Site icon Vistara News

Viral Video: ವಾರಾಣಸಿ ಬೀದಿಯಲ್ಲಿ ಕಚೋರಿ, ಜಿಲೇಬಿ ಸವಿದ ಜಪಾನ್ ರಾಯಭಾರಿ!

Viral Video, Japan Ambassador Hiroshi Suzuki Relishes Kachori And Jalebi In Varanasi

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತೀಯ ತಿಂಡಿಗಳು (Indian cuisine) ಜಾಗತಿಕವಾಗಿ ಪ್ರಸಿದ್ಧಿ ಪಡಿಯುತ್ತಿವೆ. ಅದರಲ್ಲೂ ಭಾರತದಲ್ಲಿರುವ ವಿದೇಶಗಳ ರಾಯಭಾರಿಗಳು (Ambassadors in India) ದೇಶಿ ಸ್ವಾದಿಷ್ಟ ತಿಂಡಿಗಳನ್ನು ಸವಿದು ಹೆಚ್ಚೆಚ್ಚು ಪ್ರಚಾರಾ ಮಾಡುತ್ತಿದ್ದಾರೆ ಎನ್ನಬಹುದು. ಈ ಸಾಲಿನಲ್ಲಿ ಜಪಾನ್ ರಾಯಭಾರಿ ಹೀರೋಶಿ ಸುಜುಕಿ (Japan Ambassador Hiroshi Suzuki) ಅವರು ಮುಂಚೂಣಿಯಲ್ಲಿದ್ದಾರೆ. ಅವರು ಇತ್ತೀಚೆಗೆ, ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿಗೆ (Varanasi Visit) ಭೇಟಿ ನೀಡಿದ್ದರು. ಈ ವೇಳೆ, ಬೀದಿ ಬದಿಯಲ್ಲಿ ಕಚೋರಿ (Kachori) ಮತ್ತು ಜಿಲೇಬಿ (Jalebi) ಸವಿದಿದ್ದಾರೆ. ಈ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(viral video).

ಈ ಕುರಿತಾದ ವಿಡಿಯೋವೊಂದನ್ನು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿರುವ ಜಪಾನ್ ರಾಯಭಾರಿ ಹೀರೋಶಿ ಸುಜುಕಿ ಅವರು, ”ವಾರಾಣಸಿಯಲ್ಲಿ ಸ್ಟ್ರೀಟ್ ಫುಡ್ ಎಂಜಾಯ್ ಮಾಡುತ್ತಿದ್ದೇನೆ’ ಶೀರ್ಷಿಕೆ ನೀಡಿದ್ದಾರೆ. ಜಪಾನ್ ರಾಯಭಾರಿ ನಗರದ ಜನನಿಬಿಡ ಲೇನ್‌ನಲ್ಲಿ ‘ಕಚೋರಿ’ ಮತ್ತು ‘ಜಿಲೇಬಿ’ ಆನಂದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ”ನಾನು ವಾರಣಾಸಿಯಲ್ಲಿ ಕಚೋರಿಯನ್ನು ಸವಿಯುತ್ತಿದ್ದೇನೆ” ಎಂದು ಕಚೋರಿಯನ್ನು ಬಾಯಿಗಿಟ್ಟುಕೊಳ್ಳುವ ಹೀರೋಶಿ ಸುಜುಕಿ ಅವರು, ಬಳಿಕ ತಂಬಾ ಚೆನ್ನಾಗಿದೆ ಎಂಬ ಮಾತುಗಳನ್ನಾಡುವುದನ್ನು ಕೇಳಿಸಿಕೊಳ್ಳಬಹುದು.

ಎಕ್ಸ್‌ ವೇದಿಕೆಯಲ್ಲಿ ಜಪಾನ್‌ನ‌ ರಾಯಭಾರಿ ಹೀರೋಶಿ ಸುಜುಕಿ ಮತ್ತೊಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಅವರು ಜಲೇಬಿ ಸವಿಯುವುದನ್ನು ಕಾಣಬಹುದು. ಇದರಲ್ಲಿ ಅವರು ನಾನು ಜಿಲೇಬಿಯನ್ನೂ ಎಂಜಾಯ್ ಮಾಡುವೆ ಎಂದು ಹೇಳುವುದನ್ನು ಕೇಳಿಸಿಕೊಳ್ಳಬಹುದಾಗಿದೆ.

ಭಾರತಲ್ಲಿರುವ ಜಪಾನ್ ರಾಯಭಾರಿ ಹೀರೋಶಿ ಸುಜುಕಿ ಅವರು ಭಾರತೀಯ ಬೀದಿ ಬದಿಯ ತಿಂಡಿಗಳನ್ನು ಸವಿಯುತ್ತಿರುವುದು ಇದೇ ಮೊದಲ್ಲ. ಈ ಹಿಂದೆಯೂ ಅವರು ತಮ್ಮ ಪತ್ನಿ ಐಕೋ ಸುಜುಕಿ ಜತೆಗೂಡಿ ಬೀದಿ ಬದಿಯ ತಿಂಡಿಗಳನ್ನು ಸವಿದಿದ್ದರು. ಈ ಕುರಿತಾದ ವಿಡಿಯೋ ಮತ್ತು ಫೋಟೋಗಳನ್ನು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿಕೊಂಡಿದ್ದರು.

ಇಂಟರ್ನೆಟ್ ಬಳಕೆದಾರರು ಅವರ ಪೋಸ್ಟ್ ಅನ್ನು ಇಷ್ಟಪಟ್ಟಿದ್ದಾರೆ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅವರ ನಿಜವಾದ ಆಸಕ್ತಿಗಾಗಿ ಅನೇಕರು, ಸುಜುಕಿಯನ್ನು ಪ್ರಶಂಸಿಸಿದ್ದಾರೆ. ಅನೇಕ ಬಳಕೆದಾರರು, ವಾರಾಣಸಿಯ ವಿವಿಧ ಸ್ಥಳಗಳಲ್ಲಿ ದೊರೆಯುವ ಇತರ ತಿಂಡಿಗಳನ್ನು ತಿನ್ನಲು ಸಲಹೆ ಕೂಡ ನೀಡಿದ್ದಾರೆ. ಒಬ್ಬ ಬಳಕೆದಾರರು, ”ಇದು ತುಂಬಾ ಚೆನ್ನಾಗಿದೆ. ಭಾರತವನ್ನು ಉತ್ತೇಜಿಸಲು ರಾಯಭಾರಿ ಹೇಗೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬುದು ನನಗೆ ಇಷ್ಟವಾಯಿತು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ಬನ್ಸಾರಿ ಪಾನ್ ಕೂಡ ಟ್ರೈ ಮಾಡಿ. ನೀವು ಖಂಡಿತ ಅದನ್ನು ಇಷ್ಟ ಪಡಲಾರದೇ ಇರಲಾರಿರಿ ಎಂದು ಹೇಳಿದ್ದಾರೆ.

ಜಪಾನ್ ರಾಯಭಾರಿ, ಭಾರತಕ್ಕೆ ಕಳೆದು ವರ್ಷ ಆಗಮಿಸಿದ್ದಾರೆ. ಅಂದಿನಿಂದಲೂ ಅವರು ಭಾರತೀಯ ಆಹಾರದ ಮೇಲಿನ ಪ್ರೀತಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿದ್ದಾರೆ. 61 ವರ್ಷದ ರಾಯಭಾರಿ ಭಾರತೀಯ ಭಕ್ಷ್ಯಗಳನ್ನು ಆನಂದಿಸುತ್ತಿರುವ ವೀಡಿಯೊಗಳು ಅನೇಕ ಬಾರಿ ವೈರಲ್ ಆಗಿವೆ.

ಈ ಸುದ್ದಿಯನ್ನೂ ಓದಿ: Video Viral: ವಡಾ ಪಾವ್ ತಿಂದು, ಅಯ್ಯೋ ಖಾರ ಅಂದ್ರು ಜಪಾನ್ ರಾಯಭಾರಿ! ಹೀಗೆ ವಿಡಿಯೋ ಪೋಸ್ಟ್ ಮಾಡಿ ಅಂದ್ರು ಮೋದಿ

Exit mobile version