Site icon Vistara News

Viral Video : ಒಡೆದ ಮೊಟ್ಟೆಯಲ್ಲೇ ಮರಿ ಮಾಡಿಸಿದ ವ್ಯಕ್ತಿ! ಅಬ್ಬಬ್ಬಾ ಎನ್ನುವಂತಿದೆ ಈ ವಿಡಿಯೊ ನೋಡಿ

#image_title

ಬೆಂಗಳೂರು: ಮೊಟ್ಟೆಯಿಂದ ಮರಿ ಬರಬೇಕೆಂದರೆ ಅದಕ್ಕೆ ಕೋಳಿ ಕಾವು ಕೊಡಬೇಕು. ಅದರಲ್ಲೂ ಮೊಟ್ಟೆ ಏನಾದರೂ ಒಡೆದುಹೋಯಿತೆಂದರೆ ಮರಿಯಾಗುವುದು ಸಾಧ್ಯವೇ ಇಲ್ಲ. ಇದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ವಿಡಿಯೊ ನೋಡಿದ ಮೇಲೆ ನೀವು ಶಾಕ್‌ ಆಗುವುದು ಗ್ಯಾರಂಟಿ. ಏಕೆಂದರೆ ಇಲ್ಲಿ ಒಡೆದ ಮೊಟ್ಟೆಯನ್ನೇ ವ್ಯಕ್ತಿಯೊಬ್ಬ ಕೋಳಿಯ ಸಹಾಯವಿಲ್ಲದೆಯೇ ಮರಿ (Viral Video) ಮಾಡಿಸುತ್ತಾನೆ.

ಇದನ್ನೂ ಓದಿ: Viral Video: ರಾಮನವಮಿ ಆಚರಣೆ ವೇಳೆ ಅವಘಡ; ದೇವಸ್ಥಾನದಲ್ಲಿ ನೆಲ ಕುಸಿದು ಬಾವಿಗೆ ಬಿದ್ದ 25 ಭಕ್ತರು
ವ್ಯಕ್ತಿಯೊಬ್ಬ ಮೊದಲಿಗೆ ಮೊಟ್ಟೆಯನ್ನು ನೀಟಾಗಿ ಒಡೆಯುತ್ತಾನೆ. ಅದರಲ್ಲಿದ್ದ ತಿರುಳನ್ನೆಲ್ಲ ತೆಗೆದು, ಬೇರೊಂದು ಮೊಟ್ಟೆಯ ತಿರುಳಿಗೆ ಏನನ್ನೋ ಇಂಜೆಕ್ಟ್‌ ಮಾಡಿ ಈ ಮೊಟ್ಟೆಯ ಸೆಲ್‌ ಒಳಗೆ ಇಡುತ್ತಾನೆ. ಅದನ್ನು ಪ್ಲಾಸ್ಟಿಕ್‌ನಿಂದ ಕವರ್‌ ಮಾಡಿಡುತ್ತಾನೆ. ಆಗಾಗ ಕವರ್‌ ತೆಗೆದು ಅದಕ್ಕೆ ಏನೆನ್ನೋ ಇಂಜೆಕ್ಟ್‌ ಮಾಡುತ್ತಾನೆ. ಹೀಗೆ ಮಾಡುತ್ತಲೇ ನಿಧಾನವಾಗಿ ಮೊಟ್ಟೆಯ ತಿರುಳು ಮರಿಯ ರೂಪ ಪಡೆಯುತ್ತಾ ಹೋಗುತ್ತದೆ. ಕೊನೆಗೆ ಮೊಟ್ಟೆಯೊಳಗಿಂದ ಮರಿಯನ್ನು ಹೊರತೆಗೆಯುವ ವ್ಯಕ್ತಿ ಅದು ಸ್ವಲ್ಪ ಬೆಳೆದ ನಂತರ ತನ್ನ ಕೈ ಮೇಲೆ ನಿಂತಿರುವ ವಿಡಿಯೊವನ್ನೂ ಇದರೊಂದಿಗೆ ಸೇರಿಸಿದ್ದಾನೆ.


ಈ ವಿಡಿಯೊ ಈ ಹಿಂದೆ 2016ರಲ್ಲಿಯೇ ವೈರಲ್‌ ಆಗಿತ್ತು. ಇದೀಗ ಮೆಡಿಕಲ್‌ ವಿಡಿಯೋಸ್‌ ಹೆಸರಿನ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದ್ದು, ವಿಡಿಯೊ ಮತ್ತೆ ವೈರಲ್‌ ಆಗಿದೆ. ಇದೂ ಸಾಧ್ಯವೇ ಎಂದು ಅನೇಕರು ಬಾಯಿ ಮೇಲೆ ಬೆರಳಿಟ್ಟುಕೊಂಡು ವಿಡಿಯೊ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Viral News : 14 ವರ್ಷದ ಕೆಲಸದಲ್ಲಿ 4,500 ಬಾರಿ ಸಿಗರೇಟ್‌ ಸೇದಿದ ಉದ್ಯೋಗಿ; 9 ಲಕ್ಷ ರೂ. ದಂಡ ಹಾಕಿದ ಸಂಸ್ಥೆ!
ಈ ವಿಡಿಯೊ ನೋಡಿರುವ ವಿಜ್ಞಾನಿಗಳು ಇದು ಸಾಧ್ಯ ಎಂದು ಹೇಳಿದ್ದಾರೆ. ಜರ್ನಲ್‌ ಆಫ್‌ ಪೌಲ್ಟ್ರಿ ಸೈನ್ಸ್‌ನಲ್ಲಿರುವ ವರದಿಯ ಪ್ರಕಾರ ಮೊಟ್ಟೆಯನ್ನು ಶೆಲ್‌ ಇಲ್ಲದೆಯೂ ಮರಿ ಮಾಡಬಹುದು ಎಂದು ಹೇಳಲಾಗಿದೆ.

Exit mobile version