Site icon Vistara News

Viral video: ಮೂಡಿಗೆರೆಯ ಮನೆಯಲ್ಲಿ ಬೆಕ್ಕಿನ ಮರಿ ನುಂಗಿದ ನಾಗರಹಾವು!

Viral video

ಚಿಕ್ಕಮಗಳೂರು: ಯುಗಾದಿಯಂದು ಮೂಡಿಗೆರೆ ತಾಲೂಕಿನ ಮನೆಯೊಂದರಲ್ಲಿ ನಾಗರಹಾವು ಬೆಕ್ಕಿನ ಮರಿ ನುಂಗಿದ ಘಟನೆ (Viral video) ನಡೆದಿದೆ. ಮಂಚದ ಕೆಳಗಿದ್ದ ಬೆಕ್ಕಿನ ಮರಿಯನ್ನು ನಾಗರಹಾವು ನುಂಗಿ ಹೊರಬಂದು ಪರದಾಡುತ್ತಿದ್ದಾಗ ಉರಗತಜ್ಞ ರಕ್ಷಣೆ ಮಾಡಿದ್ದಾರೆ.

ಮೂಡಿಗೆರೆ ತಾಲೂಕಿನ ದೀಕ್ಷಿತ್ ಎಂಬುವವರ ಮನೆಯಲ್ಲಿ ಮಂಗಳವಾರ ಬೆಕ್ಕಿನ ಮರಿಯನ್ನು ನಾಗರಹಾವು ನುಂಗಿದೆ. ನಂತರ ಮನೆಯ ಮುಂಭಾಗದಲ್ಲಿ ಸಂಚರಿಸಲಾಗದೆ ಪರದಾಡುತ್ತಿತ್ತು. ಈ ವೇಳೆ ಉರಗತಜ್ಞ ಆರೀಫ್ ಆಗಮಿಸಿ ಬೆಕ್ಕಿನ ಮರಿಯನ್ನು ಕಕ್ಕಿಸಿದ್ದಾರೆ. ನಂತರ ಹಾವನ್ನು ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಭಾಗದಲ್ಲಿ ಬಿಸಿಲ ತಾಪಕ್ಕೆ ಆಹಾರ ಅರಸಿ ಮನೆಗಳ ಬಳಿ ಹಾವುಗಳು ಬರುವುದು ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ | Water From Air: ಗಾಳಿಯಿಂದಲೇ ನೀರು ಉತ್ಪಾದನೆ! ಬೆಂಗಳೂರು ಸ್ಟಾರ್ಟಪ್‌ನ ಕ್ರಾಂತಿಕಾರಿ ಹೆಜ್ಜೆ!

ಕಾರಿನಲ್ಲಿ ಪ್ರತ್ಯಕ್ಷವಾದ ನಾಗಪ್ಪ

ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಹೋತನಹಳ್ಳಿಪುರ ಗ್ರಾಮದಲ್ಲಿ ಮನೆ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿ ಆತಂಕ ಮೂಡಸಿದ ಘಟನೆ ನಡೆದಿದೆ. ಬಿಸಿಲಿನ ತಾಪ ತಾಳಲಾರದೆ ಕಾರಿನ ಇಂಜಿನ್‌ನಲ್ಲಿ ಅಡಗಿದ್ದ ನಾಗರ ಹಾವನ್ನು ಸೆರೆ ಹಿಡಿಯಲಾಗಿದೆ. ಗ್ರಾಮದ ಯದುಕುಮಾರ್ ಎಂಬುವವರ ಸ್ವಿಫ್ಟ್ ಕಾರಿನಲ್ಲಿ ಅಡಗಿದ್ದ ನಾಗರ ಹಾವನ್ನು ಉರಗತಜ್ಞ ಸ್ನೇಕ್ ಬಾಬು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

Exit mobile version