ನವದೆಹಲಿ: ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಬಹಳ ಪ್ರಾಧಾನ್ಯತೆ ಇದೆ. ಹಿಂದೆಲ್ಲ ಒಂದು ವಾರಗಳ ಕಾಲ ಮದುವೆಯ ಸಂಪ್ರದಾಯಗಳು ನಡೆಯುತ್ತಿದ್ದವು. ಇಂದಿಗೆ ಅಷ್ಟು ದೀರ್ಘವಾಗಿ ನಡೆಯುವ ಪರಿಪಾಠ ಇಲ್ಲವಾದರೂ ಬಹಳಷ್ಟು ಆಚರಣೆಗಳನ್ನು ಪಾಲಿಸಲಾಗುತ್ತದೆ. ಮಾತ್ರವಲ್ಲ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಂಪ್ರದಾಯದಲ್ಲಿ ಬದಲಾವಣೆ ಕಂಡು ಬರುತ್ತದೆ. ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಲ್ಲಿ ಮದುವೆ ಸಂದರ್ಭದಲ್ಲಿ ವರ ಕುದುರೆ ಮೇಲೆ ಆಗಮಿಸುವುದು ರೂಢಿ. ಅದರಂತೆ ಇಲ್ಲಿ ಮಧುಮಗನೊಬ್ಬ ಕುದುರೆ ಮೇಲೆ ಕುಳಿತು ಬರುವ ವಿಡಿಯೊ ವೈರಲ್ ಆಗಿದೆ (Viral Video). ಈ ದೃಶ್ಯ ನಿಮ್ಮ ಮುಖದಲ್ಲೂ ನಗು ಅರಳಿಸಲಿದೆ.
ಅಂತಹದ್ದೇನಿದೆ ವಿಡಿಯೊದಲ್ಲಿ?
ಈ ವಿಡಿಯೊದಲ್ಲಿ ವರ ಕುದುರೆಯ ಗೊಂಬೆಯ ಮೇಲೆ ಕುಳಿತು ಬರುವ ದೃಶ್ಯ ಸೆರೆಯಾಗಿದೆ. ಮದುವೆಯ ಸಾಂಪ್ರದಾಯಿಕ ಉಡುಗೆ, ಪೇಟ ತೊಟ್ಟ ವರ ಚಕ್ರ ಇರುವ ಕುದುರೆ ಗೊಂಬೆಯ ಮೇಲೆ ಕುಳಿತು ಆಗಮಿಸುತ್ತಾನೆ. ಜತೆಗೆ ಒಬ್ಬರು ಆತನಿಗೆ ಕೊಡೆ ಹಿಡಿದು ಹೆಜ್ಜೆ ಹಾಕುತ್ತಿದ್ದರೆ ಸುತ್ತ ಇದ್ದವರು ಖುಷಿಯಿಂದ ಕುಣಿಯುತ್ತಾ ಬರುತ್ತಾರೆ. ಜತೆಗಿದ್ದರು ನೇರಳೆ ಬಣ್ಣದ ಡೆಸ್ ಕೋಡ್ ಫಾಲೋ ಮಾಡುತ್ತಿರುವುದು ಕಂಡು ಬಂದಿದೆ. ಒಟ್ಟಿನಲ್ಲಿ ಮದುವೆಯ ದಿಬ್ಬಣವನ್ನು ಅದ್ದೂರಿಯಾಗಿಯೇ ಆಯೋಜಿಸಲಾಗಿರುವುದು ಕಂಡು ಬಂದಿದೆ.
ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೀಗೆ…
ಸದ್ಯ ಈ ವಿಡಿಯೊವನ್ನು ಸುಮಾರು 2.3 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಹಲವು ಮಂದಿ ಪ್ರತಿಕ್ರಿಯಿಸಿದ್ದಾರೆ. ʼʼಲೆಜೆಂಡ್. ನಿಮ್ಮೊಳಗಿನ ಮಗುವಿನ ಮುಗ್ಧತೆ ಕಳೆದು ಹೋದರೆ ಜೀವನವನ್ನು ಖುಷಿಯಿಂದ ಅನುಭವಿಸಲು ಸಾಧ್ಯವಿಲ್ಲ. ಇದು ತುಂಬ ತಮಾಷೆಯಾಗಿದೆ. ತುಂಬಾ ಇಷ್ಟವಾಯ್ತುʼʼ ಎಂದು ಒಬ್ಬರು ಹೇಳಿದ್ದಾರೆ. ʼʼವರ ತುಂಬ ಪ್ರಬುದ್ಧತೆಯಿಂದ ಅಲೋಚಿಸುತ್ತಿರುವುದು ಇದರಿಂದ ತಿಳಿದು ಬರುತ್ತದೆ. ಪ್ರಾಣಿಗಳಿಗೆ ಹಿಂಸೆ ನೀಡುವುದಕ್ಕಿಂತ ಗೊಂಬೆಯನ್ನು ಬಳಸುವುದು ಉತ್ತಮ. ಮಾದರಿ ಕಾರ್ಯʼʼ ಎಂದು ಇನ್ನೊಬ್ಬರು ಮೆಚ್ಚಿಗೆ ಸೂಚಿಸಿದ್ದಾರೆ. ʼʼಇದು ನಿಜವಾಗಿಯೂ ಉತ್ತಮ ನಡವಳಿಕೆ. ಕುದುರೆ ಮೇಲೆ ಸವಾರಿ ಮಾಡುವ ಮೂಲಕ ಪ್ರಾಣಿ ಹಿಂಸೆಗೆ ಕುಮ್ಮಕ್ಕು ನೀಡಬಾರದುʼʼ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ʼʼವರನ ಸರಳತೆಗೆ ಮೆಚ್ಚುಗೆ ಇದೆ. ಆತ ಪ್ರಾಣಿ ಹಿಂಸೆಯಿಂದ ದೂರ ಉಳಿದು ಮಾದರಿಯಾಗಿದ್ದಾನೆʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ʼʼಈ ಸಮಾರಂಭದಲ್ಲಿ ಪ್ರಾಣಿಗೆ ಹಿಂಸೆಯಾಗಿಲ್ಲ ಎನ್ನುವುದೇ ಉತ್ತಮ ವಿಚಾರʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ʼʼವಧು ಉತ್ತಮ ವರನನ್ನೇ ಆಯ್ಕೆ ಮಾಡಿಕೊಂಡಿದ್ದಾಳೆ. ಆಕೆಗೆ ಅಭಿನಂದನೆಗಳುʼʼ ಎಂದು ನೋಡುಗರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ನೀಲಿ ದೋಸೆ ತಯಾರಿಸಿದ ಬಾಣಸಿಗ; ಹಿಟ್ಟಿಗೆ ಹಾರ್ಪಿಕ್ ಮಿಕ್ಸ್ ಅಂದ್ರು ನೆಟ್ಟಿಗರು
ವಿಮರ್ಶೆಯೂ ಬಂದಿದೆ
ಮೆಚ್ಚುಗೆಯ ಜತೆಗೆ ಇತ್ತ ವರನ ವರ್ತನೆಗೆ ಬೇಸರವೂ ವ್ಯಕ್ತವಾಗಿದೆ. ʼʼಒಂದು ವೇಳೆ ನಾನು ವಧುವಿನ ಹೆತ್ತವರಾಗಿದ್ದರೆ ಈ ಮದುವೆಯನ್ನು ಕ್ಯಾನ್ಸಲ್ ಮಾಡುತ್ತಿದ್ದೆ. ವರ ಪ್ರಬುದ್ಧನಾಗಿಲ್ಲ ಎನ್ನುವುದು ಇದರಿಂದ ತಿಳಿದು ಬರುತ್ತದೆ. ಈತ ಕುಟುಂಬವನ್ನು ಸರಿದೂಗಿಸಿಕೊಂಡುವ ಹೋಗುವ ಸಾಮರ್ಥ್ಯ ಹೊಂದಿಲ್ಲ ಎನಿಸುತ್ತದೆʼʼ ಎಂದು ಒಬ್ಬರು ಟೀಕಿಸಿದ್ದಾರೆ. ʼʼದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ನೈಜ ಕುದುರೆ ಮೇಲೆ ಅಗಮಿಸಿʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಹಲವರ ಗಮನ ಸೆಳೆದಿರುವುದಂತೂ ಸತ್ಯ.
ಹಿಂದೆಯೂ ನಡೆದಿತ್ತು
ಕೆಲವು ದಿನಗಳ ಹಿಂದೆ ವರನು ಶವಪೆಟ್ಟಿಗೆಯಲ್ಲಿ ತನ್ನ ಮದುವೆಗೆ ಬರುತ್ತಿರುವ ವಿಡಿಯೊ ವೈರಲ್ ಆಗಿತ್ತು. ಅಮೆರಿಕಾದಲ್ಲಿ ನಡೆದ ಈ ವಿಡಿಯೊ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಆರು ಮಂದಿ ದೊಡ್ಡ ವಾಹನದಲ್ಲಿ ಶವಪೆಟ್ಟಿಗೆಯನ್ನು ತರುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ