ನವದೆಹಲಿ: ಕಳ್ಳರು(thief) ಎಷ್ಟು ಚಾಲಾಕಿಗಳಾಗಿರುತ್ತಾರೆ ಎಂದರೆ ಕೆಲವೊಮ್ಮೆ ನೋಡ ನೋಡ್ತಿದ್ದಂತೆ ನಮ್ಮ ಕಣ್ಣೆದುರಿನಿಂದಲೇ ವಸ್ತುಗಳನ್ನು ದೋಚಿ ಎಸ್ಕೇಪ್ ಆಗುತ್ತಾರೆ. ಆದರೆ ನಸೀಬು ಕೆಟ್ಟರೆ ತಗಲಾಕ್ಕೊಂಡು ಧರ್ಮದೇಟು ತಿಂದಿರುವ ಘಟನೆಗಳೂ ಆಗಾಗ ಕಾಣ ಸಿಗುತ್ತವೆ. ಇದೀಗ ಅಂತಹದ್ದೇ ಒಂದು ಘಟನೆಯ ವಿಡಿಯೋ ವೈರಲ್(Viral Video) ಆಗಿದೆ. ಪಿಕ್ ಪಾಕೆಟ್(Pick Pocketing) ಮಾಡ್ತಿದ್ದ ಕಳ್ಳನೊಬ್ಬ ರೆಡ್ ಹ್ಯಾಂಡಾಗಿ ನಡು ರಸ್ತೆಯಲ್ಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ.
थाना सदर बाज़ार क्षेत्र में गश्त ड्यूटी के दौरान #दिल्लीपुलिस के कांस्टेबल सचिन ने संज्ञेय अपराध की संभावना को देखते हुए शख़्स को दौड़कर पकड़ा और गिरफ्तार किया।@DcpNorthDelhi pic.twitter.com/Pja8Hl8zum
— Delhi Police (@DelhiPolice) May 8, 2024
ಈ ವಿಡಿಯೋವನ್ನು ದಿಲ್ಲಿ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಬೈಕ್ ಚಾಲಕನೋರ್ವ ಬೈಕ್ ಚಲಾಯಿಸಲು ಬೈಕ್ ಸ್ಟಾರ್ಟ್ ಮಾಡಲು ಯತ್ನಿಸುತ್ತಿರುತ್ತಾನೆ. ಆಗ ಆತನ ಸಹಾಯಕ್ಕೆ ಬಂದ ಯುವಕನೋರ್ವ ಬೈಕ್ ಕಿಕ್ ಹೊಡೆದು ಸ್ಟಾರ್ಟ್ ಮಾಡುತ್ತಾ ಹಾಗೆಯೇ ಬೈಕ್ ಚಾಲಕನ ಪ್ಯಾಂಟಿನ ಜೇಬಿನಿಂದ ಮೆಲ್ಲಗೆ ಪರ್ಸ್ ಕದಿಯಲು ಯತ್ನಿಸುತ್ತಾನೆ. ಆಗ ಅದೆಲ್ಲೋ ಇದ್ದ ಪೊಲೀಸ್ ತಕ್ಷಣ ಅಲ್ಲಿಗೆ ಓದಿ ಬಂದ್ ಕಳ್ಳನನ್ನು ರೆಡ್‌ಹ್ಯಾಂಡಾಗಿ ಹಿಡಿಯುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನು ದಿಲ್ಲಿಯ ಸದಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಾನ್‌ಸ್ಟೇಬಲ್ ಸಚಿನ್ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಪದ್ಬಾಂದವನಂತೆ ಬಂದ ಕಾನ್‌ಸ್ಟೇಬಲ್ ಹಿಂದಿನಿಂದ ಬಂದು ಕಳ್ಳ ಕತ್ತು ಹಿಡಿದು ಆತನನ್ನು ಲಾಕ್ ಮಾಡಿರುವ ವಿಡಿಯೋ ನೋಡಿ ರಿಯಲ್ ಹೀರೋ ಎಂದು ಹಾಡಿ ಹೊಗಳಿದ್ದಾರೆ. ಇನ್ನು ಕೆಲವರು ಈ ವಿಡಿಯೋದ ಅಸಲಿಯತ್ತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಳ್ಳತನ ನಡೆಯುತ್ತದೆ, ಪೊಲೀಸ್ ಬಂದು ಹಿಡಿಯುತ್ತಾರೆ ಎಂಬುದು ವಿಡಿಯೋ ಮಾಡುವವನಿಗೆ ಮೊದಲೇ ಗೊತ್ತಿತ್ತೇ ಎಂದು ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಯಾವಾಗ ನಡೆದಿದ್ದು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.
ಇದನ್ನೂ ಓದಿ: Cancer-Causing Chemicals: ಕಾರು ಪ್ರಿಯರೇ ಎಚ್ಚರ …ಎಚ್ಚರ.. ಕಾರಿನಲ್ಲಿ ಉತ್ಪತ್ತಿ ಆಗ್ತಿದೆ ಕ್ಯಾನ್ಸರ್ ಕಾರಕ ಕೆಮಿಕಲ್
ಇನ್ನು ಕೆಲವರು ಕಾನ್‌ಸ್ಟೇಬಲ್ ಸಚಿನ್ ಧೈರ್ಯ, ಸಮಯಪ್ರಜ್ಞೆಗೆ ಸಲಾಂ. ದಿಲ್ಲಿ ಪೊಲೀಸ್‌ಗೆ ಇಂತಹ ಪೊಲೀಸರು ಬೇಕೇ ಹೊರತು ಅಕ್ರಮವಾಗಿ ನೇಮಕಗೊಂಡು ಓಡಿಹೋಗವವರು ಅಲ್ಲ. ದಿಲ್ಲಿ ಪೊಲೀಸರಿರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.