ನವದೆಹಲಿ: ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುವ ವಿಡಿಯೋ(Viral video) ಬೆಚ್ಚಿ ಬೀಳಿಸುತ್ತೆ. ಇದೀಗ ಅಂತಹದ್ದೇ ಒಂದು ಘಟನೆ ದೆಹಲಿ(Delhi)ಯಲ್ಲಿ ನಡೆದಿದ್ದು, ಎರಡು ಹಸುಗಳ ನಡುವಿನ ಬಿಗ್ ಫೈಟ್(Cow fight)ನಿಂದಾಗಿ ಇಬ್ಬರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದರು. ಈ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?
ಒಂದು ಅಂಗಡಿ ಎದುರು ಮೂವರು ಬಾಲಕಿಯರು ತಿಂಡಿ ತಿನ್ನುತ್ತಿರುತ್ತಾರೆ. ಇಬ್ಬರು ಹುಡುಗಿಯರು ಬೆಂಚ್ ಮೇಲೆ ಕುಳಿತುಕೊಂಡು ಇನ್ನಿಬ್ಬರು ಪಕ್ಕದಲ್ಲೇ ನಿಂತು ಫ್ರೆಂಚ್ ಫ್ರೈಸ್ ಸವಿಯುತ್ತಿರುತ್ತಾರೆ. ಕುಳಿತಿದ ಹುಡುಗಿ ಇದ್ದಕ್ಕಿದ್ದಂತೆ ಆ ಏನೋ ಬರುತ್ತಿರುವುದನ್ನು ಗಮನಿಸುತ್ತಾರೆ. ಇನ್ನೇನು ಎದ್ದು ಓಡಬೇಕು ಅನ್ನೊವಷ್ಟರಲ್ಲಿ ಎಲ್ಲಿಂದಲೋ ಓಡಿ ಬಂದ ಎರಡು ದರನಗಳು ಏಕಾಏಕಿ ಹುಡುಗಿಯರ ಮೇಲೆ ಎರಗಿವೆ. ದನಗಳ ನಡುವಿನ ಫೈಟ್‌ಗೆ ಒಬ್ಬಳು ಹುಡುಗಿ ಕೆಳಗೆ ಬಿದ್ದು ಅಪ್ಪಚ್ಚಿಯಾದರೆ ಮತ್ತೊಬ್ಬಳು ದೂರ ಹೋಗಿ ಬಿದ್ದಿದ್ದಾಳೆ. ಅಲ್ಲೇ ಇದ್ದ ಮೂರನೇ ಹುಡುಗಿ ಜಸ್ಟ್ ಮಿಸ್ ಆಗಿದ್ದಾಳೆ. ಕೆಳಗೆ ಬಿದ್ದಿದ್ದ ಬಾಲಕಿಗೆ ಹಸುವಿನ ಕಾಲಿನಡಿಗೆ ಬಿದ್ದು, ತುಳಿಯಲ್ಪಟ್ಟಿದ್ದಾಳೆ. ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
😰😰😰
— Ghar Ke Kalesh (@gharkekalesh) May 17, 2024
pic.twitter.com/SZCdo3f20O
ತಕ್ಷಣ ಅಲ್ಲಿದ್ದ ಜನ ಓಡಿ ಬಂದು ಬಾಲಕಿಯನ್ನು ಹಿಡಿದೆಳೆದು ರಕ್ಷಿಸಿ, ಹಸುಗಳನ್ನು ಓಡಿಸಿದ್ದಾರೆ. ಘಟನೆಯಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 1.1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಗಳಿಸಿದೆ. ಕೆಲವು ದಿನಗಳ ಹಿಂದೆ ದಿಲ್ಲಿಯಲ್ಲಿ ಮೊಬೈಲ್ ಅಂಗಡಿಗೆ ನುಗ್ಗಿದ್ದ ಗೂಳಿಯೊಂದು ದಾಂಧಲೆ ಎಬ್ಬಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: Viral Video: ಛೀ…ಈತನೆಂಥಾ ಕಾಮುಕ! ಸಾರ್ವಜನಿಕ ಸ್ಥಳದಲ್ಲಿ ಈ ಪಾಪಿ ಬಾಲಕಿಗೆ ಮಾಡಿದ್ದೇನು ಗೊತ್ತಾ?
ಕೆಲವು ತಿಂಗಳ ಹಿಂದೆ ಯುವಕನೊಬ್ಬ ಅದೇ ರೀತಿ ಗೂಳಿಯೊಂದಿಗೆ ಕಾದಾಡಿದ ವಿಡಿಯೊ ವೈರಲ್ (Viral Video) ಆಗಿತ್ತು. ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಗೂಳಿಯ ಬಳಿ ಕಾಲು ಕೆದರಿಕೊಂಡು ಜಗಳಕ್ಕೆ ನಿಂತ ಯುವಕನ ಪಾಡು ಅಧೋಗತಿಯಾಗಿತ್ತು. ರಸ್ತೆ ಮಧ್ಯೆ ಗೂಳಿಯೊಂದು ಸುಮ್ಮನೆ ನಿಂತಿತ್ತು. ಅಲ್ಲಿಗೆ ಯುವಕನೊಬ್ಬ ಬರುತ್ತಾನೆ. ಅವನು ಮದ್ಯ ಸೇವಿಸಿ ನಶೆಯಲ್ಲಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಗೂಳಿ ಎದುರು ನಿಂತು ಅದನ್ನು ಕೆಣಕುತ್ತಾನೆ. ಗೂಳಿ ಸುಮ್ಮನಿರುತ್ತದೆ. ಬಳಿಕ ಮುಖ ತಿರುಗಿಸುತ್ತದೆ. ಆದರೂ ಆತ ಸುಮ್ಮನಿರುವುದುಲ್ಲ. ಫೈಟ್ ಮಾಡುವಂತೆ ಎರಡೂ ಕೈಗಳನ್ನು ಅದರ ಕೊಂಬಿನ ಬಳಿ ಚಾಚುತ್ತಾನೆ. ಅದುವರೆಗೆ ತಾಳ್ಮೆಯಿಂದ ಇದ್ದ ಗೂಳಿ ಒಮ್ಮೆಲೆ ಕೊಂಬಿನಿಂದ ಎತ್ತಿ ಗಾಳಿಯಲ್ಲಿ ಅಲ್ಲಾಡಿಸಿ ಆತನನ್ನು ಬೀಳಿಸುತ್ತದೆ. ಅದೃಷ್ಟವಶಾತ್ ಅವನಿಗೆ ಹೆಚ್ಚಿನ ಏಟಾಗಿರಲಿಲ್ಲ. ಆಗ ಬುದ್ಧಿ ಕಲಿತ ಆತ ʼಮಾಡಿದ್ದುಣ್ಣೋ ಮಹಾರಾಯʼ ಎನ್ನುವಂತೆ ಮೈ ಕೈ ಉಜ್ಜಿಕೊಂಡು ಅಲ್ಲಿಂದ ತೆರಳುತ್ತಾನೆ.