Site icon Vistara News

Viral Video: ಇಸ್ರೇಲಿ ಅಪಹೃತನ ಮೃತ ದೇಹವನ್ನು ನಡುಬೀದಿಯಲ್ಲಿ ಒದ್ದ ಪ್ಯಾಲೆಸ್ತೀನ್‌ ಜನ!

Viral Video

ಹತ್ಯೆಗೀಡಾದ ಹಮಾಸ್ ಒತ್ತೆಯಾಳುವಿನ (Hamas hostage) ದೇಹವನ್ನು ನಡು ರಸ್ತೆಯಲ್ಲಿ ಗಾಜಾ ನಾಗರಿಕರು (Gaza civilians) ಒದೆಯುವ, ನಿಂದಿಸುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಹತ್ಯೆಗೀಡಾದ ಹಮಾಸ್ ಒತ್ತೆಯಾಳು ಐಟಾನ್ ಲೆವಿಯ ಕುಟುಂಬವು ಇದನ್ನು ಹಂಚಿಕೊಂಡು ತೀವ್ರ ದುಃಖ ವ್ಯಕ್ತಪಡಿಸಿದೆ.

ಈ ವಿಡಿಯೋ ತುಣುಕನ್ನು ಯೋಸೆಫ್ ಹಡ್ಡಾಡ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ 7ರಂದು ಈಟಾನ್ ಲೆವಿಯ ಅಪಹರಣದ ಆಘಾತಕಾರಿ ವಿಡಿಯೋ ಇದಾಗಿದೆ. ಅವರನ್ನು ಗಾಜಾಕ್ಕೆ ಅಪಹರಿಸಿ ಅಲ್ಲಿ ಮಸೀದಿಯ ಪ್ಲಾಜಾದಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ.

ಇವರು ಗಾಜಾದ ಮುಗ್ಧ ನಾಗರಿಕರು. 43 ವಾರಗಳು ಕಳೆದಿವೆ. ಆದರೆ ಇವರನ್ನು ನಾವು ಮರೆಯುವುದಿಲ್ಲ. ಎಲ್ಲಾ ಒತ್ತೆಯಾಳುಗಳನ್ನು ಹಿಂತಿರುಗಿಸಬೇಕು. ಸಾವಿಗೆ ಕಾರಣರಾದ ಪ್ರತಿಯೊಬ್ಬರನ್ನೂ ನಾಶಪಡಿಸಬೇಕು ಎಂದು ಹಡ್ಡಾಡ್ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ವಿಡಿಯೋದಲ್ಲಿ ಲೆವಿಯ ದೇಹವನ್ನು ವಾಹನದ ಹಿಂಭಾಗದಲ್ಲಿ ಲಗೇಜ್‌ನಂತೆ ಅಮಾನುಷವಾಗಿ ಹಾಕಿ ಗಾಜಾಕ್ಕೆ ಎಳೆದುಕೊಂಡು ಹೋಗುವುದು ಕಾಣಿಸುತ್ತದೆ. ಗಾಜಾದಲ್ಲಿ ನಾಗರಿಕರ ಗುಂಪು ಕಾರನ್ನು ಹಿಂಬಾಲಿಸುವುದು ಕಂಡುಬರುತ್ತದೆ. ಲೆವಿಯ ನಿರ್ಜೀವ ದೇಹವನ್ನು ಜನ ಮುಗಿಬಿದ್ದು ತುಳಿಯುವುದನ್ನು ದೃಶ್ಯಗಳಲ್ಲಿ ಕಾಣಬಹುದು.

52 ವರ್ಷದ ಲೆವಿ ಅವರು ಬ್ಯಾಟ್ ಯಾಮ್‌ನ ಟ್ಯಾಕ್ಸಿ ಡ್ರೈವರ್ ಆಗಿದ್ದರು. ಕಳೆದ ವರ್ಷ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಪ್ರಯಾಣಿಕರನ್ನು ಬಿಡಲು ಕಿಬ್ಬುಟ್ಜ್ ಬೀರಿಯಲ್ಲಿದ್ದರು. ಅವರಿಗೆ ನಿಖರವಾಗಿ ಏನಾಯಿತು ಎಂಬುದು ಅಸ್ಪಷ್ಟವಾಗಿದೆ. ಆದರೆ ಹಮಾಸ್ ಭಯೋತ್ಪಾದಕರು ಅವರನ್ನು ಹೊರಹೋಗದಂತೆ ತಡೆದಿದ್ದಾರೆ. ಅವರ ಕ್ಯಾಬ್‌ ಡ್ರೋನ್ ಅಥವಾ ಕ್ಷಿಪಣಿ ದಾಳಿಗೆ ತುತ್ತಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.


ಲೆವಿ ವಿಡಿಯೋ ನೋಡಿ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಮೃತ ದೇಹವನ್ನು ಒದೆಯುವುದು ಮನುಷ್ಯ ಮಾಡಬಹುದಾದ ಅತ್ಯಂತ ಹೇಡಿತನದ ಕೆಲಸ. ಇದು ತುಂಬಾ ಕೆಟ್ಟದು ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Ismail Haniyh Killing: ಹನಿಯೆಹ್‌ ಹತ್ಯೆ ಹಿಂದೆ ಇಸ್ರೇಲ್‌ನ ಮಾಸ್ಟರ್‌ ಪ್ಲ್ಯಾನ್‌? ಮೊಸಾದ್‌ನ ಸೀಕ್ರೆಟ್‌ ಏಜೆಂಟ್‌ಗಳಿಂದ ಬಾಂಬ್‌ ಸ್ಫೋಟ?

ಮತ್ತೊಬ್ಬರು ಭಯೋತ್ಪಾದನೆಯ ವಿರುದ್ಧದ ಅತ್ಯಂತ ನ್ಯಾಯಯುತವಾದ ಯುದ್ಧದಲ್ಲಿ ಇಸ್ರೇಲ್ ನೊಂದಿಗೆ ನಿಂತುಕೊಳ್ಳಿ ಎಂದು ಕರೆ ನೀಡಿದ್ದಾರೆ. ಈ ದುಷ್ಕರ್ಮಿಗಳು ತಮ್ಮ ಅಪರಾಧಗಳನ್ನು ಮಾಡುವಾಗ ಪ್ರದರ್ಶಿಸುವ ಉಲ್ಲಾಸ ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಇದು ಯಾವುದೇ ರೀತಿಯ ಸಾಮಾನ್ಯ ಮಾನವೀಯತೆಯಲ್ಲ. ಕ್ರೂರತೆಯಿಂದ ಕೂಡಿದೆ ಎಂದು ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ. ಭಯಾನಕ ಮತ್ತು ಕ್ಷಮಿಸಲಾಗದು ಎಂದು ಮತ್ತೊಬ್ಬರು ಹೇಳಿದ್ದು, ಗಾಜಾದ ಈ ʼಮುಗ್ಧ ನಾಗರಿಕರುʼ ಎಷ್ಟು ಕ್ರೂರರು, ಎಂತಹ ಅನಾಗರಿಕ ಸಂಸ್ಕೃತಿ ಹೊಂದಿರುವವರು ಎಂದು ಇನ್ನೊಬ್ಬರು ವ್ಯಂಗ್ಯವಾಗಿ ಹೇಳಿದ್ದಾರೆ.

Exit mobile version