ಬೆಂಗಳೂರು: ಜಗತ್ತಿನಲ್ಲಿ ಅತ್ಯಂತ ಕಠಿಣ, ಅಪಾಯಕಾರಿ ಉದ್ಯೋಗ (Most Difficult Job) ಯಾವುದು ಎನ್ನುವ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸಬಹುದು. ನಿಮ್ಮ ಮನಸ್ಸಲ್ಲೂ ಥಟ್ಟನೆ ಕೆಲವೊಂದು ಸವಾಲು ಎನಿಸುವ ಉದ್ಯೋಗದ ಚಿತ್ರ ಮೂಡಿರಬಹುದು. ಆದರೆ ಈ ವಿಡಿಯೊ ನೋಡಿದ ಬಳಿಕ ನಿಮ್ಮ ಅಭಿಪ್ರಾಯ ಬದಲಾಗಬಹುದು. ಇದುವೇ ಅತ್ಯಂತ ಸವಾಲಿನ ಕೆಲಸ ಎನ್ನುವ ತೀರ್ಮಾನಕ್ಕೆ ನೀವು ಬರಲೂಬಹುದು. ಹೌದು, ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ (Viral video). ಅಷ್ಟಕ್ಕೂ ಈ ವಿಡಿಯೊದಲ್ಲಿ ಏನಿದೆ ಎನ್ನುವ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮೈ ಜುಂ ಎನಿಸುವ ವಿಡಿಯೊ ನೋಡಿ
ಕೆಲವೊಂದು ಅಪಾಯಕಾರಿ ಉದ್ಯೋಗಗಳು ಜೀವಕ್ಕೆ ಅಪಾಯವನ್ನು ಉಂಟು ಮಾಡುತ್ತವೆ. ಆದರೂ ಕೆಲವರು ಅದರಲ್ಲೇ ಮುಂದುವರಿಯುತ್ತಾರೆ. ಹಣದ ಕಾರಣದಿಂದ ಕೆಲವರಿಗೆ ಅನಿವಾರ್ಯವಾದರೆ ಇನ್ನು ಕೆಲವರು ʼಥ್ರಿಲ್ʼಗಾಗಿ ಇಂತಹ ಕೆಲಸ ನಿರ್ವಹಿಸುತ್ತಾರೆ. ಇತ್ತೀಚೆಗೆ ಇಬ್ಬರು ವನ್ಯಜೀವಿ ಸಂರಕ್ಷಣಾ ತಾಣದಲ್ಲಿ ಚಿರತೆಗಳಿಗೆ ಆಹಾರವನ್ನು ನೀಡುತ್ತಿರುವ ವಿಡಿಯೊ ವೈರಲ್ ಆಗಿದೆ. ಇದು ನಿಜವಾಗಿಯೂ ವಿಶ್ವದ ಅತ್ಯಂತ ಅಪಾಯಕಾರಿ ಕೆಲಸ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
🥩Kahvaltı vakti. pic.twitter.com/h4xlF2XYHt
— Vahşi Hayatlar (@VahsiHayatlar) September 22, 2021
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಹಲವು ಚಿರತೆಗಳಿಗೆ ಇಬ್ಬರು ಗಾಡಿಯಲ್ಲಿ ತಂದ ಆಹಾರವನ್ನು ಹಂಚುವ ದೃಶ್ಯ ಇದಾಗಿದೆ. ʼತಿಂಡಿಯ ಸಮಯ! ಅವರಿಬ್ಬರು ಅದ್ಭುತ ವ್ಯಕ್ತಿಗಳು. ನಿಮಗೆ ಈ ಉದ್ಯೋಗ ನಿರ್ವಹಿಸುವ ಧೈರ್ಯ ಇದ್ಯಾ?ʼ ಎನ್ನುವ ಪ್ರಶ್ನೆಯೊಂದಿಗೆ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇವರು ಎಸೆಯುವ ಮಾಂಸವನ್ನು ಚಿರತೆಗಳು ಗಾಳಿಯಲ್ಲಿ ಹಾರಿ ಕ್ಯಾಚ್ ಹಿಡಿಯುವುದನ್ನು ವಿಡಿಯೊದಲ್ಲಿ ಕಾಣಬಹುದು. ಅಲ್ಲದೆ ಎರಡು ಚಿರತೆಗಳು ಮಾಂಸದ ತುಂಡನ್ನು ಎಳೆಯುವುದನ್ನು ಮತ್ತು ಅದಕ್ಕಾಗಿ ಜಗಳ ಮಾಡುತ್ತಿರುವುದೂ ಕಂಡು ಬರುತ್ತಿದೆ. ಅಚ್ಚರಿಯ ಸಂಗತಿ ಎಂದರೆ ಚಿರತೆಗಳು ಈ ಇಬ್ಬರು ವ್ಯಕ್ತಿಗಳ ತಂಟೆಗೆ ಹೋಗುವುದಿಲ್ಲ.
ನೆಟ್ಟಿಗರ ಪ್ರತಿಕ್ರಿಯೆ
ಈಗಾಗಲೇ ಈ ವಿಡಿಯೊವನ್ನು 1 ಲಕ್ಷಕ್ಕಿಂತ ಅಧಿಕ ಮಂದಿ ಬೆರಗುಗಣ್ಣಿನಿಂದ ವೀಕ್ಷಿಸಿದ್ದಾರೆ. ಚಿರತೆಗಳು ಆ ವ್ಯಕ್ತಿಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸದೇ ಇರುವುದು ಹಲವರಲ್ಲಿ ಅನುಮಾನ ಮೂಡಿಸಿದೆ. ʼʼಚಿರತೆಗಳು ಆ ವ್ಯಕ್ತಿಗಳನ್ನು ಯಾಕೆ ತಿನ್ನುತ್ತಿಲ್ಲ?ʼʼ ಎಂದು ಒಬ್ಬರು ಕೇಳಿದ್ದಾರೆ. ಇನ್ನೊಬ್ಬರು ತಮಾಷೆಯಿಂದ, ʼʼಯಾವುದೇ ಕಾರಣಕ್ಕೂ ನನ್ನಿಂದ ಈ ಕೆಲಸ ನಿರ್ವಹಿಸಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ. ಇನ್ನೊಬ್ಬರು ಈ ಸವಾಲನ್ನು ಸ್ವೀಕರಿಸಿದ್ದಾರೆ. ʼʼಈ ಕೆಲಸ ನಿರ್ವಹಿಸಲು ನಾನು ಉತ್ಸುಕನಾಗಿದ್ದೇನೆ. ಇದು ಸವಾಲಿನಿಂದ ಕೂಡಿದ ಉದ್ಯೋಗʼʼ ಎಂದು ಅವರು ಹೇಳಿದ್ದಾರೆ. ʼʼಬಹುಶಃ ಆ ಸಿಬ್ಬಂದಿ ಸಂಭಾವ್ಯ ದಾಳಿಯಿಂದ ಪಾರಾಗಲು ಮುನ್ನಚ್ಚರಿಕೆ ಕ್ರಮ ತೆಗೆದುಕೊಂಡಿರಬಹುದುʼʼ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಇಲ್ಲೊಬ್ಬ ರಿಯಲ್ ಸ್ಪೈಡರ್ ಮ್ಯಾನ್; ಯಾರೂ ಅನುಕರಿಸಬೇಡಿ ಎಂದ ನೆಟ್ಟಿಗರು
ಚಿರತೆಗಳು ವಿಶ್ವದ ಅತ್ಯಂತ ಅಪಾಯಕಾರಿ ಜೀವಿಗಳು. ಚಿರತೆಗಳಿಗೆ ಆಹಾರ ನೀಡುವ ಇಬ್ಬರು ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ ಎನ್ನುವುದರಲ್ಲಿ ಸಂಶಯವಿಲ್ಲ. ಅವರ ಕೆಲಸವು ಖಂಡಿತವಾಗಿಯೂ ಕಠಿಣ. ಅದೇನೆ ಇರಲಿ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ