ಗುಜರಾತ್: ದೇಶಾದ್ಯಂತ ಲೋಕಸಭೆ ಚುನಾವಣೆ ರಂಗೇರಿದೆ. ಅಬ್ಬರದ ಪ್ರಚಾರ, ಪ್ರತಿಪಕ್ಷಗಳಿಗೆ ಟಾಂಗ್ ಕೊಡುತ್ತಾ ಒಂದೆಡೆ ಪ್ರಧಾನಿ ಮೋದಿ ಬ್ಯುಸಿ ಆಗಿದ್ದರೆ, ಮತ್ತೊಂದೆಡೆ ಗುಜರಾತ್‌ನಲ್ಲೊಬ್ಬ ಮೋದಿ ಪಾನಿಪುರಿ(Viral video) ಮಾರುತ್ತಾ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಒಂದು ಕ್ಷಣ ನೋಡೋರಿಗೆ ಪ್ರಧಾನಿ ಮೋದಿಯೇ ಪಾನಿಪುರಿ ಮಾರುತ್ತಿದ್ದಾರೋ ಅಂತ ಅನಿಸೋದು ಪಕ್ಕಾ! ಗುಜರಾತ್‌ನ ಆನಂದ್‌ನಲ್ಲಿ ಪಾನಿಪುರಿ ಅಂಗಡಿ(Pani puri seller) ನಡೆಸುತ್ತಿರುವ ಅನಿಲ್ ಭಾಯಿ ಠಕ್ಕರ್ ಪ್ರಧಾನಿ ನರೇಂದ್ರ ಮೋದಿ(Narendra Modi) ಯಂತೆ ಉಡುಪು ತೊಟ್ಟು, ಕನ್ನಡಕ ಧರಿಸಿ, ಹೇರ್‌ಸ್ಟೈಲ್ ಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ಮೋದಿ ಎಂದೇ ಫುಲ್ ಫೇಮಸ್ ಆಗಿದ್ದಾರೆ.
ಬಿಳಿ ಗಡ್ಡ, ಕೇಶ ವಿನ್ಯಾಸ ಆತನ ಹಾವಭಾವ ಪ್ರಧಾನಿ ಮೋದಿಗೆ ಹೋಲುತ್ತಿರುವ ಠಕ್ಕರ್, ಮೂಲತಃ ಜುನಾಗಢ್ ನಿವಾಸಿ. ಅವರು ತಮ್ಮ 18ನೇ ವಯಸ್ಸಿನಿಂದಲೂ ತುಳಸಿ ಪಾನಿ ಪುರಿ ಎಂಬ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ಅಂಗಡಿಯನ್ನು ಅವರ ತಾತ ಶುರು ಮಾಡಿದ್ದರು ಎಂಬುದು ವಿಶೇಷ. ಇನ್ನು ಮೋದಿಯಂತೆ ಕಾಣುತ್ತಿರುವ ಠಕ್ಕರ್ ಅವರ ವಿಶೇಷ ಲುಕ್‌ಗೆ ಮನಸೋತಿರುವ ಗ್ರಾಹಕರು ಅವರ ಬಳಿ ಬಂದು ಪಾನಿಪುರಿ ತಿಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.
Meet Pani Puri Seller Who Resembles PM Modi 🇮🇳 Not Only in Appearance but Also in Admiration.
— Mehul Hingu (@mehulhingu_com) October 23, 2023
He’s deeply inspired by our PM's values. Just like Modi ji’s emphasis on cleanliness, this vendor keeps his stall clean, ensuring a hygienic & delightful dining experience for all. pic.twitter.com/Tnog6rg1lH
ಸುಮಾರು 71 ವರ್ಷದ ಠಕ್ಕರ್ ಪ್ರಧಾನಿ ನರೇಂದ್ರ ಮೋದಿಯ ಅಪ್ಪಟ ಅಭಿಮಾನಿ. ಅವರ ಸ್ವಚ್ಛ ಭಾರತ ಅಭಿಯಾನದಿಂದ ಬಹಳಷ್ಟು ಸ್ಫೂರ್ತಿಗೊಂಡಿರುವ ಠಕ್ಕರ್ ತಮ್ಮ ಅಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಾರೆ. ತಮ್ಮ ವಿಶೇಷ ಲುಕ್ ಬಗ್ಗೆ ಪ್ರತಿಕ್ರಿಯಿಸಿರುವ ಠಕ್ಕರ್, ನನ್ನ ಪ್ರಧಾನಿ ಮೋದಿಯ ಲುಕ್ ಬಗ್ಗೆ ಜನ ಅತ್ಯಂತ ಪ್ರೀತಿ ತೋರುತ್ತಿದ್ದಾರೆ. ಸ್ಥಳೀಯರು ಮತ್ತು ಪ್ರವಾಸಿಗರು ನನ್ನ ಬಳಿ ಬಂದು ಸೆಲ್ಫಿ ತೆಗೆದುಕೊಂಡು ಹೋಗುವುದು ಬಹಳ ಸಂತೋಷ ಕೊಡುತ್ತಿದೆ. ಅವರ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Mamata Banerjee: ಹೆಲಿಕಾಪ್ಟರ್ ಏರುವಾಗ ಬಿದ್ದ ಮಮತಾ ಬ್ಯಾನರ್ಜಿ, ಗಾಯ
ಇನ್ನು ಠಕ್ಕರ್ ಮಾತ್ರವಲ್ಲ ಮುಂಬೈನಲ್ಲೂ ಮತ್ತೋರ್ವ ವ್ಯಕ್ತಿಯೂ ಪ್ರಧಾನಿ ಮೋದಿಯಂತೆ ತನ್ನ ಸ್ಟೈಲ್ ಅನ್ನು ಬದಲಿಸಿಕೊಂಡು ಫುಲ್ ಫೇಮಸ್ ಆಗಿದ್ದಾನೆ. ಮುಂಬೈನ ವಿಕಾಸ್ ಮಹಂತೆ ಎಂಬಾತ ಗರ್ಬಾ ಡಾನ್ಸ್ ಮಾಡುತ್ತಿರುವ ವಿಡಿಯೋ ಫೇಮಸ್ ಆಗಿತ್ತು. ಇದು ಪ್ರಧಾನಿ ಮೋದಿಯ ಡೀಪ್ ಫೇಕ್ ವಿಡಿಯೋ ಎನ್ನಲಾಗಿತ್ತು. ಆದಾದ ಬಳಿಕ ಸ್ವತಃ ವಿಕಾಸ್ ಮಹಾಂತೆ ವಿಡಿಯೋದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ತಾವೊಬ್ಬ ಪ್ರಧಾನಿ ಮೋದಿಯ ಅಭಿಯಾನಿ. ಆ ವಿಡಿಯೋ ಸ್ವತಃ ತನ್ನದೇ ಎಂದು ಹೇಳಿದ್ದರು. ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಆಗಾಗ ಜೂನಿಯರ್ ಮೋದಿಗಳು ಗಮನ ಸೆಳೆಯುತ್ತಿರುತ್ತಾರೆ. ಆದರೆ ಇದೀಗ ಪಾನಿಪುರಿ ಮಾರುತ್ತಿರುವ ಮೋದಿಯನ್ನು ಕಂಡು ಜನಕ್ಕೆ ಖುಷಿಯೋ ಖುಷಿ.