ನವದೆಹಲಿ: ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ನಾನಾ ತಂತ್ರಗಳು, ಕಸರತ್ತುಗಳನ್ನು ಮಾಡುತ್ತಾರೆ. ನಾನಾ ದೇವರು, ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಮಧ್ಯ ಪ್ರದೇಶದಲ್ಲಿ (Madhya Pradesh election) ಕಾಂಗ್ರೆಸ್ ಅಭ್ಯರ್ಥಿಯೊಬ್ಬರು (Congress Candidate) ವಿಚಿತ್ರ ನಡೆಯನ್ನು ಅನುಸರಿಸಿದ್ದಾರೆ. ಚುನಾವಣೆಗೆ ಮುನ್ನ ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪರಸ್ ಸಕ್ಲೇಚಾ ಫಕೀರ್ ಬಾಬಾನ ಮುಂದೆ ಚಪ್ಪಲಿಯಿಂದ ಹೊಡಿಸಿಕೊಂಡಿದ್ದಾರೆ(Beating by Slippers). ಈ ವಿಡಿಯೋ ವೈರಲ್ ಆಗಿದೆ(Video Viral). 2019ರಲ್ಲಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಅವರನ್ನು ಮಾಟಗಾತಿ ಎಂದು ಕರೆದು ಇವರು ವಿವಾದಕ್ಕೆ ಕಾರಣವಾಗಿದ್ದರು.
ಫಕೀರ್ ಬಾಬಾ ಪರಾಸ್ ಸಕ್ಲೇಚಾ ಅವರನ್ನು ಕೆಲವೊಮ್ಮೆ ಬೆನ್ನಿನ ಮೇಲೆ, ಕೆಲವೊಮ್ಮೆ ಭುಜದ ಮೇಲೆ ಮತ್ತು ಕೆಲವೊಮ್ಮೆ ಮುಖದ ಮೇಲೆ ಚಪ್ಪಲಿಯಿಂದ ಬಾರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಒಮ್ಮೆ ಹೊಡೆದ ನಂತರ ಅವನು ನಿಲ್ಲಿಸುವುದಿಲ್ಲ. ಮೇಲಿಂದ ಮೇಲೆ ಫಕೀರ್ ಬಾಬಾ ಜೋರಾಗಿ ಚಪ್ಪಲಿಯಿಂದ ಹೊಡೆಯುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಕೆಲವರು ಹೊಡೆಯುವುದನ್ನು ನಿಲ್ಲಿಸಿ ಎಂದು ಹೇಳಿದರು ಬಾಬಾ ನಿಲ್ಲಿಸುವುದಿಲ್ಲ. ಈ ವೇಳೆ, ಕಾಂಗ್ರೆಸ್ ಅಭ್ಯರ್ಥಿ ನಗುತ್ತಲೇ ಇರುತ್ತಾರೆ ಮತ್ತು ಇತರರು ಬಾಬಾನ ಪಾದ ಸ್ಪರ್ಶ ಮಾಡುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
चुनाव जीतने के लिए चप्पल खाने हो भी तैयार | Paras Saklecha | Election 2023 | #shorts | NewZ Front#parassaklecha #election2023 #congress #mpelection #fakirbaba #chappalwalebaba #pitaiwalebaba #viralvideo #socialmedia #sachkiraftar #newzfront pic.twitter.com/AsUdWlvP87
— Journalist Dharmveer Jarwal (@veeer999) November 17, 2023
ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಸಖತ್ ಗೇಲಿ ಮಾಡಿದ್ದಾರೆ. ಯಾರೋ ಒಬ್ಬರು ಚಪ್ಪಲಿ ಹಾಕಿಸಿಕೊಳ್ಳು ಕಾಂಗ್ರೆಸ್ ಅರ್ಹ ಪಾರ್ಟಿ ಎಂದು ಹೇಳಿದರೆ, ಮತ್ತೊಬ್ಬರು ಆಶೀರ್ವಾದ ಮಾಡುವ ಯಾವುದೇ ಅವಕಾಶವನ್ನು ಬಾಬಾ ಬಿಟ್ಟಂತೆ ಕಾಣುತ್ತಿಲ್ಲ ಎಂದು ಕುಹಕವಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗೆ ಚಪ್ಪಲಿ ಮೂಲಕ ಆಶೀರ್ವಾದ ಮಾಡುತ್ತಿರುವ ವ್ಯಕ್ತಿಯ ಫಕೀರ್ ಆಗಿದ್ದು, ಅವರ ಹೆಸರು ಕಮಲ್ ರಾಝಾ. ಮ್ಹೌ ನೀಮಚ್ ರಸ್ತೆಯಲ್ಲಿ ತಿರುಗಾಡುತ್ತಾ ತನ್ನ ಬಳಿಗೆ ಬರುವ ಜನರಿಗೆ ಚಪ್ಪಲಿಯಿಂದ ಹೊಡೆದು ಆಶೀರ್ವಾದ ಮಾಡುತ್ತಾರೆ. ಅನೇಕ ಜನರು ತಮ್ಮ ದೂರುಗಳೊಂದಿಗೆ ಹೊಸ ಚಪ್ಪಲಿಗಳನ್ನು ತಂದು ಬಾಬಾಗೆ ನೀಡುತ್ತಾರೆ. ಅವುಗಳಿಂದಲೇ ಬಾಬಾ ಆಶೀರ್ವಾದ ಮಾಡಬಹುದು ಎಂಬುದು ಅವರ ನಂಬಿಕೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿಯನ್ನೂ ಓದಿ: Viral Video: ಗೂಳಿಯೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸಬೇಕೆ? ಈತನ ತಂತ್ರ ಫಾಲೋ ಮಾಡಿ!