ಆಧಾರ್ ಕಾರ್ಡ್ ನಂತಹ (Aadhar card) ಕೆಲವೊಂದು ದಾಖಲೆಗಳಿಗೆ ಮಕ್ಕಳ (child) ಫೋಟೋ (photo) ಕಡ್ಡಾಯವಾಗಿರುತ್ತದೆ. ಆದರೆ ಪುಟ್ಟ ಮಕ್ಕಳ ಫೋಟೋ ತೆಗೆಸುವ ವೇಳೆಗೆ ತಂದೆ, ತಾಯಿ ಮಾತ್ರವಲ್ಲ ಫೋಟೋಗ್ರಾಫರ್ ಕೂಡ ಸುಸ್ತಾಗಿ ಬಿಡುತ್ತಾರೆ. ಆದರೆ ಇಲ್ಲೊಂದು ಮಗು ಮಾತ್ರ ಫೋಟೋ ಎಂದಾಕ್ಷಣ ತನ್ನ ಮುದ್ದಾದ ಭಂಗಿಯನ್ನು ತೋರಿಸಿ ಎಲ್ಲರ ಮನ ಗೆದ್ದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಸಾಕಷ್ಟು ಮಂದಿಯ ಮೆಚ್ಚುಗೆ ಕೂಡ ಗಳಿಸಿದೆ.
ಸಣ್ಣ ಮಕ್ಕಳು ಮಾತ್ರವಲ್ಲ ದೊಡ್ಡವರ ಫೋಟೋಗಳು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತು ಪತ್ರದಲ್ಲಿ ಅಸಮಾಧಾನಗೊಂಡಿರುವಂತೆ ತೋರಿಸುತ್ತದೆ. ಆದರೆ ಈ ಪುಟ್ಟ ಹುಡುಗಿ ಮಾತ್ರ ಯಾವುದೇ ತಪ್ಪು ಆಗದಂತೆ ನೋಡಿಕೊಂಡಳು. ಗುರುತಿನ ಚೀಟಿಗಾಗಿ ಉತ್ತಮ ಭಂಗಿಯನ್ನು ತೋರಿ ಎಲ್ಲರ ಮನ ಗೆದ್ದಳು.
ಅವಳು ಕೆಮರಾದ ಮುಂದೆ ಮುಗುಳ್ನಕ್ಕಿರುವುದು ಮಾತ್ರವಲ್ಲ ತನ್ನ ವಿಭಿನ್ನ ಭಂಗಿಯನ್ನು ತೋರಿ ಎಲ್ಲರ ಮನ ಗೆದ್ದಳು.
ತಾನು ಯಾವುದಕ್ಕಾಗಿ ಫೋಟೋ ತೆಗೆಸಿಕೊಳ್ಳುತ್ತಿದ್ದೇನೆ ಎಂಬ ಅರಿವಿಲ್ಲದ ಈ ಮಗು ಆಧಾರ್ ಕಾರ್ಡ್ ಫೋಟೋಗಾಗಿ ಬಗೆ ಬಗೆಯ ಪೋಸ್ ನೀಡಿದ್ದಾಳೆ. 20ಕ್ಕೂ ಹೆಚ್ಚು ಪೋಸ್ ನೀಡಿರುವ ಆಕೆಯ ಯಾವ ಫೋಟೋವನ್ನು ಕಾರ್ಡ್ ನಲ್ಲಿ ಅಚ್ಚು ಹಾಕುವ ಗೊಂದಲ ಈಗ ಆಧಾರ್ ಕಾರ್ಡ್ ಮಾಡುವ ಸಿಬ್ಬಂದಿಯದ್ದಾಗಿದೆ.
ಗುರುತು ಚೀಟಿಗಳಿಗಾಗಿ ಸಾಮಾನ್ಯವಾಗಿ ವಯಸ್ಕರ ಫೋಟೋ ತೆಗೆಯುವುದು ಸುಲಭ. ಆದರೆ ಮಕ್ಕಳ ಫೋಟೋ ತೆಗೆಯುವುದು ಅಷ್ಟು ಸುಲಭವಲ್ಲ. ಅವುಗಳ ಗಮನ ಎಲ್ಲೋ ಇರುತ್ತದೆ. ಇನ್ನು ಕೆಲವು ಮಕ್ಕಳು ಅಪರಿಚಿತರನ್ನು ನೋಡಿ ಅಳಲು ಪ್ರಾರಂಭಿಸುತ್ತದೆ. ಮತ್ತೆ ಕೆಲವರು ನಿಂತಲ್ಲಿ ನಿಲ್ಲಲ್ಲ. ಅತ್ತಿತ್ತ ಓಡಿ ಹೋಗುವುದು ಮಾಡುತ್ತಾರೆ. ಇದಲ್ಲ ಮುಗಿದು ಒಂದು ಒಳ್ಳೆಯ ಫೋಟೋ ಸಿಕ್ಕರೆ ಮಾತ್ರ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯ. ಇಲ್ಲವಾದರೆ ಮತ್ತದೇ ಮಕ್ಕಳ ತಕರಾರು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: Kerala Govt: ಕೇರಳ ಸರ್ಕಾರಿ ನೌಕರರ ಪೈಕಿ ಮೂರರಲ್ಲಿ ಒಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್
ಆದರೆ ಈ ಮಗುವನ್ನು ಪೋಷಕರು ಆಧಾರ್ ಕಾರ್ಡ್ ಸೆಂಟರ್‌ಗೆ ಕರೆದುಕೊಂಡು ಬಂದು ಕುರ್ಚಿಯ ಮೇಲೆ ನಿಲ್ಲಿಸಿ ಕೆಮರಾಗೆ ಪೋಸ್ ನೀಡಲು ಹೇಳಿದ್ದಾರೆ. ಫೋಟೋ ತೆಗೆಯುತ್ತಾರೆ. ಕೆಮರಾ ನೋಡು ಎಂದಿದ್ದಾರೆ. ತಕ್ಷಣ ಮಗು ಒಂದರ ಮೇಲೊಂದರಂತೆ ಪೋಸ್ ನೀಡುತ್ತಾ ಹೋಗಿದ್ದಾಳೆ. ಪುಟಾಣಿ ಮಗುವಿನ ಈ ಪೋಸ್ ಅಲ್ಲಿರುವ ಸಿಬ್ಬಂದಿಗೆ ಮಾತ್ರವಲ್ಲ ಅಲ್ಲಿದ್ದವರೆಲ್ಲರ ಗಮನ ಸೆಳೆದಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ.