Site icon Vistara News

Viral Video: ಮದುವೆಗೂ ಮೊದಲು ವಧುವನ್ನು ಕಿಡ್ನ್ಯಾಪ್‌ ಮಾಡಲೇಬೇಕು! ಇದು ಈ ಜನಾಂಗದ ಕಡ್ಡಾಯ ನಿಯಮ!

Viral Video

ವಿವಾಹ ವಿಧಿವಿಧಾನಗಳು (Wedding Rituals) ವಿಶ್ವದ ಬೇರೆಬೇರೆ ಭಾಗಗಳಲ್ಲಿ ಬೇರೆಬೇರೆಯಾಗಿರುತ್ತದೆ. ಅದರಲ್ಲೂ ಕೆಲವೊಂದು ಚಿತ್ರವಿಚಿತ್ರ ಆಚರಣೆಗಳೂ ಇವೆ. ಅದರಲ್ಲಿ ನಮಿಬಿಯಾದ (Namibia) ಅರೆ ಅಲೆಮಾರಿ ಬುಡಕಟ್ಟು (tribe) ಜನಾಂಗವಾದ ಹಿಂಬಾದ (himba) ಈ ವಿವಾಹ ಆಚರಣೆಯು ಸೇರಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋಗಳು ವೈರಲ್ (Viral Video) ಆಗಿ ಚರ್ಚೆಗೆ ಕಾರಣವಾಗಿದೆ.

ಹಿಂಬಾವನ್ನು ನಮೀಬಿಯಾದ ಕೊನೆಯ ಅರೆ ಅಲೆಮಾರಿ ಬುಡಕಟ್ಟು ಜನಾಂಗ ಎಂದು ಪರಿಗಣಿಸಲಾಗಿದೆ. ಸುಮಾರು 50,000 ಜನಸಂಖ್ಯೆಯನ್ನು ಹೊಂದಿರುವ ಇವರು ಇಲ್ಲಿನ ಸ್ಥಳೀಯ ಜನರು. ಅವರಿಗೆ ಸ್ವಂತ ಮನೆಗಳಿದ್ದರೂ ಮಳೆ ಅಥವಾ ನೀರಿನ ಕೊರತೆಯಿಂದಾಗಿ ಅಲೆಮಾರಿಗಳಂತೆ ಜೀವನ ನಡೆಸುತ್ತಾರೆ. ಹೀಗಾಗಿ ಇವರನ್ನು ಅರೆ ಅಲೆಮಾರಿ ಎಂದು ಕರೆಯಲಾಗುತ್ತದೆ. ಈ ಬುಡಕಟ್ಟು ಜನ ತಮ್ಮ ವಿಚಿತ್ರ ವಿವಾಹ ಪದ್ಧತಿಗಳಿಂದಾಗಿ ಆಗಾಗ್ಗೆ ಎಲ್ಲರ ಗಮನ ಸೆಳೆಯುತ್ತಾರೆ.

ವಧುವಿನ ಅಪಹರಣ

ಹಿಂಬಾ ಬುಡಕಟ್ಟಿನಲ್ಲಿ ಮದುವೆಗೆ ಮೊದಲು ವಧುವನ್ನು ಅಪಹರಿಸಲಾಗುತ್ತದೆ. ಆಕೆಯನ್ನು 100 ದಿನಗಳ ಕಾಲ ಹೆಚ್ಚಿನ ಭದ್ರತೆಯ ಕೋಣೆಯಲ್ಲಿ ಇರಿಸಲಾಗುತ್ತದೆ. ಆ ಸಮಯದಲ್ಲಿ ಕೆಂಪು ಮಣ್ಣನ್ನು ಅವಳ ಸಂಪೂರ್ಣ ದೇಹಕ್ಕೆ ಲೇಪಿಸಲಾಗುತ್ತದೆ. ಇದೀಗ ಅಂತಹ ವಿಡಿಯೋ ವೈರಲ್ ಆಗಿದೆ. ಹಿಂಬಾ ಬುಡಕಟ್ಟಿನಲ್ಲಿ ಮದುವೆಯ ಸಂಪ್ರದಾಯದಲ್ಲಿ ವಧುವಿನ ಅಪಹರಣ ಮತ್ತು ಅವಳಿಗೆ ಕೆಂಪು ಮಣ್ಣನ್ನು ಹೊದಿಸುವುದನ್ನು ಒಳಗೊಂಡಿರುತ್ತದೆ.

ಹೀಗೆ ಅವಳನ್ನು ಅಪಹರಿಸುವಾಗ ವಧು ಹೊಸ ಬಟ್ಟೆ ಮತ್ತು ದುಬಾರಿ ಆಭರಣಗಳೊಂದಿಗೆ ಅಲಂಕರಿಸಲ್ಪಡುತ್ತಾಳೆ. ಈ ಸಮಯದಲ್ಲಿ ಅವಳು ಧರಿಸುವ ಕೆಲವು ವಿಶೇಷ ಉಡುಪುಗಳು ಒಕೋರಿ ಎಂದು ಕರೆಯಲ್ಪಡುವ ಚರ್ಮದ ಶಿರಸ್ತ್ರಾಣವಾಗಿದೆ. ಇದು ಸಾಮಾನ್ಯವಾಗಿ ವಧುವಿನ ತಾಯಿಯಿಂದ ಸಿಗುವ ಉಡುಗೊರೆಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಹಿಂಬಾ ಬುಡಕಟ್ಟಿನ ಹುಡುಗಿಯೊಬ್ಬಳು ತನ್ನ ದೇಹದಾದ್ಯಂತ ಕೆಂಪು ಮಣ್ಣನ್ನು ಲೇಪಿಸಿಕೊಂಡು ಕುಳಿತಿದ್ದಾಳೆ. ಕಾಲ್ಬೆರಳಿನಿಂದ ಕೂದಲಿನವರೆಗೆ, ಹುಡುಗಿ ಕೆಂಪು ಮಣ್ಣಿನಲ್ಲಿಮುಚ್ಚಲ್ಪಟ್ಟಿರುತ್ತಾಳೆ.
ಘಾನಾದ ಫ್ರಾಫಾ ಬುಡಕಟ್ಟು ಕೂಡ ಈ ಪದ್ಧತಿಯನ್ನು ಅನುಸರಿಸುತ್ತದೆ.

ಈ ಕುರಿತು ಕಾಮೆಂಟ್ ಮಾಡಿರುವ ಒಬ್ಬರು, ಹುಡುಗಿಯನ್ನು 100 ದಿನಗಳ ಕಾಲ ಕೆಂಪು ಮಣ್ಣಿನಲ್ಲಿ ಮುಚ್ಚಲು ಏನಾದರೂ ವೈಜ್ಞಾನಿಕ ಕಾರಣವಿದೆಯೇ ಎಂದು ಪ್ರಶ್ನಿಸಿದ್ದಾರೆ.


ಮದುವೆ ಮತ್ತು ಮಧುಚಂದ್ರದ ಮೊದಲು ಅವಳ ಚರ್ಮವನ್ನು ನಯಗೊಳಿಸುವುದಕ್ಕಾಗಿ ಮತ್ತು ಅವಳ ದೇಹವನ್ನು ಸ್ವಚ್ಛ ಗೊಳಿಸುವುದಕ್ಕಾಗಿ ಈ ರೀತಿ ಮಾಡುತ್ತಾರೆಯೇ ಎಂಬುದನ್ನು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಹೆಚ್ಚಿನ ಸಂಪ್ರದಾಯ, ಪದ್ಧತಿ ಮತ್ತು ಆಚರಣೆಗಳು ವೈಜ್ಞಾನಿಕ ಮಹತ್ವವನ್ನು ಹೊಂದಿವೆ ಮತ್ತು ಜನರು ಅದನ್ನು ಅನುಸರಿಸುವಂತೆ ಮಾಡಲು ಧಾರ್ಮಿಕ ನಂಬಿಕೆಗಳಿಗೆ ಸೇರಿಸಲಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ

Exit mobile version