Viral Video: ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ! ವಿಡಿಯೊ ನೋಡಿ - Vistara News

ವೈರಲ್ ನ್ಯೂಸ್

Viral Video: ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ! ವಿಡಿಯೊ ನೋಡಿ

ಮುಂಬಯಿನ ಸೆವ್ರಿ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಚಲಿಸುತ್ತಿರುವ ಲೋಕಲ್ ರೈಲಿನಲ್ಲಿ ಸಾಹಸ ಪ್ರದರ್ಶಿಸಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ವ್ಯಕ್ತಿಯನ್ನು ಪತ್ತೆಹಚ್ಚಲು ರೈಲ್ವೇ ಅಧಿಕಾರಿಗಳು ಹುಡುಕಾಟವನ್ನು ಪ್ರಾರಂಭಿಸಿದ್ದಾರೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಚಲಿಸುತ್ತಿರುವ ರೈಲಿನಲ್ಲಿ (train) ಅಪಾಯಕಾರಿಯಾಗಿ ಸಾಹಸ ಮಾಡುತ್ತ ರೀಲ್ (reel) ಮಾಡಿ ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋ ವೈರಲ್ (Viral Video) ಆದ ಬಳಿಕ ವ್ಯಕ್ತಿಯನ್ನು ಪತ್ತೆ ಹಚ್ಚಲು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಅಧಿಕಾರಿಗಳಿಗೆ ಸೆಂಟ್ರಲ್ ರೈಲ್ವೆ (CR) ಆದೇಶ ನೀಡಿದೆ.

ಮುಂಬಯಿನ (mumbai) ಸೆವ್ರಿ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಚಲಿಸುತ್ತಿರುವ ಲೋಕಲ್ ರೈಲಿನಲ್ಲಿ ಸಾಹಸ ಪ್ರದರ್ಶಿಸಿದ್ದಾನೆ. ಇದರ ವಿಡಿಯೋ ವ್ಯಕ್ತಿಯನ್ನು ಪತ್ತೆಹಚ್ಚಲು ಹುಡುಕಾಟವನ್ನು ಪ್ರಾರಂಭಿಸಲಾಗಿದೆ.

ಈ ರೀತಿಯ ಸಾಹಸ ಕಾರ್ಯ ಮಾಡದಂತೆ ಸೆಂಟ್ರಲ್ ರೈಲ್ವೆ (ಸಿಆರ್)ನಿಂದ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಹಾರ್ಬರ್ ಲೈನ್ ನೆಟ್‌ವರ್ಕ್‌ನಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ಕೆಲವು ನೆಟಿಜನ್‌ಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು.

ಬಳಿಕ ಸಿಆರ್ ಪ್ರಕರಣವನ್ನು ದಾಖಲಿಸಲು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಗೆ ನಿರ್ದೇಶನ ನೀಡಿದ ಬಳಿಕ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಈ ಅಪಾಯಕಾರಿ ಕ್ರಮಗಳು ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡಬಹುದು. ಸಾಹಸ ಪ್ರದರ್ಶನ ಇತರ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಇಂತಹ ವ್ಯಕ್ತಿಗಳು ಇತರ ಪ್ರಯಾಣಿಕರಿಗೆ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. ಇಂತಹ ಅಸುರಕ್ಷಿತ ಅಭ್ಯಾಸಗಳನ್ನು ನಡೆಸದೇ ಇರಲು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಪ್ರಯಾಣಿಕರ ಸುರಕ್ಷತೆಯು ಭಾರತೀಯ ರೈಲ್ವೆಗೆ ಮೊದಲ ಆದ್ಯತೆಯಾಗಿದೆ. ಸುರಕ್ಷಿತ ಪ್ರಯಾಣದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತಾರೆ ಎಂದು ಸಿಆರ್ ಹೇಳಿದೆ.

ಇದನ್ನೂ ಓದಿ: Viral Video: ತರಕಾರಿ ಮಾರುವವಳ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ರೈಲುಗಳು ಅಥವಾ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾರಾದರೂ ಇಂತಹ ಸಾಹಸ ಪ್ರದರ್ಶನಗಳಲ್ಲಿ ತೊಡಗಿಸಿಕೊಂಡರೆ ತಕ್ಷಣವೇ ಮೊ.ಸಂಖ್ಯೆ 9004410735 ಅನ್ನು ಸಂಪರ್ಕಿಸುವ ಮೂಲಕ ವರದಿ ಮಾಡುವಂತೆ ರೈಲ್ವೆ ನಾಗರಿಕರು ಮತ್ತು ಪ್ರಯಾಣಿಕರಿಗೆ ಮನವಿ ಮಾಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಬಾಂಬ್‌ ಇಡಲು ಮುಸ್ಲಿಮರು ಬೇಕು, ಉನ್ನತ ಸ್ಥಾನ ಮಾತ್ರ ಹಿಂದೂಗಳಿಗೆ; ಟಿಎಂಸಿ ನಾಯಕನ ಸ್ಫೋಟಕ ಹೇಳಿಕೆ!

Viral Video: ಬಾಂಬ್ ತಯಾರಿಕೆಯಿಂದ ಪ್ರಾರಂಭಿಸಿ ನಾವು ಮುಸ್ಲಿಮರು ಎಲ್ಲಾ ಕೊಳಕು ಕೆಲಸಗಳನ್ನು ಮಾಡುತ್ತಾರೆ. ಆದರೆ ಅಧಿಕಾರ ಮಾತ್ರ ಹಿಂದೂಗಳಿಗೆ ಎಂದು ತೃಣಮೂಲ ಕಾಂಗ್ರೆಸ್‌ ವಿರುದ್ಧ ಆ ಪಕ್ಷದ ಮುಸ್ಲಿಂ ನಾಯಕರೇ ದನಿ ಎತ್ತಿದ್ದಾರೆ. ಅವರ ಈ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ಸ್ವಂತ ಬೂತ್‌ಗಳಲ್ಲಿ ಗೆಲ್ಲಲು ಸಾಧ್ಯವಿಲ್ಲದವರು ಪಕ್ಷವನ್ನು ಮುನ್ನಡೆಸಲು ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ? ಹಿಂದೂಗಳು ಎಲ್ಲಾ ಕೋರ್ ಕಮಿಟಿಗಳ ಚುಕ್ಕಾಣಿ ಹಿಡಿದಿದ್ದಾರೆ. ನಾವು ಅದರ ಬಗ್ಗೆ ಯೋಚಿಸಬೇಕಾಗಿದೆ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದರು.

VISTARANEWS.COM


on

By

Viral Video
Koo

ಹಿಂದೂಗಳು (hindu) ಪಕ್ಷದ ಉನ್ನತ ಸ್ಥಾನಗಳನ್ನು ಕಸಿದುಕೊಳ್ಳುತ್ತಿದ್ದಾರೆ ಮತ್ತು ಮುಸ್ಲಿಮರು (muslim) ಬಾಂಬ್ ತಯಾರಿಸುವ ಕೊಳಕು ಕೆಲಸ ಮಾಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನ (TMC) ಅಲ್ಪಸಂಖ್ಯಾತ ಮೋರ್ಚಾ ನಾಯಕ ಮೊಹಮ್ಮದ್ ಯೂನಸ್ ಆರೋಪಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಸೈಂಥಿಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಇದರ ವಿಡಿಯೋದಲ್ಲಿ ಯೂನಸ್ ಅವರು ಅಲ್ಪಸಂಖ್ಯಾತರು ಎಲ್ಲಿ ಕೆಲಸ ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಬಹುಸಂಖ್ಯಾತ ಹಿಂದೂಗಳು ಪಕ್ಷದ ಎಲ್ಲಾ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ. ನಾವು ಅವರ ಕಣ್ಣುಗಳಲ್ಲಿ ಇರುವುದನ್ನು ನಮ್ಮ ಅಸ್ತಿತ್ವವನ್ನು ಅವರಿಗೆ ತೋರಿಸಬೇಕಾಗಿದೆ ಎಂದು ಹೇಳಿದರು.

ಸ್ವಂತ ಬೂತ್‌ಗಳಲ್ಲಿ ಗೆಲ್ಲಲು ಸಾಧ್ಯವಿಲ್ಲದವರು ಪಕ್ಷವನ್ನು ಮುನ್ನಡೆಸಲು ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ? ಹಿಂದೂಗಳು ಎಲ್ಲಾ ಕೋರ್ ಕಮಿಟಿಗಳ ಚುಕ್ಕಾಣಿ ಹಿಡಿದಿದ್ದಾರೆ. ನಾವು ಅದರ ಬಗ್ಗೆ ಯೋಚಿಸಬೇಕಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಂಬ್ ತಯಾರಿಕೆಯಿಂದ ಪ್ರಾರಂಭಿಸಿ ನಾವು ಮುಸ್ಲಿಮರು ಎಲ್ಲಾ ಕೊಳಕು ಕೆಲಸಗಳನ್ನು ಮಾಡುತ್ತೇವೆ ಎಂದಿರುವ ಅವರ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಚಿಂತನೆಯೂ ನಡೆಯುತ್ತಿದೆ.
ಈ ಕುರಿತು ಮಾತನಾಡಿದ ಬಿಜೆಪಿ ನಾಯಕ ಧ್ರುಬಾ ಸಹಾ, ಅವರು ಬಾಂಬ್‌ಗಳನ್ನು ತಯಾರಿಸುತ್ತಾರೆ, ಬೂತ್‌ಗಳನ್ನು ವಶಪಡಿಸಿಕೊಳ್ಳುತ್ತಾರೆ ಮತ್ತು ಟಿಎಂಸಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಕೊಲ್ಲುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಮೇಯರ್ ಫಿರ್ಹಾದ್ ಹಕೀಮ್ ಅವರು ಜನರನ್ನು ಇಸ್ಲಾಂಗೆ ಮತಾಂತರಿಸುವಂತೆ ಮುಕ್ತ ಕರೆ ನೀಡಿರುವುದನ್ನೂ ಬಿಜೆಪಿ ನಾಯಕ ಸಹಾ ಪ್ರಸ್ತಾಪಿಸಿದ್ದಾರೆ.

ಫಿರ್ಹಾದ್ ಹಕೀಮ್ ಅವರು ಇತ್ತೀಚೆಗೆ ನಡೆದ ಅಖಿಲ ಭಾರತ ಕುರಾನ್ ಸ್ಪರ್ಧೆಯಲ್ಲಿ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಹುಟ್ಟದೇ ಇರುವವರು ದುರದೃಷ್ಟದಿಂದ ಜನಿಸಿದರು, ನಾವು ಅವರಿಗೆ ಮತಾಂತರಕ್ಕೆ ಕರೆಯುತ್ತೇವೆ. ಅಲ್ಲಾನನ್ನು ಸಂತೋಷಪಡಿಸಿ ಎಂದು ಹೇಳುತ್ತೇವೆ ಎಂದಿದ್ದರು.

ಮುಸ್ಲಿಮೇತರರಲ್ಲಿ ನಾವು ಇಸ್ಲಾಂ ಧರ್ಮವನ್ನು ಹರಡಬೇಕಾಗಿದೆ. ನಾವು ಯಾರನ್ನಾದರೂ ಇಸ್ಲಾಮಿನ ಹಾದಿಯಲ್ಲಿ ತರಲು ಸಾಧ್ಯವಾದರೆ, ನಂಬಿಕೆಯ ಹರಡುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ನಾವು ನಿಜವಾದ ಮುಸ್ಲಿಮರೆಂದು ಸಾಬೀತುಪಡಿಸುತ್ತೇವೆ ಎಂದು ಅವರು ತಿಳಿಸಿದ್ದರು. ಸಾವಿರಾರು ಜನರು ನಾವು ಧರಿಸುವ ಸ್ಕಲ್ ಕ್ಯಾಪ್ ಧರಿಸಿ ಕುಳಿತಾಗ ನಾವು ಶಕ್ತಿಯನ್ನು ಪ್ರದರ್ಶಿಸಿದಂತಾಗುತ್ತದೆ. ಇದು ಏಕತೆಯನ್ನು ತೋರಿಸುತ್ತದೆ ಮತ್ತು ಯಾರೂ ನಮ್ಮನ್ನು ಬಗ್ಗುಬಡಿಯಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದರು.


ಇಸ್ಲಾಂ ಧರ್ಮದಲ್ಲಿ ಜನಿಸಿದ ಕಾರಣ ಪ್ರವಾದಿ ಮತ್ತು ಅಲ್ಲಾ ನಮಗೆ ಜನ್ನತ್‌ಗೆ ಸ್ಪಷ್ಟವಾದ ಮಾರ್ಗವನ್ನು ಒದಗಿಸಿದ್ದಾರೆ. ನಾವು ಯಾವುದೇ ಪಾಪಗಳನ್ನು ಮಾಡದಿದ್ದರೆ, ನಾವು ನೇರವಾಗಿ ಜನ್ನತ್‌ಗೆ ಹೋಗುತ್ತೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: Viral Video: ರೈಲ್ವೆ ಸೇತುವೆ ಮೇಲೆ ಫೋಟೊಶೂಟ್‌; ರೈಲು ಬಂದಾಗ 90 ಅಡಿ ಆಳಕ್ಕೆ ಜಿಗಿದ ದಂಪತಿ!

ಸಾರ್ವಜನಿಕ ಥಳಿತಕ್ಕೆ ಸಮರ್ಥನೆ

ಮುಸ್ಲಿಂ ರಾಷ್ಟ್ರದಲ್ಲಿ ಮಹಿಳೆಯ ಮೇಲೆ ತಾಲಿಬಾನ್ ಮಾದರಿಯ ಸಾರ್ವಜನಿಕ ಥಳಿತವನ್ನು ಟಿಎಂಸಿ ಶಾಸಕ ಹಮೀದುಲ್ ರೆಹಮಾನ್ ಇತ್ತೀಚೆಗೆ ಸಮರ್ಥಿಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದಲ್ಲಿ ಸಾರ್ವಜನಿಕವಾಗಿ ಮಹಿಳೆಯ ಮೇಲೆ ಥಳಿಸಲಾಗಿತ್ತು.

ಪತಿ ಇಲ್ಲದ ಸಮಯದಲ್ಲಿ ಮಹಿಳೆ ಅನೈತಿಕ ಕೆಲಸ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಗ್ರಾಮಸ್ಥರು ಸಭೆ ನಡೆಸಿ ಸಾಮೂಹಿಕವಾಗಿ ಆಕೆಯನ್ನು ಥಳಿಸಿದ್ದರು. ಘಟನೆ ನಡೆದ ಪ್ರದೇಶ ‘ಮುಸ್ಲಿಂ ರಾಷ್ಟ್ರ’ ಎಂದು ಹಮೀದುಲ್ ರೆಹಮಾನ್ ಹೇಳಿಕೊಂಡಿದ್ದರು.

Continue Reading

ಕ್ರಿಕೆಟ್

Harbhajan Singh : ಅಂಗವಿಕಲರಿಗೆ ಅವಮಾನ ಮಾಡಿ ಕ್ಷಮೆ ಕೋರಿದ ಹರ್ಭಜನ್​ ಸಿಂಗ್​!

Harbhajan Singh : ಮಾನಸಿ ಜೋಶಿ ಅವರು ಆಟಗಾರರನ್ನು ಟೀಕಿಸಿದ್ದರು. ಅಲ್ಲದೆ, ದೈಹಿಕವಾಗಿ ವಿಶೇಷಚೇತನರನ್ನು ಅಣಕಿಸದಂತೆ ಕೋರಿಕೊಂಡಿದ್ದರು. ಹರ್ಭಜನ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದರು ಮತ್ತು ಆಟಗಾರರು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Harbhajan Singh
Koo

ನವದೆಹಲಿ: ಲೆಜೆಂಡ್ಸ್ ವಿಶ್ವ ಕಪ್​ ಗೆದ್ದ ಖುಷಿಯಲ್ಲಿ ಅಂಗವಿಕಲರ ರೀತಿ ಡಾನ್ಸ್​ ಮಾಡಿದ್ದಕ್ಕೆ ಟೀಕೆಗಳನ್ನು ಎದುರಿಸಿದ್ದ ಭಾರತ ತಂಡದ ಮಾಜಿ ಸ್ಪಿನ್ನರ್​​ ಹರ್ಭಜನ್​ ಸಿಂಗ್ (Harbhajan Singh) ಕ್ಷಮೆ ಕೋರಿದ್ದಾರೆ. ಅವರು ಮಾಡಿರುವ ‘ತೌಬಾ-ತೌಬಾ’ ರೀಲ್ ಟೀಕೆಗಳನ್ನು ಎದುರಿಸಿದ ನಂತರ ಅವರು ಕ್ಷಮೆ ಕೋರಬೇಕಾಯಿತು. ಪ್ಯಾರಾ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಅವರು ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಅವರ ಕ್ರಮವನ್ನು ಟೀಕಿಸಿದ್ದರು. ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್​ನಲ್ಲಿ ಜಯಗಳಿಸಿದ ನಂತರ ಭಾರತ ಚಾಂಪಿಯನ್ಸ್ ನಾಯಕ ಸಾಮಾಜಿಕ ಮಾಧ್ಯಮದಲ್ಲಿ ಉಲ್ಲಾಸದ ವೀಡಿಯೊ ಹಂಚಿಕೊಂಡಿದ್ದರು. ಅದರಲ್ಲಿ ಯುವರಾಜ್ ಸಿಂಗ್, ರೈನಾ, ಹರ್ಭಜನ್ ಸಿಂಗ್ ಮತ್ತು ಗುರ್ಕೀರತ್ ಸಿಂಗ್ ಕುಂಟುತ್ತಾ ಡಾನ್ಸ್ ಮಾಡಿದ್ದರು. ಇದು ಟೀಕೆಗೆ ಒಳಗಾಯಿತು.

15 ದಿನಗಳ ಲೆಜೆಂಡ್ಸ್ ಕ್ರಿಕೆಟ್​ ಬಳಿಕ ದೇಹದ ಪ್ರತಿಯೊಂದು ಭಾಗವೂ ನೋಯುತ್ತಿದೆ ಎಂಬ ಅರ್ಥದ ಹಾಡಿಗೆ ಡಾನ್ಸ್ ಮಾಡಿದ್ದರು. ಅದನ್ನು ವಿಕ್ಕಿ ಕೌಶಲ್ ಮತ್ತು ಗಾಯಕ ಕರಣ್ ಔಜ್ಲಾ ಗೆ ಟ್ಯಾಗ್ ಮಾಡಿದ್ದರು. ಸತತ ಕ್ರಿಕೆಟ್ ವೇಳಾಪಟ್ಟಿಯು ನಮ್ಮ ದೇಹದ ಮೇಲೆ ಪರಿಣಾಮ ಬೀರಿದೆ. ನಮ್ಮ ದೇಹದ ಭಾಗಗಳು ನೋಯುತ್ತಿವೆ ಎಂದು ಭಾರತದ ಮಾಜಿ ಆಟಗಾರ ವಿವರಿಸಿದ್ದರು. ಆದಾಗ್ಯೂ, ಮಾನಸಿ ಜೋಶಿ ಅವರು ಆಟಗಾರರನ್ನು ಟೀಕಿಸಿದ್ದರು. ಅಲ್ಲದೆ, ದೈಹಿಕವಾಗಿ ವಿಶೇಷಚೇತನರನ್ನು ಅಣಕಿಸದಂತೆ ಕೋರಿಕೊಂಡಿದ್ದರು. ಹರ್ಭಜನ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದರು ಮತ್ತು ಆಟಗಾರರು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಚಾಂಪಿಯನ್​ಶಿಪ್​ ಗೆದ್ದ ನಂತರ ನಾವು ಮಾಡಿದ ವಿಡಿಯೊ ಬಗ್ಗೆ ದೂರು ನೀಡುತ್ತಿರುವ ನಮ್ಮ ಜನರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ನಾವು ಯಾರ ಭಾವನೆಗಳನ್ನೂ ನೋಯಿಸಲು ಬಯಸಲಿಲ್ಲ. ನಾವು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಗೌರವಿಸುತ್ತೇವೆ. ಈ ವೀಡಿಯೊ 15 ದಿನಗಳ ಕಾಲ ಕ್ರಿಕೆಟ್ ಆಡಿದ ನಂತರ ನಮ್ಮ ದೇಹಕ್ಕೆ ಆಗಿರುವ ನೋವನ್ನು ಹೇಳಲು ಬಯಸಿದೆ. ನಾವು ಯಾರನ್ನೂ ಅವಮಾನಿಸಲು ಅಥವಾ ನೋಯಿಸಲು ಪ್ರಯತ್ನಿಸುತ್ತಿಲ್ಲ. ನಾವು ಏನಾದರೂ ತಪ್ಪು ಮಾಡಿದ್ದೇವೆ ಎಂದು ಜನರು ಭಾವಿಸಿದರೆ. ನನ್ನ ಕಡೆಯಿಂದ ನಾನು ಹೇಳಬಹುದಾದುದೆಂದರೆ ಎಲ್ಲರಿಗೂ ಕ್ಷಮಿಸಿ. ಇದನ್ನು ಇಲ್ಲಿಗೆ ನಿಲ್ಲಿಸಿ ಮುಂದೆ ಸಾಗೋಣ ಎಂದು ಹರ್ಭಜನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಪರ್ಧಾ ಪಟ್ಟಿಯಲ್ಲಿರುವ ಕ್ರೀಡೆಗಳು ಯಾವುವು? ಇವುಗಳಲ್ಲಿ ಅತ್ಯಂತ ಪ್ರಾಚೀನ ಕ್ರೀಡೆಗಳು ಯಾವುದೆಲ್ಲ?

ಮಾನಸಿಗೆ ಬೇಸರ

ಅಂಗವಿಕಲ ವ್ಯಕ್ತಿಗಳ ನಡಿಗೆಯ ರೀತಿಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಮಾನಸಿ ಆಟಗಾರರನ್ನು ತೀವ್ರವಾಗಿ ಟೀಕಿಸಿದ್ದರು. “ನಿಮ್ಮಂಥ ಕ್ರೀಡಾಪಟುಗಳಿಂದ ಹೆಚ್ಚಿನ ಜವಾಬ್ದಾರಿಯ ನಡೆಯನ್ನು ಬಯಸುತ್ತೇನೆ. ದಯವಿಟ್ಟು ಅಂಗವಿಕಲರ ನಡಿಗೆಯನ್ನು ಅಪಹಾಸ್ಯ ಮಾಡಬೇಡಿ. ಇದು ತಮಾಷೆಯಲ್ಲ.” ಎಂದು ಮಾನಸಿ ಇನ್ಸ್ಟಾಗ್ರಾಮ್ ಪೋಸ್ಟ್​ಗೆ ಕಾಮೆಂಟ್ ಮಾಡಿದ್ದರು.

“ನಿಮ್ಮ ನಡವಳಿಕೆಯಿಂದ ಎಷ್ಟು ಹಾನಿಯಾಗಬಹುದು ಎಂದು ನಿಮಗೆ ತಿಳಿದಿಲ್ಲ. ಸುತ್ತಮುತ್ತಲಿನ ಜನರಿಂದ ನೀವು ಪಡೆಯುತ್ತಿರುವ ಮೆಚ್ಚುಗೆ ನೋಡಲು ಬೇಸರವಾಗಿದೆ. ನಿಮ್ಮ ಈ ರೀಲ್ ವಿಶೇಷಚೇತನರ ನಡಿಗೆಯ ರೀತಿಯನ್ನು ಗೇಲಿ ಮಾಡಿದೆ. ಈ ರೀಲ್ ಅನ್ನು ಬಳಸುವ ಮೂಲಕ ವಿಶೇಷಚೇತನ ಚಿಕ್ಕ ಮಕ್ಕಳಿಗೆ ಬೇಸರವಾಗಲಿದೆ. ನಿಮ್ಮಲ್ಲಿ ಯಾರಾದರೂ ಕ್ರೀಡಾಪಟುಗಳು ವಿಶೇಷಚೇತನ ಸಮುದಾಯ ಸೇವೆಯನ್ನು ಮಾಡಿದ್ದರೆ ನೀವು ರೀಲ್ ಮಾಡುತ್ತಿರಲಿಲ್ಲ. ಈ ಕ್ರೀಡಾಪಟುಗಳ ಪಿಆರ್ ಏಜೆನ್ಸಿಗಳು ಈ ರೀಲ್ ಅನ್ನು ಸೋಶಿಯಲ್ ಮೀಡಿಯಾಗೆ ಅಪ್​ಲೋಡ್​ ಮಾಡಿದವು ಎಂಬುದೇ ಅಚ್ಚರಿ, ಎಂದು ಮಾನಸಿ ಬರೆದಿದ್ದರು.

ಹರ್ಭಜನ್ ಸಿಂಗ್ ಮತ್ತು ಸುರೇಶ್​ ರೈನಾ ಈ ರೀಲ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾಮೆಂಟ್ ವಿಭಾಗದ ಎಲ್ಲಾ ಜನರ ಬಗ್ಗೆ ನಾನು ನಿಜವಾಗಿಯೂ ನಿರಾಶೆಗೊಂಡಿದ್ದೇನೆ ಎಂದು ಮಾನಸಿ ಹೇಳಿದ್ದಾರೆ. ಇದಕ್ಕೂ ದೊಡ್ಡ ಪ್ರಮಾಣದಲ್ಲಿ ಲೈಕ್​ ಹಾಗೂ ಕಾಮೆಂಟ್​ಗಳು ಬಂದಿವೆ.

Continue Reading

Latest

Viral Video: ತರಕಾರಿ ಮಾರುವವಳ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

Viral Video: ತಾಯಿಯ ಕರುಳು ಯಾವತ್ತೂ ಮಕ್ಕಳ ಶ್ರೇಯೋಭಿವೃದ್ಧಿಯನ್ನೇ ಬಯಸುತ್ತಿರುತ್ತದೆ. ತಾನು ಕಷ್ಟಪಟ್ಟರೂ ಪರ್ವಾಗಿಲ್ಲ ಮಕ್ಕಳು ಸುಖವಾಗಿ ಇರಬೇಕು ಎನ್ನುವುದೇ ತಾಯಿಯ ಆಸೆ. ಅಂತಹ ತಾಯಿಯ ಆಸೆಯೊಂದು ನೆರೆವೇರಿದ ವಿಡಿಯೊವೊಂದು ಇಲ್ಲಿ ವೈರಲ್ ಆಗಿದೆ. ಯೋಗೇಶ್ ಎಂಬ ಯುವಕ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಈ ವಿಚಾರವನ್ನು ತನ್ನ ತಾಯಿಗೆ ಹೇಳಿದ್ದಾನೆ. ಆಗ ತಾಯಿ ತನ್ನ ಮಗನ ಸಾಧನೆಯ ಬಗ್ಗೆ ಹೆಮ್ಮೆಯಿಂದ ಅವನನ್ನು ನೋಡಿ ಭಾವುಕಳಾಗಿ ತಬ್ಬಿಕೊಂಡು ಸಂತೋಷದ ಕಣ್ಣೀರನ್ನು ಸುರಿಸಿದ್ದಾಳೆ. ಅವನ ತಾಯಿ ತರಕಾರಿ ಮಾರಿ ಜೀವನ ನಡೆಸುತ್ತಿದ್ದಾಳೆ. ಈ ಹೃದಯಸ್ಪರ್ಶಿ ವೀಡಿಯೊ ಅನೇಕರ ಕಣ್ಣುಗಳನ್ನು ಒದ್ದೆ ಮಾಡಿದೆ.

VISTARANEWS.COM


on

Viral Video
Koo


ಮುಂಬೈ :
ಪೋಷಕರಿಗೆ ತಮ್ಮ ಮಕ್ಕಳು ಓದಿ ವಿದ್ಯಾವಂತರಾಗಿ ಒಳ್ಳೆಯ ಉದ್ಯೋಗದಲ್ಲಿರಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಅವರು ಎಷ್ಟೇ ಕಷ್ಟದ ಜೀವನ ಇದ್ದರೂ ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಿಸಲು ಮುಂದಾಗುತ್ತಾರೆ. ಅಂತಹ ಮಕ್ಕಳು ಮುಂದೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಂದರೆ ಅದರಿಂದ ತಂದೆತಾಯಿಗೆ ಆಗುವ ಸಂತೋಷ ಎಲ್ಲದಕ್ಕೂ ಮಿಗಿಲಾದುದು. ಅಂತದೊಂದು ಹೃದಯಸ್ಪರ್ಶಿ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗುತ್ತಿದೆ. ತಾಯಿಯೊಬ್ಬಳು ಕಠಿಣ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಬಂದ ತನ್ನ ಮಗನನ್ನು ತಬ್ಬಿಕೊಂಡು ತನ್ನ ಸಂತೋಷವನ್ನು ವ್ಯಕ್ತಪಡಿಸಿದ ರೀತಿಗೆ ಜನರು ಕೂಡ ಖುಷಿಪಟ್ಟಿದ್ದಾರೆ.

ಯೋಗೇಶ್ ಎಂಬ ಯುವಕ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಈ ವಿಚಾರವನ್ನು ತನ್ನ ತಾಯಿಗೆ ಹೇಳಿದ್ದಾನೆ. ಆಗ ತಾಯಿ ತನ್ನ ಮಗನ ಸಾಧನೆಯ ಬಗ್ಗೆ ಹೆಮ್ಮೆಯಿಂದ ಅವನನ್ನು ನೋಡಿ ಭಾವುಕಳಾಗಿ ತಬ್ಬಿಕೊಂಡು ಸಂತೋಷದ ಕಣ್ಣೀರನ್ನು ಸುರಿಸಿದ್ದಾಳೆ. ಅವನ ತಾಯಿ ತರಕಾರಿ ಮಾರಿ ಜೀವನ ನಡೆಸುತ್ತಿದ್ದಾಳೆ. ವಿಡಿಯೊದಲ್ಲಿ ಮಗ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದನ್ನು ಹೇಳಿದ ತಕ್ಷಣ ನೆಲದಲ್ಲಿ ಕುಳಿತ ತಾಯಿ ಎದ್ದು ನಿಂತು ತನ್ನ ಮಗನನ್ನು ತಬ್ಬಿಕೊಂಡಳು, ಅವಳ ಕಣ್ಣುಗಳಲ್ಲಿ ಸಂತೋಷದ ಕಣ್ಣೀರು ಹರಿಯಿತು. ಹೃದಯಸ್ಪರ್ಶಿ ವೀಡಿಯೊ ಅನೇಕರ ಗಮನ ಸೆಳೆಯಿತು.

ಈ ಕ್ಲಿಪ್ ಅನ್ನು ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅನೇಕ ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮತ್ತು ಅನೇಕರು ಈ ವೀಡಿಯೊವನ್ನು ನೋಡಿ ಖುಷಿಪಟ್ಟಿದ್ದಾರೆ. ಅನೇಕರು ಆ ಹುಡುಗನಿಗೆ ಅಭಿನಂದನೆ ತಿಳಿಸಿದ್ದಾರೆ. ಮತ್ತು ಕೆಲವರು ಆತ ತಾಯಿಯನ್ನು ಅಪ್ಪಿಕೊಂಡ ರೀತಿ ನೊಡಿ ಅವರ ಕಡೆಯಿಂದ ಅಪ್ಪುಗೆ ಒಂದು ರೀತಿಯ ವಿಚಿತ್ರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇ ಇನ್ನೊಬ್ಬರು ಆತನ ತಾಯಿ ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ. ಅದು ಆಕೆಯ ಜೀವನದ ಅದ್ಭುತ ಕ್ಷಣ ಎಂದು ತಿಳಿಸಿದ್ದಾರೆ. ಹಾಗೇ ಮತ್ತೊಬ್ಬರು ಆತನಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಬಾಲಕನನ್ನು ಅಟ್ಟಾಟಿಸಿ ದಾಳಿ ಮಾಡಿದ ಕೋತಿಗಳು; ಆತಂಕ ಮೂಡಿಸುವ ವಿಡಿಯೊ

ಅಲ್ಲದೇ ಇನ್ನೊಬ್ಬರು ‘ಇದು ಜೀವನಪರ್ಯಂತದ ಹೋರಾಟ, ಅವರ ಮಗನಿಗೂ ಇದು ಅರ್ಥವಾಗುವುದಿಲ್ಲ… – ಪೋಷಕರು ಸಾಮಾನ್ಯವಾಗಿ ಮಾಡುವ ಸಣ್ಣ ದೊಡ್ಡ ತ್ಯಾಗಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ, ಏಕೆಂದರೆ ಅವರು ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ. -ಅವರ ಮಗ ಎಂದು ಭಾವಿಸುತ್ತೇನೆ. ಭವಿಷ್ಯದಲ್ಲಿ ಅವರನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಅರಿತುಕೊಳ್ಳುತ್ತಾರೆ.’ ಎಂದು ಬರೆದಿದ್ದಾರೆ.

Continue Reading

Latest

Viral Video: ರೈಲ್ವೆ ಸೇತುವೆ ಮೇಲೆ ಫೋಟೊಶೂಟ್‌; ರೈಲು ಬಂದಾಗ 90 ಅಡಿ ಆಳಕ್ಕೆ ಜಿಗಿದ ದಂಪತಿ!

Viral Video: ಈಗ ರೀಲ್ಸ್ ಜಮಾನ. ಜೀವಕ್ಕೆ ಅಪಾಯವಾದರೂ ಪರ್ವಾಗಿಲ್ಲ, ನಮ್ಮ ಫೋಟೊವೊಂದು ಚೆನ್ನಾಗಿ ಬರಬೇಕು ಎನ್ನುವ ಹಪಾಹಪಿ.ರಾಜಸ್ಥಾನದ ಪಾಲಿಯಲ್ಲಿರುವ ಹೆರಿಟೇಜ್ ಸೇತುವೆಯ ರೈಲು ಹಳಿಯಲ್ಲಿ ಫೋಟೊಶೂಟ್ ಮಾಡಲು ಹೋಗಿ ಗಂಡ ಹೆಂಡತಿ ಇಬ್ಬರು 90 ಅಡಿ ಆಳದ ಕಮರಿಗೆ ಹಾರಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೀಟರ್-ಗೇಜ್ ರೈಲು ಸೇತುವೆಯಲ್ಲಿ ಫೋಟೋಶೂಟ್ ಮಾಡಿಕೊಳ್ಳುತ್ತಿರುವಾಗ ಆ ವೇಳೆ ರೈಲು ಬಂದಿದ್ದು, ಅವರು ಸಮೀಪಿಸುತ್ತಿರುವ ರೈಲನ್ನು ನೋಡಿ ಭಯಭೀತರಾಗಿ ಕಮರಿಗೆ ಹಾರಿದ್ದಾರೆ. ಮುಂದೇನಾಯ್ತು ನೋಡಿ….

VISTARANEWS.COM


on

Viral Video
Koo

ಇತ್ತೀಚಿನ ದಿನಗಳಲ್ಲಿ ಜನರಿಗೆ ಫೋಟೊ, ಸೆಲ್ಫಿ ಹುಚ್ಚು ಹೆಚ್ಚಾಗಿದೆ. ಯಾವುದೇ ಸ್ಥಳಗಳಿಗೆ ಭೇಟಿ ನೀಡಿದರೂ ಕೂಡ ಸ್ಥಳವನ್ನು ನೋಡುವ ಬದಲು ಸೆಲ್ಫಿ ತೆಗೆದುಕೊಳ್ಳುವುದರಲ್ಲೇ ಬ್ಯುಸಿಯಾಗಿರುತ್ತಾರೆ. ಆ ಫೋಟೊವನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವ ತನಕ ಅವರಿಗೆ ಸಮಾಧಾನ ಇರುವುದಿಲ್ಲ. ಇದೀಗ ದಂಪತಿ ಇಬ್ಬರು ಫೋಟೊಶೂಟ್ ಮಾಡಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.

ಜುಲೈ 12ರಂದು ದಂಪತಿ ರಾಜಸ್ಥಾನದ ಪಾಲಿಯಲ್ಲಿರುವ ಹೆರಿಟೇಜ್ ಸೇತುವೆಯ ರೈಲು ಹಳಿಯಲ್ಲಿ ಫೋಟೊಶೂಟ್ ಮಾಡಲು ಹೋಗಿ 90 ಅಡಿ ಆಳದ ಕಮರಿಗೆ ಹಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಹುಲ್ ಮೇವಾಡಾ (22) ಮತ್ತು ಅವರ ಪತ್ನಿ ಜಾಹ್ನವಿ (20) ಗಾಯಗೊಂಡ ದಂಪತಿ. ಬಾಗ್ಡಿ ನಗರದ ಕಲಾಲ್ ಕಿ ಪಿಪಾಲಿಯಾನ್ ನಿವಾಸಿಗಳಾದ ಈ ದಂಪತಿ ಬೈಕಿನಲ್ಲಿ ಗೋರ್ಮ್ಘಾಟ್‍ಗೆ ಪ್ರಯಾಣಿಸುತ್ತಿದ್ದರು. ಆಗ ಮೀಟರ್-ಗೇಜ್ ರೈಲು ಸೇತುವೆಯಲ್ಲಿ ತಮ್ಮ ಫೋಟೋಶೂಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ, ಆ ವೇಳೆ ರೈಲು ಬಂದಿದ್ದು, ಅವರು ಸಮೀಪಿಸುತ್ತಿರುವ ರೈಲನ್ನು ನೋಡಿ ಭಯಭೀತರಾಗಿ ಕಮರಿಗೆ ಹಾರಿದ್ದಾರೆ. ರಾಹುಲ್ ಅವರ ಬೆನ್ನುಮೂಳೆಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜೋಧಪುರಕ್ಕೆ ಸ್ಥಳಾಂತರಿಸಲಾಗಿದೆ.

ಹಾಗೇ ಪತ್ನಿ ಜಾಹ್ನವಿ ಬಂಗಾರ್ ಅವರ ಕಾಲು ಮುರಿತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ಇದ್ದ ರಾಹುಲ್ ಅವರ ಸಹೋದರಿ ಮತ್ತು ಸೋದರ ಮಾವ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.

ಅಜ್ಮೀರ್ ರೈಲ್ವೆ ವಿಭಾಗದ ಹಿರಿಯ ವಾಣಿಜ್ಯ ವಿಭಾಗೀಯ ವ್ಯವಸ್ಥಾಪಕ ಸುನಿಲ್ ಕುಮಾರ್ ಮಹಾಲಾ ಅವರು ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರೈಲಿನ ಲೋಕೋ ಪೈಲಟ್ ದಂಪತಿಯನ್ನು ಕಂಡಾಗ ಬ್ರೇಕ್ ಹಾಕಲು ಪ್ರಾರಂಭಿಸಿದರು, ಆದರೆ ಅವರು ಭಯದಿಂದ ಜಿಗಿದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಫೋಟೊಶೂಟ್‍ಗಳಿಗಾಗಿ ರೈಲ್ವೆ ಸೇತುವೆಗಳಿಗೆ ಅನಧಿಕೃತವಾಗಿ ಪ್ರವೇಶಿಸುವವರ ವಿರುದ್ಧ ಸ್ಥಳೀಯ ಆಡಳಿತವು ಕಠಿಣ ಎಚ್ಚರಿಕೆ ನೀಡಿದ್ದು, ಉಲ್ಲಂಘಿಸುವವರಿಗೆ ಕಠಿಣ ಪರಿಣಾಮಗಳನ್ನು ವಿಧಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ರಸ್ತೆಯಲ್ಲಿ ಬಾಲಕನನ್ನು ಅಟ್ಟಾಟಿಸಿ ದಾಳಿ ಮಾಡಿದ ಕೋತಿಗಳು; ಆತಂಕ ಮೂಡಿಸುವ ವಿಡಿಯೊ

ಈ ಘಟನೆಯ ವೀಡಿಯೊ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಂತಹ ಫೋಟೋಶೂಟ್‍ಗಳ ಸಮಯದಲ್ಲಿ ಸುರಕ್ಷತೆ ಮತ್ತು ಜವಾಬ್ದಾರಿಯ ಬಗ್ಗೆ ಆನ್‍ಲೈನ್‍ನಲ್ಲಿ ಚರ್ಚೆಗಳು ನಡೆಯುತ್ತಿವೆ. ಅಪಾಯಕಾರಿ ಸ್ಥಳಗಳಲ್ಲಿ ಫೋಟೊಗಳನ್ನು ತೆಗೆಯುವಾಗ ತಮ್ಮ ಸುರಕ್ಷತೆಗೆ ಆದ್ಯತೆ ನೀಡುವಂತೆ ಮತ್ತು ಜೀವವನ್ನು ಅಪಾಯಕ್ಕೆ ತಳ್ಳುವುದನ್ನು ತಪ್ಪಿಸಬೇಕೆಂದು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ.

Continue Reading
Advertisement
Char Dham Yatra 2024
ಪ್ರವಾಸ22 mins ago

Char Dham Yatra 2024: ಚಾರ್‌ಧಾಮ್‌, ಕೇದಾರನಾಥನ ದರ್ಶನ ಮಾಡುವ ಆಸೆ ಇದೆಯೆ? ಈ ಮಹತ್ವದ ಸಂಗತಿಗಳನ್ನು ತಿಳಿದುಕೊಂಡಿರಿ

karnataka weather Forecast
ಮಳೆ22 mins ago

Karnataka Weather : ಅಬ್ಬರಿಸುತ್ತಿರುವ ಮುಂಗಾರು; ಕರಾವಳಿ, ಮಲೆನಾಡಿನಲ್ಲಿ ಇಂದು ಸಹ ಜೋರು ಮಳೆ

Vastu Tips
ಧಾರ್ಮಿಕ22 mins ago

Vastu Tips: ವಾಸ್ತು ಪ್ರಕಾರ ಮಕ್ಕಳ ಅಧ್ಯಯನ ಕೊಠಡಿ ಹೀಗಿರಬೇಕು

Mosquito Repellent Plants
ಆರೋಗ್ಯ52 mins ago

Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

Somanathapura Talakadu Madhyaranga Bharachukki Gaganachukki KSRTC Package Tour from Bengaluru
ಕರ್ನಾಟಕ52 mins ago

KSRTC Package Tour: ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್‌ ಟೂರ್‌; ದರವೆಷ್ಟು?

dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವುದು

Virat Kohli
ಪ್ರಮುಖ ಸುದ್ದಿ7 hours ago

Virat Kohli : ಹಣ, ಹೆಸರು ಬಂದ ತಕ್ಷಣ ಕೊಹ್ಲಿಗೆ ಅಹಂಕಾರ ಬಂತು; ಮಾಜಿ ಆಟಗಾರನ ಅರೋಪ

Smriti Singh
ದೇಶ7 hours ago

Smriti Singh: ಹುತಾತ್ಮ ಯೋಧನ 1 ಕೋಟಿ ರೂಪಾಯಿಯಲ್ಲಿ ಪೋಷಕರಿಗೆ 50%, ಪತ್ನಿಗೆ 50%; ಕೊನೆಗೂ ಸಿಕ್ಕಿತು ನ್ಯಾಯ

7th Pay Commission
ಕರ್ನಾಟಕ8 hours ago

7th Pay Commission: ವೇತನ ಏರಿಕೆಗೆ ಒಪ್ಪಿಗೆ; ಒಪಿಎಸ್, ಆರೋಗ್ಯ ಯೋಜನೆ ಬೇಡಿಕೆ ಬಾಕಿ; ನೌಕರರ ಸಂಘದ ಮುಂದಿನ ನಿರ್ಧಾರ ಏನು?

Viral Video
ವೈರಲ್ ನ್ಯೂಸ್8 hours ago

Viral Video: ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ13 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ20 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌