Site icon Vistara News

Viral Video: ಭಾರತ-ಚೀನಾ ಯೋಧರ ನಡುವೆ ಹಗ್ಗಜಗ್ಗಾಟ; ಗೆದ್ದವರು ಯಾರು? ವಿಡಿಯೊ ನೋಡಿ!

Viral Video

ಸೂಡಾನ್‌: ಸದಾ, ಯುದ್ಧ, ದಾಳಿ-ಪ್ರತಿದಾಳಿಯಲ್ಲಿ ಬ್ಯುಸಿಯಾಗಿರುವ ಯೋಧರು ರಿಲಾಕ್ಸ್‌ ಮೂಡ್‌ನಲ್ಲಿರುವುದನ್ನು ಕಾಣ ಸಿಗುವುದು ಬಹಳ ವಿರಳ. ಅದರಲ್ಲೂ ಬದ್ಧ ವೈರಿ ರಾಷ್ಟ್ರಗಳ ಯೋಧರು ಪರಸ್ಪರ ಎಂಜಾಯ್‌ ಮೂಮೆಂಟ್‌ನಲ್ಲಿರುತ್ತಾರೆ ಎಂದರೆ ನಂಬೋಕು ಸಾಧ್ಯವಿಲ್ಲ. ಆದರೆ ಇಲ್ಲೊಂದು ವಿಡಿಯೋ ಎಲ್ಲೆಡೆ ವೈರಲ್‌(Viral Video) ಆಗುತ್ತಿದ್ದು, ಭಾರತ(India) ಮತ್ತು ಚೀನಾ(China) ಯೋಧರು ಹಗ್ಗ-ಜಗ್ಗಾಟ(Tug Of War) ಸ್ಪರ್ಧೆಯಲ್ಲಿ ಭಾಗಿಯಾಗಿರುವುದನ್ನು ಕಾಣಬಹುದಾಗಿದೆ.

ಆಫ್ರಿಕಾದ ಸೂಡಾನ್‌ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಹಗ್ಗ-ಜಗ್ಗಾಟದಲ್ಲಿ ಭಾರತೀಯ ಮತ್ತು ಚೀನಾ ಸೇನೆಗಳು ಎಲ್ಲರ ಗಮನ ಸೆಳೆದಿವೆ. ಈ ಸ್ನೇಹಮಯ ಆಟದಲ್ಲಿ ಎರಡೂ ತಂಡಗಳು ಬಹಳ ಹುಮ್ಮಸ್ಸಿನಿಂದ ಭಾಗಿಯಾಗಿ ಸಂಭ್ರಮ ಪಟ್ಟವು. ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತ ಮತ್ತು ಚೀನಾ ಎರಡೂ ದೇಶಗಳ ಯೋಧರು ಬಹಳ ಸಂಭ್ರಮದಿಂದ ಈ ಹಗ್ಗ-ಜಗ್ಗಾಟ ಆಟದಲ್ಲಿ ಭಾಗಿಯಾಗಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ಆಟದಲ್ಲಿ ಸೋತವರಾರು ಗೆದ್ದವರಾರು ಎಂದು ಕೇಳೋದಾದರೆ.. ಅದರರಲ್ಲಿ ಎರಡು ಮಾತೇ ಇಲ್ಲ ಎಂಬಂತೆ ಭಾರತೀಯ ಯೋಧರು ಚೀನಾ ಯೋಧರನ್ನು ಅತ್ಯಂತ ಸುಭವಾಗಿ ಮಣಿಸಿದ್ದಾರೆ. ಇನ್ನು ಗೆದ್ದು ಬೀಗಿರುವ ಭಾರತ ತಂಡಕ್ಕೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಅಂದರೆ ಸೋಮವಾರ ಮೇಘಾಲಯದಲ್ಲಿ ಭಾರತ ಮತ್ತು ಫ್ರಾನ್ಸ್‌ ಯೋಧರ ನಡುವೆ ಈ ಹಗ್ಗ-ಜಗ್ಗಾಟ ಸ್ಪರ್ಧೆ ನಡೆದಿತ್ತು. ʼಶಕ್ತಿ 2024’ ಎಂಬ ಹೆಸರಿನಲ್ಲಿ ಮೇಘಾಲಯದಲ್ಲಿ ನಡೆಯುತ್ತಿದ್ದ ಜಂಟೀ ಸೇನಾ ಕಾರ್ಯಾಚರಣೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೇಘಾಲಯದ ಉಮ್ರೋಯ್‌ನಲ್ಲಿ ಆಯೋಜಿಸಲಾಗಿದ್ದ ಜಂಟಿ ಮಿಲಿಟರಿ ತರಬೇತಿ ಸೋಮವಾರ ಮುಕ್ತಾಯಗೊಂಡಿತು. ಇದು ಭಾರತ ಮತ್ತು ಫ್ರಾನ್ಸ್ ಎರಡರಲ್ಲೂ ಪರ್ಯಾಯವಾಗಿ ನಡೆಯುವ ದ್ವೈವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದೆ. ಕೊನೆಯ ಆವೃತ್ತಿಯನ್ನು ನವೆಂಬರ್ 2021 ರಲ್ಲಿ ಫ್ರಾನ್ಸ್‌ನಲ್ಲಿ ನಡೆಸಲಾಯಿತು.

ಇದನ್ನೂ ಓದಿ: Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

Exit mobile version