Site icon Vistara News

Viral Video: ತಂದೆಯ ತೋಳಿನಿಂದ ಜಾರಿ 40 ಅಡಿ ಕೆಳಗೆ ಬಿದ್ದ ಮಗು!

raypura

raypura

ಛತ್ತೀಸ್‌ಗಢ: ಶಾಪಿಂಗ್ ಮಾಲ್‌ನ ಮೂರನೇ ಮಹಡಿಯ ಎಸ್ಕಲೇಟರ್‌ (Escalator)​​​​​ ಹತ್ತುವಾಗ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ 40 ಅಡಿಗಳಷ್ಟು ಕೆಳಗೆ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಮಂಗಳವಾರ (ಮಾರ್ಚ್‌ 19) ರಾತ್ರಿ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಮಾಲ್‌ನಲ್ಲಿ ಈ ಆಘಾತ ಸಂಭವಿಸಿದ್ದು, ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ವಿಡಿಯೊದಲ್ಲಿ ಏನಿದೆ?

ಈ ಸಿಸಿ ಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ತೋಳಿನಲ್ಲಿ ಮಗುವನ್ನು ಎತ್ತಿಕೊಂಡು ಎಸ್ಕಲೇಟರ್‌​​ ಬಳಿ ಬರುವುದು ಸೆರೆಯಾಗಿದೆ. ಈ ವೇಳೆ ಅವರ ಜತೆ ಇನ್ನೊಂದು ಮಗು ಕೂಡ ಹೆಜ್ಜೆ ಹಾಕುತ್ತಿರುತ್ತದೆ. ಎಸ್ಕಲೇಟರ್‌ ಹತ್ತಲು ದೊಡ್ಡ ಮಗುವಿಗೆ ಸಹಾಯ ಮಾಡಲು ಆ ವ್ಯಕ್ತಿ ಮುಂದಾಗುತ್ತಾರೆ. ಈ ವೇಳೆ ಆಕಸ್ಮಿಕವಾಗಿ ತೋಳಿನಲ್ಲಿದ್ದ 1 ವರ್ಷದ ಮಗು ಕೈಯಿಂದ ಜಾರಿ 40 ಅಡಿಗಳಷ್ಟು ಆಳಕ್ಕೆ ಬಿದ್ದಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

40 ಅಡಿಗಳಷ್ಟು ಎತ್ತರದಿಂದ ಬಿದ್ದ ಮಗುವನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಅಸುನೀಗಿತ್ತು ಎಂದು ಎಂದು ವೈದ್ಯರು ತಿಳಿಸಿದ್ದಾರೆ. ದೇವೇಂದ್ರ ನಗರ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

ಹಿಂದೆಯೂ ನಡೆದಿತ್ತು

ಕಳೆದ ತಿಂಗಳು ಹೈದರಾಬಾದ್‌ನಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. 14 ತಿಂಗಳ ಗಂಡು ಮಗು ಆಕಸ್ಮಿಕವಾಗಿ ತಾಯಿಯ ತೋಳಿನಿಂದ ಬಿದ್ದು ಸಾವನ್ನಪ್ಪಿತ್ತು. ಮಗುವಿನ ತಾಯಿ ಆಸ್ಪತ್ರೆಯಲ್ಲಿ ತಪಾಸಣೆ ಮುಗಿಸಿ ಮೆಡಿಕಲ್ ಶಾಪ್‌ಗೆ ತೆರಳುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾಳೆ. ಆಕೆಯ ತೋಳುಗಳಲ್ಲಿದ್ದ ಪುಟ್ಟ ಮಗ ಸಿಧು ಕೂಡ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ಈ ಘಟನೆ ಮರೆಯಾಗುವ ಮುನ್ನ ಅಂತಹದ್ದೆ ಇನ್ನೊಂದು ದುರಂತ ನಡೆದಿದೆ.

ಇದನ್ನೂ ಓದಿ: Zomato Pure Veg: ಜೊಮ್ಯಾಟೋ ಪ್ಯೂರ್‌ ವೆಜ್‌ ಫು‌ಡ್; ಸೋಶಿಯಲ್‌ ಮೀಡಿಯಾದಲ್ಲಿ ಬಿತ್ತು ಬೆಂಕಿ! ಅಳುಕಿದ ಸಂಸ್ಥೆ

Exit mobile version