ಹೀಗೆ ಆತನ ತಲೆಗೆ ಬಾರಿಸಿದ್ದಾನೆ ಎಂದು ವರದಿ ಆಗಿದೆ. ಇನ್ನ ಜಿಮ್ ಟ್ರೈನರ್‌ನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಮೂರ್ನಾಲ್ಕು ಮಂದಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಾ, ಹಾಗೇ ತಮಾಶೆ ಮಾಡುತ್ತಿರುತ್ತಾರೆ. ತಕ್ಷಣ ಮದ್ಗಲ್ ಅನ್ನು ಕೈಗೆತ್ತಿಕೊಂಡು ಜಿಮ್ ಟ್ರೈನರ್ ಯುವಕನ ತಲೆಗೆ ಬಾರಿಸಿದ್ದಾರೆ. ತಕ್ಷಣ ಅಲ್ಲಿದ್ದವರು ಆತನನ್ನು ತಡೆಯುವ ಪ್ರಯತ್ನವನ್ನೂ ಮಾಡುತ್ತಾರೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಅಲ್ಲೇ ಕೂರುತ್ತಾನೆ ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಏನಿದು ಮದ್ಗಲ್?
ಮದ್ಗಲ್ ಒಂದು ಜಿಮ್‌ನಲ್ಲಿ ಬಳಸುವ ವ್ಯಾಯಾಮ ಉಪಕರಣವಾಗಿದ್ದು, ಹೆಚ್ಚಾಗಿ ರೆಸ್ಲರ್‌ಗಳು ಕಠಿಣ ವ್ಯಾಯಾಮಕ್ಕಾಗಿ ಈ ಉಪಕರಣಗಳನ್ನು ಬಳಸುತ್ತಾರೆ. ಇದು ಬಹಳ ಭಾರವಾಗಿದ್ದು, ಸಾಂಪ್ರದಾಯಿಕ ಭಾರತೀಯ ವ್ಯಾಯಾಮ ಸಾಧನವಾಗಿದೆ. ಇದು ತುಂಬಾ ಭಾರವಾಗಿರುತ್ತದೆ, ಹೆಚ್ಚಿನ ಕುಸ್ತಿಪಟುಗಳು ತಮ್ಮ ಆರಂಭಿಕ ತರಬೇತಿ ದಿನಗಳಲ್ಲಿ ಅದನ್ನು ಒಂದು ಕೈಯಿಂದ ಹಿಡಿದೆತ್ತಲು ಕೂಡ ಸಾಧ್ಯವಾಗುವುದಿಲ್ಲ. ಇಂತಹ ಸಾಧನದಿಂದ ಆತನ ತಲೆಗೆ ಥಳಿಸಿರುವುದರಿಂದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
Trainer attacks a 20-year-old gym member in Maharashtra's Mulund.
— Vani Mehrotra (@vani_mehrotra) July 19, 2024
The man was hospitalised where his condition is reported to be stable. The accused was arrested.#Maharashtra pic.twitter.com/200ZOrbfI7
ಇದನ್ನು ಜಿಮ್ ಟ್ರೈನರ್ ಯುವಕನ ತಲೆಗೆ ಹೊಡೆಯಲು ಬಳಸಿದ್ದಾನೆ. ಮುಲುಂದ್‌ನಲ್ಲಿರುವ ಫಿಟ್‌ನೆಸ್ ಇಂಟೆಲಿಜೆನ್ಸ್‌ನ ಜಿಮ್‌ನಲ್ಲಿ ಈ ಘಟನೆ ನಡೆದಿದೆ. ಹೀಗೆ ಹಲ್ಲೆಯಿಂದ ಗಾಯಗೊಂಡ ಯುವಕನಿಗೆ ಎಂಆರ್‌ಐ ಸ್ಕ್ಯಾನ್ ಮಾಡಲಾಗಿದ್ದು, ತಲೆಗೆ ಆಳವಾದ ಗಾಯಗಳಾಗಿರುವುದು ತಿಳಿದು ಬಂದಿದೆ. ಹಾಗೆಯೇ ಆತನ ಎಡಭಾಗದ ತಲೆಬುರುಡೆಯಲ್ಲಿ ಪ್ರಾಕ್ಚರ್ ಆಗಿದೆ. ಹಲ್ಲೆಯ ದೃಶ್ಯಾವಳಿಗಳು ಜಿಮ್‌ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಘಟನೆಯ ಬಳಿಕ ಹಲ್ಲೆಗೊಳಗಾದ ಯುವಕ ದೂರು ನೀಡಿದ್ದು, ಪೊಲೀಸರು ಜಿಮ್ ಟ್ರೈನರ್‌ನನ್ನು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಸ್ಯಾಂಡಲ್ವುಡ್ ನಟ ನಟ ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಹಾಗೂ ಆಪ್ತ ಪ್ರಶಾಂತ್ ಪೂಜಾರಿ ಅವರ ಮೇಲೆ ಹಲ್ಲೆ ನಡೆದಿರುವ ಘಟನೆ ನಗರದ ಬನಶಂಕರಿಯ ಕೆ.ಆರ್.ರಸ್ತೆಯಲ್ಲಿ ನಡೆದಿತ್ತು. ಕಿಡಿಗೇಡಿಗಳು ಲಾಂಗ್ ನಲ್ಲಿ ಪ್ರಶಾಂತ್ ಕಾಲಿಗೆ ಹೊಡೆದಿದ್ದಾರೆ. ಕಾಲಿಗೆ 15 ಸ್ಟಿಚ್ ಹಾಕಲಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆಸ್ಪತ್ರೆಗೆ ಬಂದು ಪ್ರಶಾಂತ್ ಹೇಳಿಕೆ ದಾಖಲಿಸಿದ್ದಾರೆ.
ಇದನ್ನೂ ಓದಿ: Babar Azam: 18 ವರ್ಷದ ನೆಟ್ ಬೌಲರ್ ಮುಂದೆ ಪರದಾಡಿದ ಪಾಕ್ ನಾಯಕ ಬಾಬರ್ ಅಜಂ; ವಿಡಿಯೊ ವೈರಲ್