Site icon Vistara News

Viral Video: IAS ಅಧಿಕಾರಿ ತಾಯಿಯ ದರ್ಬಾರ್‌ ನೋಡಿ; ಪಿಸ್ತೂಲ್‌ ತೋರಿಸಿ ರೈತರಿಗೆ ಬೆದರಿಕೆ

ಹೊಸದಿಲ್ಲಿ: ಐಎಎಸ್‌ ಅಧಿಕಾರಿಯೊಬ್ಬರ ತಾಯಿ ಬಂದೂಕು ಹಿಡಿದು ಜನರನ್ನು ಹೆದರಿಸಿರುವ ಘಟನೆ ಪುಣೆಯಲ್ಲಿ ವರದಿಯಾಗಿದೆ. ಈ ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಇದು ಹಳೆಯ ವಿಡಿಯೋ ಎನ್ನಲಾಗಿದೆ. IAS ಅಧಿಕಾರಿ ಪೂಜಾ ಖೆಡ್ಗರ್‌ ಅವರ ತಾಯಿ ಬಂದೂಕು ಹಿಡಿದು ಜನರ ಗುಂಪೊಂದಕ್ಕೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

2023 ರ ಬ್ಯಾಚ್ ಅಧಿಕಾರಿಯಾಗಿರುವ ಪೂಜಾ ತನ್ನನ್ನು ತಾನು ದಿವ್ಯಾಂಗ ಮತ್ತು ಮಾನಸಿಕವಾಗಿ ಅಸ್ವಸ್ಥೆ ಎಂದು ಹೇಳಿಕೊಂಡಿದ್ದಳು. ಆದರೆ ಅದನ್ನು ದೃಢೀಕರಿಸಲು ಪರೀಕ್ಷೆಗೊಳಪಡಲು ಒಪ್ಪಿರಲಿಲ್ಲ. ಆ ಮೂಲಕ ಆಕೆ ವಿವಾದಕ್ಕೀಡಾಗಿದ್ದಳು. ಇದಾದ ಬಳಿಕ ಆಕೆಯ ತಾಯಿಯ ವಿಡಿಯೋ ವೈರಲ್‌ ಆಗಿರುವ ಬೆನ್ನಲ್ಲೇ ಪೂಜಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಘಟನೆ ವಿವರ:

ಪೂಜಾಳ ತಂದೆ ದಿಲೀಪ್‌ ಖೆಡ್ಕರ್‌ ಒಬ್ಬ ನಿವೃತ ಐಎಎಸ್‌ ಅಧಿಕಾರಿಯಾಗಿದ್ದು, ಕೋಟ್ಯಂತರ ರೂಗಳ ಆಸ್ತಿ ಪಾಸ್ತಿ ಹೊಂದಿದ್ದಾರೆ. ಪುಣೆ ಜಿಲ್ಲೆಯ ಮುಲ್ಶಿ ತಾಲೂಕು ಸೇರಿದಂತೆ ಬೇರೆ ಬೇರೆ ಜಾಗಗಳಲ್ಲಿ 25ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಹೊಂದಿದ್ದಾರೆ. ಆದರೆ ಅಕ್ಕಪಕ್ಕದ ರೈತರ ಜಮೀನನ್ನೂ ಕಬಳಿಸಲು ಯತ್ನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರೈತರು ಇದನ್ನು ವಿರೋಧಿಸಿದಾಗ, ಎಂಎಸ್ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ರೈತರನ್ನು ಬೆದರಿಸಲು ಯತ್ನಿಸಿದ್ದರು.

ಸ್ಥಳೀಯರೊಬ್ಬರು ರೆಕಾರ್ಡ್ ಮಾಡಿದ ಎರಡು ನಿಮಿಷಗಳ ವೀಡಿಯೊದಲ್ಲಿ, ಮನೋರಮಾ ಖೇಡ್ಕರ್ ಕೈಯಲ್ಲಿ ಪಾಕೆಟ್ ಪಿಸ್ತೂಲ್ ಹಿಡಿದು ವ್ಯಕ್ತಿಯೊಬ್ಬನ ಮೇಲೆ ಕೂಗಾಡುತ್ತಿರುವುದನ್ನು ಕಾಣಬಹುದು. ಅವಳು ಅವನ ಬಳಿಗೆ ಹೋಗುತ್ತಾಳೆ. ಬಳಿಕ ವ್ಯಕ್ತಿಗೆ ಪಿಸ್ತೂಲ್‌ ತೋರಿಸಿ ಮರಾಠಿಯಲ್ಲಿ ಹೆದರಿಸುತ್ತಾಳೆ. ನನಗೆ ಭೂಮಿಯ ದಾಖಲೆಗಳನ್ನು ತೋರಿಸಿ. ಜಮೀನಿನ ದಾಖಲೆಗಳು ನನ್ನ ಹೆಸರನ್ನು ಹೊಂದಿವೆ ಎಂದು ಹೇಳುತ್ತಾಳೆ. ಮರಾಠಿಯಲ್ಲಿ ವ್ಯಕ್ತಿಯನ್ನು ಎಚ್ಚರಿಸುತ್ತಾಳೆ. ಜಮೀನಿನ ದಾಖಲೆಯಲ್ಲಿ ತಮ್ಮ ಹೆಸರಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಉತ್ತರಿಸುತ್ತಾರೆ. ನಂತರ ಅವಳು ನ್ಯಾಯಾಲಯದ ಆದೇಶವನ್ನು ತೋರಿಸಿ ಎಂದು ಕೇಳುತ್ತಾಳೆ ಮತ್ತು “ನನಗೆ ನಿಯಮಗಳನ್ನು ಕಲಿಸಬೇಡ” ಎಂದು ಆ ವ್ಯಕ್ತಿಗೆ ಎಚ್ಚರಿಕೆ ನೀಡುತ್ತಾಳೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ:John Cena: ಅನಂತ್‌ ಅಂಬಾನಿ-ರಾಧಿಕಾ ಮದುವೆಗೆ ಆಗಮಿಸಿದ ಖ್ಯಾತ ರಸ್ಲರ್​ ಜಾನ್ ಸೀನ; ವಿಡಿಯೊ ವೈರಲ್​

Exit mobile version