Site icon Vistara News

Viral Video: ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ! ವಿಡಿಯೊ ನೋಡಿ

Viral Video

ಮುಂಬಯಿ: ಚಲಿಸುತ್ತಿರುವ ರೈಲಿನಲ್ಲಿ (train) ಅಪಾಯಕಾರಿಯಾಗಿ ಸಾಹಸ ಮಾಡುತ್ತ ರೀಲ್ (reel) ಮಾಡಿ ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋ ವೈರಲ್ (Viral Video) ಆದ ಬಳಿಕ ವ್ಯಕ್ತಿಯನ್ನು ಪತ್ತೆ ಹಚ್ಚಲು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಅಧಿಕಾರಿಗಳಿಗೆ ಸೆಂಟ್ರಲ್ ರೈಲ್ವೆ (CR) ಆದೇಶ ನೀಡಿದೆ.

ಮುಂಬಯಿನ (mumbai) ಸೆವ್ರಿ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಚಲಿಸುತ್ತಿರುವ ಲೋಕಲ್ ರೈಲಿನಲ್ಲಿ ಸಾಹಸ ಪ್ರದರ್ಶಿಸಿದ್ದಾನೆ. ಇದರ ವಿಡಿಯೋ ವ್ಯಕ್ತಿಯನ್ನು ಪತ್ತೆಹಚ್ಚಲು ಹುಡುಕಾಟವನ್ನು ಪ್ರಾರಂಭಿಸಲಾಗಿದೆ.

ಈ ರೀತಿಯ ಸಾಹಸ ಕಾರ್ಯ ಮಾಡದಂತೆ ಸೆಂಟ್ರಲ್ ರೈಲ್ವೆ (ಸಿಆರ್)ನಿಂದ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಹಾರ್ಬರ್ ಲೈನ್ ನೆಟ್‌ವರ್ಕ್‌ನಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ಕೆಲವು ನೆಟಿಜನ್‌ಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು.

ಬಳಿಕ ಸಿಆರ್ ಪ್ರಕರಣವನ್ನು ದಾಖಲಿಸಲು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಗೆ ನಿರ್ದೇಶನ ನೀಡಿದ ಬಳಿಕ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಈ ಅಪಾಯಕಾರಿ ಕ್ರಮಗಳು ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡಬಹುದು. ಸಾಹಸ ಪ್ರದರ್ಶನ ಇತರ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಇಂತಹ ವ್ಯಕ್ತಿಗಳು ಇತರ ಪ್ರಯಾಣಿಕರಿಗೆ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. ಇಂತಹ ಅಸುರಕ್ಷಿತ ಅಭ್ಯಾಸಗಳನ್ನು ನಡೆಸದೇ ಇರಲು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಪ್ರಯಾಣಿಕರ ಸುರಕ್ಷತೆಯು ಭಾರತೀಯ ರೈಲ್ವೆಗೆ ಮೊದಲ ಆದ್ಯತೆಯಾಗಿದೆ. ಸುರಕ್ಷಿತ ಪ್ರಯಾಣದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತಾರೆ ಎಂದು ಸಿಆರ್ ಹೇಳಿದೆ.

ಇದನ್ನೂ ಓದಿ: Viral Video: ತರಕಾರಿ ಮಾರುವವಳ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ರೈಲುಗಳು ಅಥವಾ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾರಾದರೂ ಇಂತಹ ಸಾಹಸ ಪ್ರದರ್ಶನಗಳಲ್ಲಿ ತೊಡಗಿಸಿಕೊಂಡರೆ ತಕ್ಷಣವೇ ಮೊ.ಸಂಖ್ಯೆ 9004410735 ಅನ್ನು ಸಂಪರ್ಕಿಸುವ ಮೂಲಕ ವರದಿ ಮಾಡುವಂತೆ ರೈಲ್ವೆ ನಾಗರಿಕರು ಮತ್ತು ಪ್ರಯಾಣಿಕರಿಗೆ ಮನವಿ ಮಾಡಿದೆ.

Exit mobile version