Site icon Vistara News

Viral Video: ಸೋಷಿಯಲ್ ಮೀಡಿಯಾದಲ್ಲಿ ಚುನಾವಣೆ ಫಲಿತಾಂಶದ ನಗೆ ಹಬ್ಬ! ಫನ್ನಿ ಮೀಮ್ಸ್‌ಗಳನ್ನು ನೋಡಿ!

Viral Video

ಲೋಕಸಭಾ ಚುನಾವಣೆ 2024ರ (Loksabha election-2024) ಫಲಿತಾಂಶ (result) ಮಂಗಳವಾರ ಪ್ರಕಟವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ (social media) ಭಾರೀ ಚರ್ಚೆಗಳು ನಡೆದಿವೆ. ಈ ಸಂದರ್ಭದಲ್ಲಿ ಮನೋರಂಜನೆ ನೀಡುವ ಹಲವಾರು ವಿಡಿಯೋಗಳು (Viral Video) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗಿದೆ. ಚುನಾವಣಾ ಫಲಿತಾಂಶಗಳ ಸುತ್ತ ಕೆಲವು ಉಲ್ಲಾಸದ ಮೀಮ್ಸ್ (memes) ಗಳನ್ನು ಎಕ್ಸ್‌ನಲ್ಲಿ (x) ಹಂಚಿಕೊಳ್ಳಲಾಗಿದ್ದು ಇದರಲ್ಲಿ ಕೆಲವನ್ನು ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ.

ಚುನಾವಣಾ ಕಮಿಷನ್, ಮಾಧ್ಯಮಗಳು ಸೇರಿದಂತೆ ಅನೇಕ ಸಂಗತಿಗಳ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಶೇರ್‌ ಮಾಡಿದ್ದು, ನೆಟ್ಟಿಗರಿಗೆ ಬಹಳ ಖುಷಿಕೊಟ್ಟಿದೆ. ಲೋಕಸಭೆ 2024ರ ಚುನಾವಣೆಯ ಎಣಿಕೆ ಮುಂದುವರಿದಂತೆ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಉಲ್ಲಾಸವನ್ನುಂಟು ಮಾಡುವ ಮೀಮ್‌ಗಳಿಂದ ತುಂಬಿತ್ತು .ರಾಜಕೀಯ ನಾಯಕರು ಅಂತಿಮ ಸಮೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿರುವಾಗ ಬಳಕೆದಾರರು ತಮ್ಮನ್ನು ಮನರಂಜಿಸಲು ಹಲವಾರು ಮೀಮ್ಸ್ ಗಳನ್ನು ಹಂಚಿಕೊಂಡಿದ್ದರು.

ಪಕ್ಷಗಳ ಸ್ಥಿತಿ ಹೇಗಿದೆ ಎಂಬ ವಿಚಾರಗಳನ್ನು ಇಟ್ಟುಕೊಂಡು ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಶೇರ್‌ ಮಾಡಿದ್ದಾರೆ. ಇದರಲ್ಲಿ ಆಯ್ದ 20 ಮೀಮ್ಸ್ ಗಳು ಇಲ್ಲಿವೆ.

ಒಂದು ವಿಡಿಯೋದಲ್ಲಿ ಚುನಾವಣಾ ಆಯೋಗದವರು ಮಾಧ್ಯಮದವರನ್ನು ಟೆಂಪೋದಲ್ಲಿ ಕಳುಹಿಸುತ್ತಿದ್ದಾರೆ. ನಾವು ಕೊನೆಗೆ ಬರುತ್ತೇವೆ, ಎಲ್ಲರಿಗೂ ಮಧ್ಯೆ ಮಧ್ಯೆ ನೀರು ಕೊಡಿ ಎನ್ನುವ ಕ್ಲಿಪ್ ಅನ್ನು ಅಭಿಷೇಕ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ.


ಇನ್ನೊಂದು ವಿಡಿಯೋದಲ್ಲಿ ಉತ್ತರ ಪ್ರದೇಶದ ಜನ ಬಿಜೆಪಿಗೆ ಮೋಸ ಮಾಡಿದ್ದಾರೆ ಎಂಬುದನ್ನು ಹೇಳಲಾಗಿದೆ.


ಇದಲ್ಲದೇ ಅಖಿಲೇಶ್ ಯಾದವ್, ಎನ್ ಡಿ ಎ, ಅರವಿಂದ ಕೇಜ್ರಿವಾಲ್ ಚುನಾವಣೆ ಫಲಿತಾಂಶಕ್ಕಾಗಿ ಕಾಯುತ್ತಿರುವುದು, ಎಕ್ಸಿಟ್ ಪೋಲ್ ಇತ್ಯಾದಿ ಬಗ್ಗೆಯೂ ಮೀಮ್ಸ್ ಗಳನ್ನು ಹಂಚಿಕೊಳ್ಳಲಾಗಿದೆ.


ಅಮೇಥಿಯಲ್ಲಿ ಸ್ಮೃತಿ ಇರಾನಿ ಹಿನ್ನಡೆಗೆ ಹಂಚಿಕೊಂಡಿರುವ ಮೀಮ್ಸ್ ಇದಾಗಿದೆ.


ಚುನಾವಣಾ ಫಲಿತಾಂಶದ ಕುರಿತು ಮಾತುಕತೆ, ಷೇರು ಮಾರುಕಟ್ಟೆಯಲ್ಲಿ ಆದ ತಲ್ಲಣದ ಕುರಿತು ಮೀಮ್ಸ್ ಅನ್ನು ಹಂಚಿಕೊಳ್ಳಲಾಗಿತ್ತು.

Exit mobile version