Site icon Vistara News

Viral video: ಮೌಂಟ್ ಎವರೆಸ್ಟ್ ಸೌಂದರ್ಯ ಸೆರೆ ಹಿಡಿದ ಡ್ರೋನ್; ಈ ವಿಡಿಯೊ ನೋಡಿದರೆ ಪರ್ವತ ಏರಿದ ಅನುಭವ!

Viral video

ವಿಶ್ವದ ಅತಿ ಎತ್ತರದ ಪರ್ವತದ ಶಿಖರವಾದ ಮೌಂಟ್ ಎವರೆಸ್ಟ್ ನ (Mount Everest) ಬೇಸ್ ಕ್ಯಾಂಪ್‌ನಿಂದ 3,500 ಮೀಟರ್‌ ಎತ್ತರದಲ್ಲಿ ಮೇಲೆ ಚೀನಾದ (china) ಡ್ರೋನ್ (drone ) ಹಾರುತ್ತಿರುವ ಅಪರೂಪದ ವೈಮಾನಿಕ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಎಕ್ಸ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ಇದು ವೈರಲ್ (Viral video) ಆಗಿದೆ. ಆದರೆ ಇದನ್ನು ಚೀನಾ ನಿರಾಕರಿಸಿದೆ.

ಡಿಜೆಐ ಮಾವಿಕ್ 3 ಡ್ರೋನ್, 8ಕೆಆರ್ ಡಬ್ಲ್ಯೂ ಸಹಯೋಗದೊಂದಿಗೆ ಎವರೆಸ್ಟ್‌ನ ಬೇಸ್ ಕ್ಯಾಂಪ್‌ನಿಂದ ಶಿಖರದವರೆಗೆ ಬೆರಗುಗೊಳಿಸುವ ವೈಮಾನಿಕ ದೃಶ್ಯಗಳನ್ನು ಸೆರೆಹಿಡಿದಿದೆ.

ಮೌಂಟ್ ಎವರೆಸ್ಟ್‌ನಲ್ಲಿರುವ ಕಠಿಣ ಪರಿಸ್ಥಿತಿಯ ನಡುವೆ ಎತ್ತರದ ಶಿಖರದಲ್ಲಿ ಉನ್ನತ ದರ್ಜೆಯ ಡ್ರೋನ್ ಅನ್ನು ಕಳುಹಿಸಿ ಅದನ್ನು ಟ್ರ್ಯಾಕ್ ಮಾಡುವುದು ಸುಲಭವೇನಲ್ಲ. ಈ ಎಲ್ಲ ಪರಿಸ್ಥಿತಿಗಳ ನಡುವೆಯು ಚೀನಾದ ಡ್ರೋನ್ ತಯಾರಕ ಡಿಜೆಐ ತಯಾರಿಸಿದ ಡಿಜೆಐ ಮಾವಿಕ್ 3 ವಿಡಿಯೋ ಸೆರೆ ಹಿಡಿದಿದೆ ಎನ್ನಲಾಗಿದೆ.

ಬೇಸ್ ಕ್ಯಾಂಪ್‌ನಿಂದ 3,500 ಮೀಟರ್‌ ಗಳಿಗಿಂತಲೂ ಎತ್ತರದಲ್ಲಿ ಡ್ರೋನ್ ಈ ವಿಡಿಯೋವನ್ನು ಸೆರೆ ಹಿಡಿದಿದೆ. ಅತ್ಯದ್ಭುತ ವೈಮಾನಿಕ ನೋಟವನ್ನು ಇದು ಸೆರೆ ಹಿಡಿದಿದೆ. ಡಿಜೆಐ ಮಾವಿಕ್ 3ನ ಸಾಮರ್ಥ್ಯವನ್ನು ಇದು ಪ್ರದರ್ಶಿಸಿದೆ. ಚೈನೀಸ್ ಫೋಟೋಗ್ರಫಿ ಪ್ಲಾಟ್‌ಫಾರ್ಮ್ 8ಕೆಆರ್ ಎಡಬ್ಲ್ಯೂ ಸಹಯೋಗದೊಂದಿಗೆ ಈ ಸಾಧನೆಯನ್ನು ಮಾಡಲಾಗಿದೆ ಎನ್ನಲಾಗಿದೆ.


ಎಕ್ಸ್ ನಲ್ಲಿ @yicaichina ಎಂಬ ಹೆಸರಿನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಡ್ರೋನ್ ಎವರೆಸ್ಟ್‌ನ ಹಿಮದಿಂದ ಆವೃತವಾದ ಶಿಖರಗಳ ಮೇಲೆ ಸಂಚರಿಸಿದೆ. ಸ್ಪಷ್ಟವಾದ ನೀಲಿ ಆಕಾಶವನ್ನು ಸೆರೆ ಹಿಡಿಯಲಾಗಿದೆ. ಪರ್ವತಾರೋಹಿಗಳು ಕಾಣಿಸುತ್ತಾರೆ. ಕೆಮರಾವು ಬೇಸ್ ಕ್ಯಾಂಪ್‌ ನ ಸುತ್ತ ಸುತ್ತಿದೆ. ಡೇರೆಗಳು ಭೂದೃಶ್ಯವನ್ನು ತೋರಿಸಿದೆ .

ಇದನ್ನೂ ಓದಿ: Viral News: ಮೃತ ಇಂಜಿನಿಯರ್‌ನನ್ನು ಟ್ರಾನ್ಸ್‌ಫರ್‌ ಮಾಡಿದ ನಗರಾಭಿವೃದ್ಧಿ ಇಲಾಖೆ!

ಬೆರಗುಗೊಳಿಸುವ ದೃಶ್ಯಗಳನ್ನು ಸೆರೆ ಹಿಡಿದಿರುವ ಈ ವಿಡಿಯೋ 192.4 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಒಬ್ಬ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿದ್ದು, ನಾನು ಎವರೆಸ್ಟ್ ಶಿಖರವನ್ನು ಹತ್ತಿದ ಅನುಭವವನ್ನು ಇದು ಕೊಟ್ಟಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಬಳಕೆದಾರರು ಇದು ನಂಬಲಾಗದ್ದು ಎಂದು ತಿಳಿಸಿದ್ದಾರೆ.

Exit mobile version