Site icon Vistara News

Viral Video: ಐದನೇ ಮಹಡಿಯಿಂದ ಬಾಲಕಿ ಮೇಲೆ ಬಿದ್ದ ಶ್ವಾನ; ಆಮೇಲೆ ಆಗಿದ್ದೇನು? ವಿಡಿಯೋ ಇದೆ

Viral video

ಥಾಣೆ: ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ಐದನೇ ಮಹಡಿಯಿಂದ ನಾಯಿಯೊಂದು ಬಿದ್ದಿದ್ದು ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಥಾಣೆ(Thane)ಯಲ್ಲಿ ನಡೆದಿದೆ. ಮುಂಬ್ರಾದಲ್ಲಿ ಜನನಿಬಿಡ ರಸ್ತೆಯಲ್ಲಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಬರುತ್ತಿದ್ದ ಮೂರು ವರ್ಷ ಬಾಲಕಿ ಮೇಲೆ ನಾಯಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಇನ್ನು ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾ(CCTV Camera)ದಲ್ಲಿ ರೆಕಾರ್ಡ್‌ ಆಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಮಂಗಳವಾರ ಮಧ್ಯಾಹ್ನ ಅಮೃತ್ ನಗರದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ಅಮೃತ್ ನಗರದಲ್ಲಿ ತನ್ನ ತಾಯಿಯೊಂದಿಗೆ ಜನನಿಬಿಡ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಮೇಲೆ ಗೋಲ್ಡನ್ ರಿಟ್ರೀವರ್ ಶ್ವಾನವೊಂದು ಬೀಳುತ್ತಿರುವುದನ್ನು ಕಾಣಬಹುದು. ವರದಿಗಳ ಪ್ರಕಾರ, ಶ್ವಾನ ಬಿದ್ದ ರಭಸಕ್ಕೆ ಮಗುವಿಗೆ ತುಂಬಾ ಬಲವಾಗಿ ಹೊಡೆತ ಬಿದ್ದಿದ್ದು, ಅವಳು ಪ್ರಜ್ಞೆ ತಪ್ಪಿದ್ದಾಳೆ.

ಮಗು ಪ್ರಜ್ಞೆ ತಪ್ಪಿದ ತಕ್ಷಣ, ಮಹಿಳೆ ಮತ್ತು ಪುರುಷ ತನ್ನ ತಾಯಿಗೆ ಸಹಾಯ ಮಾಡಲು ಧಾವಿಸಿದರು ಮತ್ತು ಮಗುವನ್ನು ಎಳೆದುಕೊಂಡು ಹತ್ತಿರದ ಆಸ್ಪತ್ರೆಯತ್ತ ಧಾವಿಸುತ್ತಿರುವುದನ್ನು ಕಾಣಬಹುದು. ಅಷ್ಟರಲ್ಲಿ ನಾಯಿ ತೀವ್ರವಾಗಿ ಗಾಯಗೊಂಡು ಬೊಬ್ಬೆ ಹೊಡೆಯುತ್ತಾ ಕುಂಟುತ್ತಾ ಸಾಗುತ್ತಿರುವುದು ಕಂಡು ಬಂತು.
ವರದಿಗಳ ಪ್ರಕಾರ, ಬಾಲಕಿಯನ್ನು ಆರಂಭದಲ್ಲಿ ಚಿಕಿತ್ಸೆಗಾಗಿ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ CT ಸ್ಕ್ಯಾನ್‌ಗಾಗಿ ಕಲ್ಸೇಕರ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದು, ಆಕೆಯ ದೇಹವನ್ನು ಕಲ್ವಾ ಆಸ್ಪತ್ರೆಗೆ ಹಿಂತಿರುಗಿಸಲಾಗಿದೆ.
ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದೆ

ಏತನ್ಮಧ್ಯೆ, ಮುಂಬ್ರಾ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಮತ್ತು ಮೃತನ ತಾಯಿಯ ಹೇಳಿಕೆಯನ್ನು ಇನ್ನೂ ದಾಖಲಿಸಿಕೊಳ್ಳಬೇಕಾಗಿದೆ. ಚಿರಾಗ್ ಮ್ಯಾನ್ಷನ್‌ನ 5 ನೇ ಮಹಡಿಯಲ್ಲಿ ಜೈದ್ ಸೈಯದ್ ಎಂದು ಗುರುತಿಸಲ್ಪಟ್ಟ ನಿವಾಸಿಯೊಬ್ಬರು ನಾಯಿಯನ್ನು ಸಾಕಿದ್ದರು ಎಂದು ವರದಿಗಳು ಸೂಚಿಸಿವೆ. ಅದರಂತೆ, ನಾಯಿ ಅದಾಗಿಯೇ ಕಟ್ಟಡದಿಂದ ಜಿಗಿದಿದೆಯೇ ಅಥವಾ ತಳ್ಳಲ್ಪಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: Viral Video: ರಸ್ತೆಯಲ್ಲಿ ಚುಡಾಯಿಸಿದ ಪುಂಡನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ; ವಿಡಿಯೊ ನೋಡಿ

Exit mobile version