Site icon Vistara News

Viral Video: ಬಾಂಬ್‌ ಇಡಲು ಮುಸ್ಲಿಮರು ಬೇಕು, ಉನ್ನತ ಸ್ಥಾನ ಮಾತ್ರ ಹಿಂದೂಗಳಿಗೆ; ಟಿಎಂಸಿ ನಾಯಕನ ಸ್ಫೋಟಕ ಹೇಳಿಕೆ!

Viral Video

ಹಿಂದೂಗಳು (hindu) ಪಕ್ಷದ ಉನ್ನತ ಸ್ಥಾನಗಳನ್ನು ಕಸಿದುಕೊಳ್ಳುತ್ತಿದ್ದಾರೆ ಮತ್ತು ಮುಸ್ಲಿಮರು (muslim) ಬಾಂಬ್ ತಯಾರಿಸುವ ಕೊಳಕು ಕೆಲಸ ಮಾಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನ (TMC) ಅಲ್ಪಸಂಖ್ಯಾತ ಮೋರ್ಚಾ ನಾಯಕ ಮೊಹಮ್ಮದ್ ಯೂನಸ್ ಆರೋಪಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಸೈಂಥಿಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಇದರ ವಿಡಿಯೋದಲ್ಲಿ ಯೂನಸ್ ಅವರು ಅಲ್ಪಸಂಖ್ಯಾತರು ಎಲ್ಲಿ ಕೆಲಸ ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಬಹುಸಂಖ್ಯಾತ ಹಿಂದೂಗಳು ಪಕ್ಷದ ಎಲ್ಲಾ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ. ನಾವು ಅವರ ಕಣ್ಣುಗಳಲ್ಲಿ ಇರುವುದನ್ನು ನಮ್ಮ ಅಸ್ತಿತ್ವವನ್ನು ಅವರಿಗೆ ತೋರಿಸಬೇಕಾಗಿದೆ ಎಂದು ಹೇಳಿದರು.

ಸ್ವಂತ ಬೂತ್‌ಗಳಲ್ಲಿ ಗೆಲ್ಲಲು ಸಾಧ್ಯವಿಲ್ಲದವರು ಪಕ್ಷವನ್ನು ಮುನ್ನಡೆಸಲು ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ? ಹಿಂದೂಗಳು ಎಲ್ಲಾ ಕೋರ್ ಕಮಿಟಿಗಳ ಚುಕ್ಕಾಣಿ ಹಿಡಿದಿದ್ದಾರೆ. ನಾವು ಅದರ ಬಗ್ಗೆ ಯೋಚಿಸಬೇಕಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಂಬ್ ತಯಾರಿಕೆಯಿಂದ ಪ್ರಾರಂಭಿಸಿ ನಾವು ಮುಸ್ಲಿಮರು ಎಲ್ಲಾ ಕೊಳಕು ಕೆಲಸಗಳನ್ನು ಮಾಡುತ್ತೇವೆ ಎಂದಿರುವ ಅವರ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಚಿಂತನೆಯೂ ನಡೆಯುತ್ತಿದೆ.
ಈ ಕುರಿತು ಮಾತನಾಡಿದ ಬಿಜೆಪಿ ನಾಯಕ ಧ್ರುಬಾ ಸಹಾ, ಅವರು ಬಾಂಬ್‌ಗಳನ್ನು ತಯಾರಿಸುತ್ತಾರೆ, ಬೂತ್‌ಗಳನ್ನು ವಶಪಡಿಸಿಕೊಳ್ಳುತ್ತಾರೆ ಮತ್ತು ಟಿಎಂಸಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಕೊಲ್ಲುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಮೇಯರ್ ಫಿರ್ಹಾದ್ ಹಕೀಮ್ ಅವರು ಜನರನ್ನು ಇಸ್ಲಾಂಗೆ ಮತಾಂತರಿಸುವಂತೆ ಮುಕ್ತ ಕರೆ ನೀಡಿರುವುದನ್ನೂ ಬಿಜೆಪಿ ನಾಯಕ ಸಹಾ ಪ್ರಸ್ತಾಪಿಸಿದ್ದಾರೆ.

ಫಿರ್ಹಾದ್ ಹಕೀಮ್ ಅವರು ಇತ್ತೀಚೆಗೆ ನಡೆದ ಅಖಿಲ ಭಾರತ ಕುರಾನ್ ಸ್ಪರ್ಧೆಯಲ್ಲಿ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಹುಟ್ಟದೇ ಇರುವವರು ದುರದೃಷ್ಟದಿಂದ ಜನಿಸಿದರು, ನಾವು ಅವರಿಗೆ ಮತಾಂತರಕ್ಕೆ ಕರೆಯುತ್ತೇವೆ. ಅಲ್ಲಾನನ್ನು ಸಂತೋಷಪಡಿಸಿ ಎಂದು ಹೇಳುತ್ತೇವೆ ಎಂದಿದ್ದರು.

ಮುಸ್ಲಿಮೇತರರಲ್ಲಿ ನಾವು ಇಸ್ಲಾಂ ಧರ್ಮವನ್ನು ಹರಡಬೇಕಾಗಿದೆ. ನಾವು ಯಾರನ್ನಾದರೂ ಇಸ್ಲಾಮಿನ ಹಾದಿಯಲ್ಲಿ ತರಲು ಸಾಧ್ಯವಾದರೆ, ನಂಬಿಕೆಯ ಹರಡುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ನಾವು ನಿಜವಾದ ಮುಸ್ಲಿಮರೆಂದು ಸಾಬೀತುಪಡಿಸುತ್ತೇವೆ ಎಂದು ಅವರು ತಿಳಿಸಿದ್ದರು. ಸಾವಿರಾರು ಜನರು ನಾವು ಧರಿಸುವ ಸ್ಕಲ್ ಕ್ಯಾಪ್ ಧರಿಸಿ ಕುಳಿತಾಗ ನಾವು ಶಕ್ತಿಯನ್ನು ಪ್ರದರ್ಶಿಸಿದಂತಾಗುತ್ತದೆ. ಇದು ಏಕತೆಯನ್ನು ತೋರಿಸುತ್ತದೆ ಮತ್ತು ಯಾರೂ ನಮ್ಮನ್ನು ಬಗ್ಗುಬಡಿಯಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದರು.


ಇಸ್ಲಾಂ ಧರ್ಮದಲ್ಲಿ ಜನಿಸಿದ ಕಾರಣ ಪ್ರವಾದಿ ಮತ್ತು ಅಲ್ಲಾ ನಮಗೆ ಜನ್ನತ್‌ಗೆ ಸ್ಪಷ್ಟವಾದ ಮಾರ್ಗವನ್ನು ಒದಗಿಸಿದ್ದಾರೆ. ನಾವು ಯಾವುದೇ ಪಾಪಗಳನ್ನು ಮಾಡದಿದ್ದರೆ, ನಾವು ನೇರವಾಗಿ ಜನ್ನತ್‌ಗೆ ಹೋಗುತ್ತೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: Viral Video: ರೈಲ್ವೆ ಸೇತುವೆ ಮೇಲೆ ಫೋಟೊಶೂಟ್‌; ರೈಲು ಬಂದಾಗ 90 ಅಡಿ ಆಳಕ್ಕೆ ಜಿಗಿದ ದಂಪತಿ!

ಸಾರ್ವಜನಿಕ ಥಳಿತಕ್ಕೆ ಸಮರ್ಥನೆ

ಮುಸ್ಲಿಂ ರಾಷ್ಟ್ರದಲ್ಲಿ ಮಹಿಳೆಯ ಮೇಲೆ ತಾಲಿಬಾನ್ ಮಾದರಿಯ ಸಾರ್ವಜನಿಕ ಥಳಿತವನ್ನು ಟಿಎಂಸಿ ಶಾಸಕ ಹಮೀದುಲ್ ರೆಹಮಾನ್ ಇತ್ತೀಚೆಗೆ ಸಮರ್ಥಿಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದಲ್ಲಿ ಸಾರ್ವಜನಿಕವಾಗಿ ಮಹಿಳೆಯ ಮೇಲೆ ಥಳಿಸಲಾಗಿತ್ತು.

ಪತಿ ಇಲ್ಲದ ಸಮಯದಲ್ಲಿ ಮಹಿಳೆ ಅನೈತಿಕ ಕೆಲಸ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಗ್ರಾಮಸ್ಥರು ಸಭೆ ನಡೆಸಿ ಸಾಮೂಹಿಕವಾಗಿ ಆಕೆಯನ್ನು ಥಳಿಸಿದ್ದರು. ಘಟನೆ ನಡೆದ ಪ್ರದೇಶ ‘ಮುಸ್ಲಿಂ ರಾಷ್ಟ್ರ’ ಎಂದು ಹಮೀದುಲ್ ರೆಹಮಾನ್ ಹೇಳಿಕೊಂಡಿದ್ದರು.

Exit mobile version