Viral Video: ವಿಶೇಷ ಕುದುರೆ ಏರಿದ ವರ; ನೆಟ್ಟಿಗರಿಗೆ ಅಚ್ಚರಿಯೋ ಅಚ್ಚರಿ! - Vistara News

ವೈರಲ್ ನ್ಯೂಸ್

Viral Video: ವಿಶೇಷ ಕುದುರೆ ಏರಿದ ವರ; ನೆಟ್ಟಿಗರಿಗೆ ಅಚ್ಚರಿಯೋ ಅಚ್ಚರಿ!

Viral Video: ವರನೊಬ್ಬ ಕುದುರೆ ಏರಿ ಮದುವೆ ಮಂಟಪಕ್ಕೆ ಆಗಮಿಸುವ ವಿಡಿಯೊ ವೈರಲ್‌ ಆಗಿದೆ. ಅಷ್ಟಕ್ಕೂ ಇದರಲ್ಲಿನ ವಿಶೇಷತೆ ಏನು ಎನ್ನುವುದನ್ನು ತಿಳಿಯಲು ವಿಡಿಯೊ ನೋಡಿ.

VISTARANEWS.COM


on

horse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಬಹಳ ಪ್ರಾಧಾನ್ಯತೆ ಇದೆ. ಹಿಂದೆಲ್ಲ ಒಂದು ವಾರಗಳ ಕಾಲ ಮದುವೆಯ ಸಂಪ್ರದಾಯಗಳು ನಡೆಯುತ್ತಿದ್ದವು. ಇಂದಿಗೆ ಅಷ್ಟು ದೀರ್ಘವಾಗಿ ನಡೆಯುವ ಪರಿಪಾಠ ಇಲ್ಲವಾದರೂ ಬಹಳಷ್ಟು ಆಚರಣೆಗಳನ್ನು ಪಾಲಿಸಲಾಗುತ್ತದೆ. ಮಾತ್ರವಲ್ಲ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಂಪ್ರದಾಯದಲ್ಲಿ ಬದಲಾವಣೆ ಕಂಡು ಬರುತ್ತದೆ. ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಲ್ಲಿ ಮದುವೆ ಸಂದರ್ಭದಲ್ಲಿ ವರ ಕುದುರೆ ಮೇಲೆ ಆಗಮಿಸುವುದು ರೂಢಿ. ಅದರಂತೆ ಇಲ್ಲಿ ಮಧುಮಗನೊಬ್ಬ ಕುದುರೆ ಮೇಲೆ ಕುಳಿತು ಬರುವ ವಿಡಿಯೊ ವೈರಲ್‌ ಆಗಿದೆ (Viral Video). ಈ ದೃಶ್ಯ ನಿಮ್ಮ ಮುಖದಲ್ಲೂ ನಗು ಅರಳಿಸಲಿದೆ.

ಅಂತಹದ್ದೇನಿದೆ ವಿಡಿಯೊದಲ್ಲಿ?

ಈ ವಿಡಿಯೊದಲ್ಲಿ ವರ ಕುದುರೆಯ ಗೊಂಬೆಯ ಮೇಲೆ ಕುಳಿತು ಬರುವ ದೃಶ್ಯ ಸೆರೆಯಾಗಿದೆ. ಮದುವೆಯ ಸಾಂಪ್ರದಾಯಿಕ ಉಡುಗೆ, ಪೇಟ ತೊಟ್ಟ ವರ ಚಕ್ರ ಇರುವ ಕುದುರೆ ಗೊಂಬೆಯ ಮೇಲೆ ಕುಳಿತು ಆಗಮಿಸುತ್ತಾನೆ. ಜತೆಗೆ ಒಬ್ಬರು ಆತನಿಗೆ ಕೊಡೆ ಹಿಡಿದು ಹೆಜ್ಜೆ ಹಾಕುತ್ತಿದ್ದರೆ ಸುತ್ತ ಇದ್ದವರು ಖುಷಿಯಿಂದ ಕುಣಿಯುತ್ತಾ ಬರುತ್ತಾರೆ. ಜತೆಗಿದ್ದರು ನೇರಳೆ ಬಣ್ಣದ ಡೆಸ್‌ ಕೋಡ್‌ ಫಾಲೋ ಮಾಡುತ್ತಿರುವುದು ಕಂಡು ಬಂದಿದೆ. ಒಟ್ಟಿನಲ್ಲಿ ಮದುವೆಯ ದಿಬ್ಬಣವನ್ನು ಅದ್ದೂರಿಯಾಗಿಯೇ ಆಯೋಜಿಸಲಾಗಿರುವುದು ಕಂಡು ಬಂದಿದೆ.

ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೀಗೆ…

ಸದ್ಯ ಈ ವಿಡಿಯೊವನ್ನು ಸುಮಾರು 2.3 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಹಲವು ಮಂದಿ ಪ್ರತಿಕ್ರಿಯಿಸಿದ್ದಾರೆ. ʼʼಲೆಜೆಂಡ್‌. ನಿಮ್ಮೊಳಗಿನ ಮಗುವಿನ ಮುಗ್ಧತೆ ಕಳೆದು ಹೋದರೆ ಜೀವನವನ್ನು ಖುಷಿಯಿಂದ ಅನುಭವಿಸಲು ಸಾಧ್ಯವಿಲ್ಲ. ಇದು ತುಂಬ ತಮಾಷೆಯಾಗಿದೆ. ತುಂಬಾ ಇಷ್ಟವಾಯ್ತುʼʼ ಎಂದು ಒಬ್ಬರು ಹೇಳಿದ್ದಾರೆ. ʼʼವರ ತುಂಬ ಪ್ರಬುದ್ಧತೆಯಿಂದ ಅಲೋಚಿಸುತ್ತಿರುವುದು ಇದರಿಂದ ತಿಳಿದು ಬರುತ್ತದೆ. ಪ್ರಾಣಿಗಳಿಗೆ ಹಿಂಸೆ ನೀಡುವುದಕ್ಕಿಂತ ಗೊಂಬೆಯನ್ನು ಬಳಸುವುದು ಉತ್ತಮ. ಮಾದರಿ ಕಾರ್ಯʼʼ ಎಂದು ಇನ್ನೊಬ್ಬರು ಮೆಚ್ಚಿಗೆ ಸೂಚಿಸಿದ್ದಾರೆ. ʼʼಇದು ನಿಜವಾಗಿಯೂ ಉತ್ತಮ ನಡವಳಿಕೆ. ಕುದುರೆ ಮೇಲೆ ಸವಾರಿ ಮಾಡುವ ಮೂಲಕ ಪ್ರಾಣಿ ಹಿಂಸೆಗೆ ಕುಮ್ಮಕ್ಕು ನೀಡಬಾರದುʼʼ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ʼʼವರನ ಸರಳತೆಗೆ ಮೆಚ್ಚುಗೆ ಇದೆ. ಆತ ಪ್ರಾಣಿ ಹಿಂಸೆಯಿಂದ ದೂರ ಉಳಿದು ಮಾದರಿಯಾಗಿದ್ದಾನೆʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ʼʼಈ ಸಮಾರಂಭದಲ್ಲಿ ಪ್ರಾಣಿಗೆ ಹಿಂಸೆಯಾಗಿಲ್ಲ ಎನ್ನುವುದೇ ಉತ್ತಮ ವಿಚಾರʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼವಧು ಉತ್ತಮ ವರನನ್ನೇ ಆಯ್ಕೆ ಮಾಡಿಕೊಂಡಿದ್ದಾಳೆ. ಆಕೆಗೆ ಅಭಿನಂದನೆಗಳುʼʼ ಎಂದು ನೋಡುಗರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ನೀಲಿ ದೋಸೆ ತಯಾರಿಸಿದ ಬಾಣಸಿಗ; ಹಿಟ್ಟಿಗೆ ಹಾರ್ಪಿಕ್‌ ಮಿಕ್ಸ್ ಅಂದ್ರು ನೆಟ್ಟಿಗರು

ವಿಮರ್ಶೆಯೂ ಬಂದಿದೆ

ಮೆಚ್ಚುಗೆಯ ಜತೆಗೆ ಇತ್ತ ವರನ ವರ್ತನೆಗೆ ಬೇಸರವೂ ವ್ಯಕ್ತವಾಗಿದೆ. ʼʼಒಂದು ವೇಳೆ ನಾನು ವಧುವಿನ ಹೆತ್ತವರಾಗಿದ್ದರೆ ಈ ಮದುವೆಯನ್ನು ಕ್ಯಾನ್ಸಲ್‌ ಮಾಡುತ್ತಿದ್ದೆ. ವರ ಪ್ರಬುದ್ಧನಾಗಿಲ್ಲ ಎನ್ನುವುದು ಇದರಿಂದ ತಿಳಿದು ಬರುತ್ತದೆ. ಈತ ಕುಟುಂಬವನ್ನು ಸರಿದೂಗಿಸಿಕೊಂಡುವ ಹೋಗುವ ಸಾಮರ್ಥ್ಯ ಹೊಂದಿಲ್ಲ ಎನಿಸುತ್ತದೆʼʼ ಎಂದು ಒಬ್ಬರು ಟೀಕಿಸಿದ್ದಾರೆ. ʼʼದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ನೈಜ ಕುದುರೆ ಮೇಲೆ ಅಗಮಿಸಿʼʼ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಹಲವರ ಗಮನ ಸೆಳೆದಿರುವುದಂತೂ ಸತ್ಯ.

ಹಿಂದೆಯೂ ನಡೆದಿತ್ತು

ಕೆಲವು ದಿನಗಳ ಹಿಂದೆ ವರನು ಶವಪೆಟ್ಟಿಗೆಯಲ್ಲಿ ತನ್ನ ಮದುವೆಗೆ ಬರುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಅಮೆರಿಕಾದಲ್ಲಿ ನಡೆದ ಈ ವಿಡಿಯೊ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಆರು ಮಂದಿ ದೊಡ್ಡ ವಾಹನದಲ್ಲಿ ಶವಪೆಟ್ಟಿಗೆಯನ್ನು ತರುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ! ವಿಡಿಯೊ ನೋಡಿ

Viral Video: ಕಳ್ಳನೊಬ್ಬ ಮಹಿಳೆಯೊಬ್ಬರ ಮೊಬೈಲ್ ಕದ್ದು ಓಡುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಕಳ್ಳ ಮಹಿಳೆಯಿಂದ ಕದ್ದ ಮೊಬೈಲ್ ಪೋನ್ ಅನ್ನು ತೆಗೆದುಕೊಂಡು ತಪ್ಪಿಸಿಕೊಳ್ಳಲು ಜೋರಾಗಿ ಓಡುತ್ತಾ ರಸ್ತೆ ದಾಟುತ್ತಿದ್ದಾಗ ಎದುರಿಗೆ ವೇಗವಾಗಿ ಬಂದ ಕಾರೊಂದು ಆತನಿಗೆ ಡಿಕ್ಕಿ ಹೊಡೆದಿದೆ ಆತ ದೂರ ಹೋಗಿ ಬಿದ್ದಿದ್ದರೂ, ಕಾರು ತನ್ನ ವೇಗವನ್ನು ನಿಯಂತ್ರಿಸಲಾಗದೆ ಕೆಳಗೆ ಬಿದ್ದ ಆತನ ಮೆಲೆ ಹರಿದು ನಂತರ ನಿಂತಿದೆ. ಇದರಿಂದ ಆತ ಸ್ಥಳದಲ್ಲೇ ಸಾವನಪ್ಪಿದ್ದಾನೆ.

VISTARANEWS.COM


on

Viral Video
Koo

ಬೆಂಗಳೂರು: ಇಂದು ಮಾಡಿದ ತಪ್ಪಿನ ಶಿಕ್ಷೆ ಮುಂದಿನ ಜನ್ಮದಲ್ಲಿ ಸಿಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಅದು ಸುಳ್ಳು, ಇಂದು ಮಾಡಿದ ತಪ್ಪಿಗೆ ಶಿಕ್ಷೆ ಇದೇ ಕಾಲದಲ್ಲಿ ಸಿಗುತ್ತದೆ. ಆದರೆ ಕೆಲವರಿಗೆ ತಡವಾಗಿ ಸಿಕ್ಕರೆ, ಕೆಲವರಿಗೆ ಅಂದೇ ಸಿಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಳ್ಳನೊಬ್ಬ ಮಹಿಳೆಯೊಬ್ಬರ ಮೊಬೈಲ್ ಕದ್ದು ಓಡುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video )ಆಗಿದೆ.

ಈ ವಿಡಿಯೊವನ್ನು @Desam_officialz ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು ‘ಇದು ಭೂಮಿಯ ಮೇಲೆ ದೇವರ ತಕ್ಷಣದ ತೀರ್ಪು. ದೇವರು ಕರುಣೆ ತೋರಲಿ’ ಎಂದು ಬರೆದಿದ್ದಾರೆ. ಈ ವಿಡಿಯೊದಲ್ಲಿ ಕಳ್ಳ ಮಹಿಳೆಯಿಂದ ಕದ್ದ ಮೊಬೈಲ್ ಪೋನ್ ಅನ್ನು ತೆಗೆದುಕೊಂಡು ತಪ್ಪಿಸಿಕೊಳ್ಳಲು ಜೋರಾಗಿ ಓಡುತ್ತಾ ರಸ್ತೆ ದಾಟುತ್ತಿದ್ದಾಗ ಎದುರಿಗೆ ವೇಗವಾಗಿ ಬಂದ ಕಾರೊಂದು ಆತನಿಗೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಆತ ಹಾರಿ ಹೋಗಿ ತುಂಬಾ ದೂರ ರಸ್ತೆಯ ಮೇಲೆ ಬಿದ್ದಿದ್ದಾನೆ. ಆದರೆ ಕಾರು ತನ್ನ ವೇಗವನ್ನು ನಿಯಂತ್ರಿಸಲಾಗದೆ ಕೆಳಗೆ ಬಿದ್ದ ಆತನ ಮೆಲೆ ಹರಿದು ನಂತರ ನಿಂತಿದೆ. ಇದರಿಂದ ಆತ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಈ ಘಟನೆ ನಡೆದ ಸ್ಥಳ ಮತ್ತು ದಿನಾಂಕ ತಿಳಿದುಬಂದಿಲ್ಲ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದು ದೇವರ ತೀರ್ಪು ಎಂದು ಹೇಳಿದರೆ. ಕೆಲವರು ‘ಬಡವರ ವಿಷಯದಲ್ಲಿ ದೇವರು ತಕ್ಷಣ ತೀರ್ಪುಗಳನ್ನು ನೀಡುತ್ತಾನೆ? ಆದರೆ ಶ್ರೀಮಂತರು ಮತ್ತು ಶಕ್ತಿವಂತರಿಗೆ ಏಕೆ ದೇವರು ತಕ್ಷಣದ ತೀರ್ಪುಗಳನ್ನು ನೀಡುತ್ತಿಲ್ಲ? ಪ್ರತಿದಿನ ಇಂತಹ ಲಕ್ಷಾಂತರ ದರೋಡೆಗಳು, ರಸ್ತೆಗಳಲ್ಲಿ ಕೊಲೆಗಳು ನಡೆಯುತ್ತಿವೆ, ಯಾವುದೇ ತಕ್ಷಣದ ತೀರ್ಪುಗಳನ್ನು ನೋಡಿಲ್ಲ, ಏಕೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

ಸೆಪ್ಟೆಂಬರ್ 2023 ರಲ್ಲಿ ಗುಜರಾತ್‌ ನಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಗುಜರಾತ್‌ನ ಮೊದಸಾದಲ್ಲಿ ಶೋರೂಂನಿಂದ ಕದಿಯಲು ಪ್ರಯತ್ನಿಸುತ್ತಿದ್ದ ಕಳ್ಳನಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಈ ಘಟನೆಯು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Continue Reading

ಕ್ರೀಡೆ

Sania Mirza: ಶಮಿ ಜತೆ ಮದುವೆ ಟಾಕ್​ ಬೆನ್ನಲ್ಲೇ ಇನ್​ಸ್ಟಾಗ್ರಾಮ್​ನಲ್ಲಿ ‘YES’ ಎಂದು ಬರೆದುಕೊಂಡ ಸಾನಿಯಾ ಮಿರ್ಜಾ

Sania Mirza: ಶಮಿ ಜತೆ ಸಾನಿಯ ಮದುವೆಯಾಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಾನಿಯಾ ‘ಎಸ್’​ ಬರೆದಿರುವುದು ಈಗ ನೆಟ್ಟಿಗರಿಗೆ ಆಹಾರವಾಗಿದೆ. ಶಮಿ ಜತೆಗಿನ ಮದುವೆಯ ಕುರಿತಾಗಿಯೇ ಅವರು ಎಸ್​ ಎಂದು ಬರೆದುಕೊಂಡಿದ್ದಾರೆ ಎಂಬುದಾಗಿ ನೆಟ್ಟಿಗರು ಬಿಂಬಿಸಿದ್ದಾರೆ.

VISTARANEWS.COM


on

Sania Mirza
Koo

ಹೈದರಾಬಾದ್​: ಭಾರತದ ಮಾಜಿ ಟೆನಿಸ್​ ತಾರೆ ಸಾನಿಯಾ ಮಿರ್ಜಾ(Sania Mirza) ಅವರು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ಬಳಿಕ ಸಾನಿಯ ಮರು ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಗಳು ಹರಿದಾಡುತ್ತಿರುತ್ತದೆ. ಇತ್ತೀಚೆಗೆ ಟೀಮ್​ ಇಂಡಿಯಾದ ಕ್ರಿಕೆಟಿಗ ಮೊಹಮ್ಮದ್ ಶಮಿ(Mohammed Shami) ಜತೆಗೆ ಸಾನಿಯಾ ಮಿರ್ಜಾ ಮದುವೆಯಾಗುತ್ತಾರೆ ಎಂಬ ಊಹಾಪೋಹಾ ಹಬ್ಬಿತ್ತು. ಈ ಬಗ್ಗೆ ಸಾನಿಯಾ ತಂದೆ ಇದು ಸುಳ್ಳು ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಯನ್ನು ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದರು.

ಎಲ್ಲ ಚರ್ಚೆಗಳ ಮಧ್ಯೆ ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಗ ಇಝಾನ್ ಜತೆಗಿನ ಹೃದಯಸ್ಪರ್ಶಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಟಿ-ಶರ್ಟ್​ ಮತ್ತು ಕ್ಯಾಪ್‌ ತೊಟ್ಟು ಮಗನ ಜತೆಗೆ ಟೆನಿಸ್ ಕೋರ್ಟ್‌ನಲ್ಲಿ ಫೋಟೊ ಶೇರ್​ ಮಾಡಿದ್ದಾರೆ. ಇಲ್ಲಿ ಇವರಿಬ್ಬರ ಫೋಟೊಕಿಂತ ಮಹತ್ವ ಪಡೆದದ್ದು ಸಾನಿಯಾ ಧರಿಸಿದ ಟಿ-ಶರ್ಟ್​ ಮೇಲಿರುವ ಬರಹ. ಹೌದು ಸಾನಿಯಾ ಅವರು “ನಾನು ಚೆನ್ನಾಗಿರುತ್ತೇನೆ ಎಂಬ ಭಾವನೆ ನನಗೆ ಸಿಕ್ಕಿದೆ” ಎಂದು ಬರೆದಿರುವ ಟಿ-ಶರ್ಟ್​ ಹಾಕಿದ್ದು ಈ ಮೂಲಕ ತಮ್ಮ ಜೀವನ ಶೈಲಿಯ ಬಗ್ಗೆ ಮಾತನಾಡುವವರಿಗೆ ಪರೋಕ್ಷವಾಗಿ ತಕ್ಕ ಉತ್ತರ ನೀಡಿದ್ದಾರೆ. ಜತೆಗೆ ಈ ಫೋಟೋಗೆ “YES” ಎಂಬ ಕ್ಯಾಪ್ಶನ್ ನೀಡಲಾಗಿದೆ.

ಇದನ್ನೂ ಓದಿ Sania Mirza: ಹೇಳಲು ತುಂಬಾ ಇದೆ, ಆದರೂ ಮೌನವಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಶಮಿ ಜತೆ ಸಾನಿಯ ಮದುವೆಯಾಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಾನಿಯಾ ‘ಎಸ್’​ ಬರೆದಿರುವುದು ಈಗ ನೆಟ್ಟಿಗರಿಗೆ ಆಹಾರವಾಗಿದೆ. ಶಮಿ ಜತೆಗಿನ ಮದುವೆಯ ಕುರಿತಾಗಿಯೇ ಅವರು ಎಸ್​ ಎಂದು ಬರೆದುಕೊಂಡಿದ್ದಾರೆ ಎಂಬುದಾಗಿ ನೆಟ್ಟಿಗರು ಬಿಂಬಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಾನಿಯಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಮಾನಿಗಳಿಗೆ ‘ಸಬರ್‌ ಕರೋ ಆಲ್‌ವೇಸ್​  ಸಬರ್‌ ಕರೋ…'(ಯಾವಾಗಲೂ ಕೊಂಚ ತಾಳ್ಮೆಯಿಂದ ಇರಿ) ಎಂದು ಬರೆದುಕೊಂಡಿದ್ದರು. ಅವರ ಈ ಮಾರ್ಮಿಕ ಪೋಸ್ಟ್​ ಕಂಡು ನೆಟ್ಟಿಗರು ಸಾನಿಯಾ ಅವರು ಶಮಿ ಜತೆ ಹಸೆಮಣೆ(Sania Mirza marrying Mohammed Shami) ಏರುವುದು ಪಕ್ಕಾ ಎಂದು ಹೇಳಲಾರಂಭಿಸಿದ್ದರು. ಇದೀಗ ಎಸ್​ ಎನ್ನುವ ಬರಹ ಮತ್ತೆ ಸದ್ದು ಮಾಡುತ್ತಿವೆ.

ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶೋಯೆಬ್‌ ಮಲಿಕ್‌(Shoaib Malik) ಅವರಿಗೆ ಸಾನಿಯಾ ವಿಚ್ಚೇದನ ನೀಡಿದ್ದರು. ಈ ಮೂಲಕ 13 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದರು. ಡೀಪ್‌ಫೇಕ್‌(Deepfake) ಮೂಲಕ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಮುಖವನ್ನು ಈ ಹಿಂದೆ ಸಾನಿಯಾ ಅವರು ಮಲಿಕ್ ಜತೆಗೆ ತೆಗಿಸಿಕೊಂಡಿದ್ದ​ ಮದುವೆಯ ಫೋಟೊಗೆ ಫೋಟೊಗೆ ಶಮಿಯ ಮುಖವನ್ನು ಎಡಿಟ್​ ಮಾಡಿ ಶಮಿ ಮತ್ತು ಸಾನಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೋಂಡಿದ್ದಾರೆ ಎಂದು ಟ್ವೀಟರ್​ ಎಕ್ಸ್​ನಲ್ಲಿ ಕಿಡಿಗೇಡಿಗಳು ವೈರಲ್​ ಮಾಡಿದ್ದರು.

Continue Reading

Latest

Viral Video: ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

Viral Video ಫ್ಯಾಷನ್ ಎನ್ನುವುದು ಎಷ್ಟರ ಮಟ್ಟಿಗೆ ನಮ್ಮನ್ನು ಆವರಿಸಿದೆ ಎಂದರೆ ಇಂದು ಏನೇ ಮಾಡಿದರೂ ಸರಿ ಎನ್ನುವ ಮಟ್ಟಿಗೆ ಆಗಿದೆ. ಮೈ ತುಂಬಾ ಬಟ್ಟೆ ಧರಿಸುವುದು ನಮ್ಮ ಸಂಪ್ರದಾಯ ಆದರೆ ಈಗ ತುಂಡುಡುಗೆ ಧರಿಸಿಕೊಂಡು ಹೋಗುವುದೇ ಫ್ಯಾಷನ್ ಆಗಿದೆ. ಆದರೆ ಇಲ್ಲೊಬ್ಬಳು ಮಹಿಳೆ ನಡುರಸ್ತೆಯಲ್ಲಿ ಮೈ ಮೇಲೆ ಬಟ್ಟೆ ಇಲ್ಲದೇ ನಡೆದುಕೊಂಡು ಹೋಗಿದ್ದಾಳೆ. ಇವಳು ಹೀಗ್ಯಾಕೆ ಮಾಡಿದ್ದಾಳೆ ಎಂಬುದಕ್ಕೆ ಕಾರಣ ಗೊತ್ತಿಲ್ಲ, ಇನ್ನು ಈ ಮಹಿಳೆ ಯಾರೂ ಎಂಬುದು ಕೂಡ ತಿಳಿದಿಲ್ಲ.

VISTARANEWS.COM


on

Viral Video
Koo

ಗಾಜಿಯಾಬಾದ್ : ಹೆಣ್ಣಾಗಲಿ, ಗಂಡಾಗಲಿ ಅಗತ್ಯ ಇರುವಷ್ಟಾದರೂ ಬಟ್ಟೆ ತೊಟ್ಟುಕೊಂಡರೆ ಚೆನ್ನ. ಆದರೆ ಈಗ ಬಟ್ಟೆ ಬಗ್ಗೆ ಮಾತನಾಡುವ ಹಾಗೇ ಇಲ್ಲ. ಫ್ಯಾಷನ್‌ ನೆಪವೊಡ್ಡಿ ತಮ್ಮಿಷ್ಟದ ಬಟ್ಟೆ ಧರಿಸಿಕೊಂಡು ಓಡಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲೊಬ್ಬ ಮಹಿಳೆ ನಡುರಸ್ತೆಯಲ್ಲಿ ನಗ್ನವಾಗಿ ಓಡಾಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Viral Video )ಆಗಿದೆ.

ವಿಡಿಯೊದಲ್ಲಿ ಗಾಜಿಯಾಬಾದ್‌ನ ಮೋಹನ್ ನಗರದ ಚೌರಾಹಾದ ಜನನಿಬಿಡ ರಸ್ತೆಯಲ್ಲಿ ಮಹಿಳೆ ನಗ್ನವಾಗಿ ನಡೆದುಕೊಂಡು ಹೋಗುವುದು ಕಂಡುಬಂದಿದೆ. ಆದರೆ ಮಹಿಳೆಯನ್ನು ಈ ಸ್ಥಿತಿಯಲ್ಲಿ ಕಂಡು ಪುರುಷರು ಬಿಡಿ ಮಹಿಳೆಯರು ಕೂಡ ಸುಮ್ಮನೆ ನೋಡಿ ಹೋದರೇ ವಿನಃ ಆಕೆಯನ್ನು ತಡೆಯಲು ಅಥವಾ ಅವಳಿಗೆ ಬಟ್ಟೆಗಳನ್ನು ನೀಡಲು ಯಾರೂ ಪ್ರಯತ್ನಿಸುತ್ತಿಲ್ಲ ಎಂಬುವುದನ್ನು ಕಾಣಬಹುದು. ಆದರೆ ಮಹಿಳೆಯ ಗುರುತು ತಿಳಿದುಬಂದಿಲ್ಲ. ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ತಿಳಿದು ಮಹಿಳೆಯನ್ನು ಗುರುತಿಸಲು ಮತ್ತು ಅವಳು ಎಲ್ಲಿಗೆ ಹೋದಳು ಎಂಬುದನ್ನು ಪತ್ತೆ ಹಚ್ಚಲು ವಿಡಿಯೊ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ, ಈ ವೀಡಿಯೊವನ್ನು ಜೂನ್ 25 ರಂದು ರೆಕಾರ್ಡ್ ಮಾಡಲಾಗಿದ್ದು, 10 ಸೆಕೆಂಡುಗಳ ಈ ವಿಡಿಯೊದಲ್ಲಿ ವಾಹನಗಳು ಮತ್ತು ಪಾದಚಾರಿಗಳು ಹಾದುಹೋಗುವ ಭಾರಿ ದಟ್ಟಣೆಯ ಸ್ಥಳದಲ್ಲಿ ಮಹಿಳೆಯನ್ನು ಸೆರೆಹಿಡಿಯಲಾಗಿದೆ. ಮಹಿಳೆಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಅವಳು ಈ ಸ್ಥಿತಿಯಲ್ಲಿ ಏಕೆ ಇದ್ದಳು ಅಥವಾ ಅವಳು ಹೇಗೆ ರಸ್ತೆಗೆ ಬಂದಳು ಎಂಬುದು ಸ್ಪಷ್ಟವಾಗಿಲ್ಲ. ಈ ಘಟನೆಯು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಆಕ್ರೋಶ ಮತ್ತು ಟೀಕೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ಬೂತ್ ಸಮೀಪದಲ್ಲಿದ್ದರೂ, ಕೂಡ ಬುಧವಾರ ರಾತ್ರಿ ವಿಡಿಯೊ ಆನ್ ಲೈನ್ ನಲ್ಲಿ ಕಾಣಿಸಿಕೊಳ್ಳುವವರೆಗೂ ಅಧಿಕಾರಿಗಳಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.

ಈ ವರ್ಷದ ಆರಂಭದಲ್ಲಿ, ದೆಹಲಿಯಲ್ಲಿ ಪ್ರಯಾಣಿಕರಿಂದ ತುಂಬಿದ್ದ ಬಸ್‌ನಲ್ಲಿ ಬಿಕಿನಿ ಧರಿಸಿದ ಮಹಿಳೆಯೊಬ್ಬರು ಪ್ರಯಾಣ ಮಾಡುತ್ತಿರುವ ವಿಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಮಹಿಳೆಯನ್ನು ನೋಡಿ ಪ್ರಯಾಣಿಕರಿಂದ ವಿಭಿನ್ನ ಪ್ರತಿಕ್ರಿಯೆ ಕಂಡುಬಂದಿತ್ತು, ಕೆಲವರು ಆಶ್ಚರ್ಯದಿಂದ ನೋಡಿದರು ಮತ್ತು ಕೆಲವರು ಅಸಡ್ಡೆ ತೋರಿದರು.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಉಡುಪನ್ನು ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಸಲು ಸೂಕ್ತವಲ್ಲ ಎಂದು ಹಲವರು ಟೀಕೆ ಮಾಡಿದರೆ, ಕೆಲವರು ಇದರಲ್ಲಿ ತಪ್ಪೇನು ಎಂದು ಆಕೆಗೆ ಬೆಂಬಲ ನೀಡಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಖೈದಿ ಜೊತೆಗೆ ಮಹಿಳಾ ಪೊಲೀಸ್‌ ಅಧಿಕಾರಿ ಲೈಂಗಿಕ ಕ್ರಿಯೆ; ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ

Viral Video: ಎಕ್ಸ್‌ನಲ್ಲಿ ಭಾರೀ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿರುವ ಜೈಲಿನ ಸಿಬ್ಬಂದಿ ಅಲ್ಲಿನ ಕೈದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದನ್ನು ಅದೇ ಕೋಣೆಯಲ್ಲಿದ್ದ ಮತ್ತೊರ್ವ ಖೈದಿ ತನ್ನ ಮೊಬೈಲ್‌ನಲ್ಲಿ ಶೂಟ್‌ ಮಾಡಿಕೊಂಡಿದ್ದಾನೆ.

VISTARANEWS.COM


on

Viral Video
Koo

ಲಂಡನ್‌: ಜೈಲಿನ ಮಹಿಳಾ ಸಿಬ್ಬಂದಿ ಕೈದಿಯ ಜೊತೆ ಲೈಂಗಿಕ ಕ್ರಿಯೆ(Physical relationship) ನಡೆಸಿರುವ ಶಾಕಿಂಗ್‌ ಘಟನೆ ಇಂಗ್ಲೆಂಡ್‌ನ ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದು, ಜೈಲಿನಲ್ಲೇ ಇಂತಹ ಸ್ಥಿತಿ ಇದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ವೈರಲ್‌ ಆಗಿರುವ ವಿಡಿಯೋದಲ್ಲೇನಿದೆ?

ಎಕ್ಸ್‌ನಲ್ಲಿ ಭಾರೀ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿರುವ ಜೈಲಿನ ಸಿಬ್ಬಂದಿ ಅಲ್ಲಿನ ಕೈದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದನ್ನು ಅದೇ ಕೋಣೆಯಲ್ಲಿದ್ದ ಮತ್ತೊರ್ವ ಖೈದಿ ತನ್ನ ಮೊಬೈಲ್‌ನಲ್ಲಿ ಶೂಟ್‌ ಮಾಡಿಕೊಂಡಿದ್ದಾನೆ. ಕೈಯಲ್ಲಿ ಸಿಗರೇಟ್‌ ಹಿಡಿದು ವಿಡಿಯೋ ಮಾಡುತ್ತಿರುವ ಆ ವ್ಯಕ್ತಿ ” ಹಾಯ್‌.. ನಾವು ಇವತ್ತು ಇತಿಹಾಸ ಸೃಷ್ಟಿಸಿದ್ದೇವೆ. ನಾನು ಹೇಳುತ್ತಿರುವುದು ಇದೇ ವಿಚಾರವನ್ನು ಎಂದು ಹೇಳುತ್ತಾ ಕ್ಯಾಮೆರಾವನ್ನು ತಿರುಗಿಸುತ್ತಾನೆ. ಅಲ್ಲಿ ಜೈಲಿನ ಸಿಬ್ಬಂದಿ ಮತ್ತು ಕೈದಿ ಲೈಂಗಿಕ ಚಟುವಟಿಕೆಯಲ್ಲಿ ಭಾಗಿರುವುದನ್ನು ಕಾಣಬಹುದಾಗಿದೆ. ಅದೂ ಅಲ್ಲೇ ಇದ್ದ ಬೆಡ್‌ ಮೇಲೆ ಕೈದಿಗಳ ಬಟ್ಟೆ ಬಿದ್ದಿರುವುದನ್ನು ಕಾಣಬಹುದಾಗಿದೆ.

ಇನ್ನು ಇದೇ ಸಂದರ್ಭದಲ್ಲಿ ಮತ್ತೊರ್ವ ಖೈದಿ ಸೆಲ್‌ ಒಳಗೆ ಬರಲು ಯತ್ನಿಸುತ್ತಾರೆ. ಆಗ ವಿಡಿಯೋ ಮಾಡುತ್ತಿದ್ದವನು “ಸ್ವಲ್ಪ ಹೊತ್ತು ಇರು” ಅಂತಾನೆ. ಆಮೇಲೆ ಕ್ಯಾಮೆರಾವನ್ನು ಸುತ್ತ ತಿರುಗಿಸುತ್ತಾ “ಇದು ವಾಂಡ್‌ವರ್ಥ್‌ ಜೈಲು” ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ಘಟನೆ ಬಗ್ಗೆ ಲಂಡನ್‌ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲೆ ನಡೆದಿರುವ ಘಟನೆ ಎಂಬುದು ಸ್ಪಷ್ಟವಾಗಿದೆ. ಕೇಸ್‌ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಬಂಧನವಾಗಿಲ್ಲ. ಕಾನೂನು ಸಚಿವಾಲಯದ ಜೊತೆಗೂ ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ.

HMP ಜೈಲು ಸೇವೆಯ ವಕ್ತಾರರು ಮಾತನಾಡಿ, ಘಟನೆಯು ಇತ್ತೀಚೆಗೆ ಸಂಭವಿಸಿದೆ ಎಂದು ಭಾವಿಸಲಾಗಿದೆ, ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಿಬ್ಬಂದಿ ಭ್ರಷ್ಟಾಚಾರವನ್ನು ಸಹಿಸಲಾಗುವುದಿಲ್ಲ ಮತ್ತು ಈ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಜೈಲು ಅಧಿಕಾರಿಯ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!

Continue Reading
Advertisement
T20 World Cup 2024
ಪ್ರಮುಖ ಸುದ್ದಿ17 mins ago

T20 World Cup 2024 : ಫೈನಲ್ ಪಂದ್ಯ ಆರಂಭಕ್ಕೆ ಮೊದಲೇ ವಿಜೇತರನ್ನು ಘೋಷಿಸಿದ ಟಾಮ್ ಮೂಡಿ

Actor Darshan
ಬೆಂಗಳೂರು19 mins ago

Actor Darshan: ಜೈಲಲ್ಲಿ ದರ್ಶನ್‌ ಭೇಟಿಯಾದ ನಟಿ ರಕ್ಷಿತಾ, ಪ್ರೇಮ್ ದಂಪತಿ

Special Status
ದೇಶ24 mins ago

Special Status: ಎನ್‌ಡಿಎಗೆ ಮೈತ್ರಿಗೆ ಮೊದಲ ಅಗ್ನಿ ಪರೀಕ್ಷೆ; ವಿಶೇಷ ಸ್ಥಾನಮಾನಕ್ಕೆ ಜೆಡಿಯು ನಿರ್ಣಯ

Jain Shantamani Kala Kendra Stone Carving and Painting Camp in Bengaluru
ಬೆಂಗಳೂರು39 mins ago

Bengaluru News: ಜೈನ್‌ ಶಾಂತಮಣಿ ಕಲಾ ಕೇಂದ್ರದ ಕಲ್ಲಿನ ಕೆತ್ತನೆ ಮತ್ತು ಚಿತ್ರಕಲಾ ಶಿಬಿರ “ಪಾರ್ಶ್ವ ಪಡಾಪ್” ಗೆ ಸಂಭ್ರಮದ ತೆರೆ

Virat Kohli
ಪ್ರಮುಖ ಸುದ್ದಿ56 mins ago

Virat kohli : ವಿರಾಟ್ ಕೊಹ್ಲಿಗೆ ಫಾರ್ಮ್​ಗೆ ಮರಳಲು ಸಲಹೆಗಳನ್ನು ನೀಡಿದ ಮಾಜಿ ನಾಯಕ ಸುನೀಲ್ ಗವಾಸ್ಕರ್​

WhatsApp color
ತಂತ್ರಜ್ಞಾನ1 hour ago

WhatsApp: ಇನ್ನು ಮುಂದೆ ಈ ಫೋನ್‌ಗಳಲ್ಲಿ ವಾಟ್ಸ್ಯಾಪ್‌ ಸಿಗೋಲ್ಲ! ನಿಮ್ಮ ಫೋನೂ ಇದೆಯಾ ನೋಡಿ

Self Harming
ಕ್ರೈಂ1 hour ago

Self Harming: ಕೆರೆಗೆ ಹಾರಿ ಆತ್ಮಹತ್ಯೆ ಯತ್ನ; ಇಬ್ಬರು ಮಕ್ಕಳ ಸಾವು, ತಾಯಿ ಪಾರು

Rohit Sharma
ಪ್ರಮುಖ ಸುದ್ದಿ1 hour ago

Rohit Sharma : ಒಂದು ಸಿಕ್ಸರ್ ಬಾರಿಸಿದರೆ ಕೊಹ್ಲಿಯ ದಾಖಲೆ ಮುರಿಯುತ್ತಾರೆ ರೋಹಿತ್​ ಶರ್ಮಾ

Shirt Dress Fashion
ಫ್ಯಾಷನ್2 hours ago

Shirt Dress Fashion: ಶರ್ಟ್ ಡ್ರೆಸ್‌ ನ್ಯೂ ಲುಕ್‌ಗೆ 3 ಸಿಂಪಲ್‌ ಐಡಿಯಾ

assault case bjp worker
ಕ್ರೈಂ2 hours ago

Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ9 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ1 day ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌