ರಾಮನಗರ: ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ (CP Yogeshwara) ಪುತ್ರಿ ನಿಶಾ (Nisha Yogeshwara) ಅವರು ತಮ್ಮ ತಂದೆಯ ವಿರುದ್ಧ ರೊಚ್ಚಿಗೆದ್ದಿದ್ದು, ಹಲವಾರು ವಿಡಿಯೋಗಳ ಮೂಲಕ ಇನ್‌ಸ್ಟಗ್ರಾಂನಲ್ಲಿ (Social media) ಸಾರ್ವಜನಿಕವಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಂದೆ ತಮ್ಮ ಮೇಲೆ ಹಲ್ಲೆ (Assault) ಮಾಡುತ್ತಾರೆ, ತಮ್ಮ ಕುಟುಂಬವನ್ನು, ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ನಿಶಾ (ಈ ಪೋಸ್ಟ್‌ಗಳಲ್ಲಿ ಆರೋಪಿಸಿದ್ದಾರೆ. ಅವರ ಈ ಪೋಸ್ಟ್‌ಗಳು ವೈರಲ್ (viral video) ಆಗಿವೆ.
ನಿಶಾ ಯೋಗೇಶ್ವರ್ ತಮ್ಮ ತಂದೆಯಿಂದ ದೂರವಾಗಿದ್ದು, ಕಾಂಗ್ರೆಸ್ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ತಂದೆಯೇ ತಮ್ಮನ್ನು ದೂರವಿಟ್ಟಿದ್ದು, ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ. ಕುಟುಂಬದಿಂದ ತಮ್ಮನ್ನು ತಂದೆಯೇ ದೂರ ಮಾಡಿದ್ದಲ್ಲದೆ, ಕಿರಿಕಿರಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಯೋಗೇಶ್ವರ್ ಮಕ್ಕಳಾದ ತಮ್ಮನ್ನು ದೂರ ಮಾಡಿದ್ದಾರೆ. ಮನೆಗೆ ಹೋದರೆ ತಮ್ಮ ಮೇಲೆ ಹಲ್ಲೆ ಮಾಡ್ತಾರೆ. ಅವರನ್ನು ಮಾತನಾಡಿಸಲು ಹೋದರೆ ರಪರಪ ಎಂದು ಹೊಡೆಯುತ್ತಾರೆ. ಏನಾರೂ ಕೇಳಿದರೆ, ನಮ್ಮ ಬಳಿ ಬರಬೇಡ, ಬೇಕಾದರೆ ಭಿಕ್ಷೆ ಮಾಡಿಕೊಂಡು ಜೀವನ ಮಾಡು ಎನ್ನುತ್ತಾರೆ. ನಮಗೆ ತಂದೆಯ ಪ್ರೀತಿ ಸಿಗಲಿಲ್ಲ, ಅವರು ಆದರ್ಶ ಅಪ್ಪನಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ರಾಮಾಯಣದ ಕಥೆ ಹೇಳಿ, ಕುಟುಂಬದಲ್ಲಿರುವ ಜಗಳವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.
ʼನಿಶಾ ಯೋಗೇಶ್ವರ್ʼ ಎಂದು ಬಳಸುತ್ತಿರುವ ತನ್ನ ಹೆಸರಿನಲ್ಲಿ ʼಯೋಗೇಶ್ವರ್ʼ ಹೆಸರು ಬಳಸದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಧಮಕಿ ಹಾಕುತ್ತಿದ್ದಾರೆ. ತನ್ನ ತಾಯಿ ಯೋಗೇಶ್ವರ್ ಅವರ ಚುನಾವಣೆ ಪ್ರಚಾರಕ್ಕಾಗಿ ತೆರಳಿದ್ದರು. ಆದರೆ ತಂದೆ, ತಾಯಿಗೆ ಕಪಾಳಮೋಕ್ಷ ಮಾಡಿದರು. ತನ್ನ ತಮ್ಮನಿಗೂ ಥಳಿಸಿದ್ದಾರೆ. ಮೊದಲ ಪತ್ನಿ ಹಾಗೂ ಮಕ್ಕಳನ್ನು ಯೋಗೇಶ್ವರ್ ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಅಳಲು ತೋಡಿಕೊಂಡಿದ್ದಾಎ.
20 ವರ್ಷ ಹಿಂದೆ ನಮಗೆ ಹೇಳದೆ ಕೇಳದೆ ತಂದೆ ಬೇರೆ ಸಂಸಾರ ಕಟ್ಟಿಕೊಂಡರು. ಆದರ್ಶ ಮಗಳಾಗು ಎಂದು ನನಗೆ ಹೇಳುತ್ತಾರೆ. ಅವರು ಆದರ್ಶ ತಂದೆಯಾಗಬೇಕಲ್ಲವೇ? ಮೊದಲನೇ ಮದುವೆಯ ಮಕ್ಕಳನ್ನು ಬೆಳೆಸಬೇಕಲ್ಲವೇ? ಇಂಥ ತಂದೆಯ ಜೊತೆಗೆ ಹೇಗಿರಲಿ? ಎಂದು ಯೋಗೇಶ್ವರ್ ಎರಡನೇ ಪತ್ನಿ, ಮಕ್ಕಳ ಬಗ್ಗೆ ಪ್ರಸ್ತಾಪ ಮಾಡಿ ಆಕ್ಷೇಪಿಸಿದ್ದಾರೆ.
ಇದನ್ನೂ ಓದಿ: Viral Video: ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್ ವಿಡಿಯೋ ವೈರಲ್