Site icon Vistara News

Viral Video: ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು; ವಿಡಿಯೋ ವೈರಲ್‌

ಚೆನ್ನೈ: ಈಗಿನ ಕಾಲದಲ್ಲಿ ಮನೆಯಲ್ಲಿ ಪುಟ್ಟ ಮಕ್ಕಳಿದ್ದ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹದ್ದೇ ಒಂದು ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದ್ದು,(Viral video) ಅಪಾರ್ಟ್‌ಮೆಂಟ್‌(Apartment)ನ ಕಿಟಕಿಯಿಂದ ಏಳು ತಿಂಗಳ ಮಗುವೊಂದು(Toddler) ವಿಂಡೋ ಪೋರ್ಚ್‌(Window Porch) ಮೇಲೆ ಬಿದ್ದಿದೆ. ಅದೃಷ್ಟವಶಾತ್‌ ಸ್ಥಳೀಯರ ಸಹಾಯದಿಂದ ಮಗು ದೊಡ್ಡ ಅನಾಹುತವೊಂದು ತಪ್ಪಿದೆ. ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿದೆ.

ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಮಗುವಿನ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಂಡೋ ಪೋರ್ಚ್‌ ಮೇಲೆ ಬಿದ್ದಿ ಮಗುವಿನ ರಕ್ಷಣೆಗೆ ದೌಡಾಯಿಸಿದ್ದ ಅಪಾರ್ಟ್‌ಮೆಂಟ್‌ ನಿವಾಸಿಗಳು ಮತ್ತೊಂದು ಕಿಟಕಿಯಿಂದ ಹೊರಬಂದು ಮಗುವನ್ನು ರಕ್ಷಿಸಿಲು ಹರಸಾಹನ ಪಟ್ಟರು. ನಾಲ್ಕೈದು ಜನ ಕಿಟಕಿಯ ಹೊರ ಭಾಗದಲ್ಲಿರುವ ಸಣ್ಣ ಜಾಗದಲ್ಲಿ ನಿಂತು ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ರಕ್ಷಿಸಿದ್ದಾರೆ. ಇನ್ನು ಕೆಳಗೆ ಅನೇಕ ಜನ ದೊಡ್ಡ ಬಟ್ಟೆಯೊಂದು ಹಿಡಿದು ಮಗುವಿನ ರಕ್ಷಣೆಗೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಶಂಸೆ ವ್ಯಕ್ತಪಡಿಸಿರುವ ನೆಟ್ಟಿಗರು, ಅಚಾನಕ್ಕಾಗಿ ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದಿದ್ದ 7 ತಿಂಗಳಿನ ಮಗುವನ್ನು ಬಹಳ ಜಾಣ್ಮೆಯಿಂದ ರಕ್ಷಿಸಿದ್ದಾರೆ. ಅವರ ಕಾರ್ಯಕ್ಕೆ ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ:Srinivasa Prasad passes away‌: 7 ಬಾರಿ ಸಂಸದರಾಗಿದ್ದ ಸ್ವಾಭಿಮಾನಿ, ದಕ್ಷಿಣ ಕರ್ನಾಟಕದ ʼದಲಿತ ಸೂರ್ಯʼ

ಕೆಲವು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ‌ ಲಚ್ಯಾಣ ಗ್ರಾಮದ ಜಮೀನಿನಲ್ಲಿದ್ದ ಕೊಳವೆ ಬಾವಿಗೆ ಸಾತ್ವಿಕ್‌ ಮುಜಗೊಂಡ ಎಂಬ ಎರಡು ವರ್ಷದ ಬಾಲಕ ಬಿದ್ದಿದ್ದ. ಸುಮಾರು 20 ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿತ್ತು. ಸಂಜೆ 5.30ರ ಸುಮಾರಿಗೆ ಮಗು ಕೊಳವೆಬಾವಿಗೆ ಬಿದ್ದಿದ್ದು, ಇದಾದ ಅರ್ಧ ಗಂಟೆಯಲ್ಲಿಯೇ ಕಾರ್ಯಾಚರಣೆ ಆರಂಭಿಸಿದ್ದು ಸಿಬ್ಬಂದಿಯು ಸತತ ಪ್ರಯತ್ನ ಮಾಡಿತು. ರಾತ್ರಿಯೇ ಎರಡು ಹಿಟಾಚಿ, ಮೂರು ಜೆಸಿಬಿ ಯಂತ್ರಗಳ ಮೂಲಕ ಕೊಳವೆಬಾವಿಯ ಸುತ್ತ 15 ಅಡಿ ಅಗೆಯಲಾಯಿತು. ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಪ್ರಗತಿ ಕಂಡಿದ್ದು, ರಂಧ್ರ ಕೊರೆದು ಮಗುವಿನ ರಕ್ಷಣೆ ಮಾಡಲು ಸಾಧ್ಯವಾಯಿತು.

Exit mobile version