Site icon Vistara News

Viral Video:ಶಾಕಿಂಗ್‌ ವಿಡಿಯೋ! ಮಗನನ್ನು ಟ್ರೆಡ್‌ಮಿಲ್‌ನಲ್ಲಿ ಓಡಿಸಿ ಪ್ರಾಣವನ್ನೇ ತೆಗೆದ ಪಾಪಿ ತಂದೆ

Viral video

ಅಮೆರಿಕ: ಪ್ರಪಂಚದಲ್ಲಿ ಎಂತೆಂಥಾ ವಿಕೃತ ಮನಸ್ಸಿನ ವ್ಯಕ್ತಿಗಳಿರುತ್ತಾರೆ ಅಂದ್ರೆ ಕೆಲವೊಮ್ಮೆ ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬ ಪಾಪಿ ತಂದೆಯ ಹುಚ್ಚಾಟಕ್ಕೆ ಪುಟ್ಟ ಬಾಲಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಆರು ವರ್ಷದ ಮಗನನ್ನು ದಪ್ಪ ಇದ್ದಾನೆಂದು ಬಲವಂತವಾಗಿ ಟ್ರೆಡ್‌ಮಿಲ್‌(Treadmill) ನಲ್ಲಿ ಓಡಿಸಿದ ಪಾಪಿ ತಂದೆ ಮಗನನ್ನೇ ಬಲಿ ತೆಗೆದುಕೊಂಡಿರುವ ಘಟನೆ ಅಮೆರಿಕ(America)ದ ನ್ಯೂ ಜೆರ್ಸಿಯಲ್ಲಿ ನಡೆದಿದೆ. 2021ರಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣ(Social Media)ದಲ್ಲಿ ಈ ವಿಡಿಯೋ ವೈರಲ್‌(Viral video) ಆಗುತ್ತಿದೆ.

ಕ್ರಿಸ್ಟೋಫರ್‌ ಜಾರ್ಜ್‌ ಎಂಬ ವ್ಯಕ್ತಿ ಅಟ್ಲಾಂಟಿಕ್‌ ಫಿಟ್‌ನೆಸ್‌ ಕ್ಲಬ್‌ ಹೌಸ್‌ ಎಂಬ ಜಿಮ್‌ನಲ್ಲಿ ತನ್ನ ಆರು ವರ್ಷದ ಮಗ ಕೋರೆ ಮಿಕ್ಕಿಯೊಲೋನನ್ನು ಪದೇ ಪದೇ ಟ್ರೆಡ್‌ಮಿಲ್‌ನಲ್ಲಿ ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ನೀನು ದಪ್ಪಗಿದ್ದಿಯಾ ಎಂದು ಪದೇ ಪದೇ ಹೇಳುತ್ತಾ ಟ್ರೆಡ್‌ಮಿಲ್‌ ವೇಗವನ್ನು ಸ್ಪೀಡಾಗಿ ಸೆಟ್‌ ಮಾಡಿ ಮಗನನ್ನು ಅದರಲ್ಲಿ ಓಡಿಸುತ್ತಾನೆ. ಮಗ ಟ್ರೆಡ್‌ಮಿಲ್‌ನಿಂದ ಬ್ಯಾಲೆನ್ಸ್‌ ತಪ್ಪಿ ಬಿದ್ದರೂ ಬಿಡದ ಕ್ರಿಸ್ಟೋಫರ್‌, ಮತ್ತೆ ಮತ್ತೆ ಬಾಲಕನನ್ನು ಬಲವಂತವಾಗಿ ಟ್ರೆಡ್‌ಮಿಲ್‌ ಮೇಲೆ ನಿಲ್ಲಿಸುತ್ತಾನೆ. ಬಾಲಕ ಎಷ್ಟೇ ಬೇಡ ಎಂದು ಅಳುತ್ತಿದ್ದರೂ ಕೇಳದ ಕ್ರಿಸ್ಟೋಫರ್‌ ಮತ್ತೆ ಮತ್ತೆ ಹಿಂಸೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ತಂದೆಯ ಹಿಂಸೆಯ ತಡೆಯಲಾರದೇ ತೀವ್ರ ಒತ್ತಡ ಅನುಭವಿಸಿದ್ದ ಬಾಲಕ ಕೋರೆ ತೀವ್ರವಾಗಿ ಅಸ್ವಸ್ತಗೊಂಡಿದ್ದ. ಕೋರೆ ದೇಹದ ಮೇಲೆ ಗಂಭೀರವಾದ ಗಾಯಗಳೂ ಆಗಿದ್ದವು. ಇದರಿಂದ ಬಾಲಕನ ತಾಯಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಬಾಲಕನ ಸಿಟಿ ಸ್ಕ್ಯಾನ್‌ ಮಾಡಿದಾಗ ಆತನಿಗೆ ಹೃದಯ ಸಂಬಂಧ ಖಾಯಿಲೆ ಇರುವುರು ವೈದ್ಯರಿಗೆ ತಿಳಿದು ಬಂದಿತ್ತು. ಈ ವೇಳೆ ವೈದ್ಯರ ಮಾಹಿತಿ ಮೇರೆಗೆ ಕ್ರಿಸ್ಟೋಫರ್‌ ಜಾರ್ಜ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಈ ವೇಳೆ ತಂದೆ ನೀಡುತ್ತಿದ್ದ ಹಿಂಸೆಯ ಬಗ್ಗೆ ಬಾಲಕ ತಿಳಿಸಿದ್ದ. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಳಿಕ ಕ್ರಿಸ್ಟೋಫರ್‌ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಕೋರ್ಟ್‌ ವಿಚಾರಣೆ ವೇಳೆ ಈ ವಿಡಿಯೋ ಪ್ರಸಾರ ಮಾಡಿ ಮಾಡಿದ್ದಾರೆ. ಆ ವಿಡಿಯೋ ನೋಡುತ್ತಿದ್ದಂತೆ ಕೊರ್ಟ್‌ನಲ್ಲಿ ಹಾಜರಿದ್ದ ಬಾಲಕನ ತಾಯಿ ಕಣ್ಣೀರು ಹಾಕಿದ್ದಾಳೆ.

ಇದನ್ನೂ ಓದಿ: Viral Video: ಕಾಲಿನ ಗಾಯವನ್ನು ಲೆಕ್ಕಿಸದೆ ರೋಲರ್ ಓಡಿಸಿ ಪಿಚ್​ ಸಿದ್ಧಪಡಿಸಿದ ಮೊಹಮ್ಮದ್​ ಶಮಿ

2022 ಮಾರ್ಷ್‌ 9ರಂದು ಕೊಲೆ ಪ್ರಕರಣದಲ್ಲಿ ಕ್ರಿಸ್ಟೋಫರ್‌ ಜಾರ್ಜ್‌ನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದರು. ಇದೀಗ ಜಾಮೀನು ರಹಿತ ಬಂಧನಕ್ಕೊಳಗಾಗಿರುವ ಆತನನ್ನು ಓಶಿಯನ್‌ ಸಿಟಿ ಜೈಲಿನಲ್ಲಿ ಇರಿಸಲಾಗಿದೆ. ಮಂಗಳವಾರ ವಿಚಾರಣೆಗೆ ಹಾಜರಾದ ಕ್ರಿಸ್ಟೋಫರ್‌ ಜಾರ್ಜ್‌ನ ಕೃತ್ಯವನ್ನು ಕಂಡು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕಂಡು ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ.

Exit mobile version