Site icon Vistara News

Viral Video: KSRTC ಬಸ್‌ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರು! ಡ್ರೈವರ್‌ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

Viral Video

ಕೇರಳ: ಏಳು ತಿಂಗಳು ಕಳೆಯುತ್ತಿದ್ದಂತೆ ಗರ್ಭಿಣಿ(Pregnant)ಯರನ್ನು ದೂರ ಪ್ರಯಾಣಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಅದರಲ್ಲೂ ಪ್ರಸವ ದಿನ ಸಮೀಪಿಸುತ್ತಿದ್ದಂತೆ ಮನೆಯಿಂದ ಹೊರಗಡೆ ಕಾಲಿಡಲೂ ಹಿರಿಯರು ಬಿಡುವುದಿಲ್ಲ. ಅಂತಹದ್ರಲ್ಲಿ ಬಸ್‌(KSRTC Bus), ಕಾರಿನಲ್ಲ ಪ್ರಯಾಣ ಬಹಳ ದೂರದ ಮಾತಾಯ್ತು. ಈ ರೀತಿ ಮಾಡುವುದಕ್ಕೆ ಕಾರಣವೂ ಇದೆ. ಕೆಲವೊಮ್ಮೆ ಪ್ರಯಾಣ ಮಧ್ಯೆಯೆ ಹೆರಿಗೆ ಕಾಣಿಸಿಕೊಂಡು ಅವಾಂತರಗಳು ಸಂಭವಿಸಿರುವ ಘಟನೆಗಳೂ ನಡೆದಿವೆ. ಇದೀಗ ಅಂತಹದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಕೆಎಸ್‌ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಗೆ ಮಾರ್ಗ ಮಧ್ಯೆಯೇ ಪ್ರಸವ ವೇದನೆ ಕಾಣಿಸಿಕೊಂಡಿದ್ದು, ಬಸ್ಸಿನಲ್ಲೇ ಹೆರಿಗೆ ಆಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ:

37 ವರ್ಷದ ಮಹಿಳೆ ವೈದ್ಯರನ್ನು ಕಾಣಲೆಂದು ತ್ರಿಶೂರ್‌ನನಿಂದ ಕೋಜಿಕ್ಕೊಡ್‌ನ ತೊಟ್ಟಿಲ್‌ಪಾಲಂಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್‌ ಪೇರಮಂಗಲಂ ಎಂಬಲ್ಲಿ ತಲುಪುತ್ತಿದ್ದಂತೆ ಮಹಿಳೆಗೆ ತೀವ್ರವಾಗಿ ಹೆರಿಗೆ ನೋವು ಕಾಣಸಿಕೊಂಡಿದೆ. ಈ ವಿಚಾರ ಬಸ್‌ ನಿರ್ವಾಹಕನ ಗಮನಕ್ಕೆ ತಂದ ತಕ್ಷಣ ಆತ ಡ್ರೈವರ್‌ಗೆ ಪರಿಸ್ಥಿತಿಯ ಗಂಭೀರತೆ ತಿಳಿಸಿದ್ದಾನೆ. ತಕ್ಷಣ ಬಸ್‌ ತಿರುಗಿಸಿದ ಡ್ರೈವರ್ ನೇರವಾಗಿ ಬಸ್ಸನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ತೆಗೆದುಕೊಂಡು ಬಂದಿದ್ದಾನೆ.

ಬಸ್‌ನಲ್ಲಿದ್ದ ಮಹಿಳೆಗೆ ಪ್ರಸವ ವೇದನೆ ಆರಂಭವಾಗಿದೆ ಅನ್ನೋ ವಿಚಾರವನ್ನು ಬಸ್‌ ನಲ್ಲಿದ್ದ ಪ್ರಯಾಣಿಕರೊಬ್ಬರು ಆಸ್ಪತ್ರೆಗೆ ಮಾಹಿತಿ ನೀಡಿದ್ದರು. ಹೀಗಾಗಿ ಬಸ್‌ ಬರುತ್ತಿದ್ದಂತೆ ಸ್ಟ್ರಚ್ಚರ್‌ ತೆಗೆದುಕೊಂಡು ಸಿದ್ಧವಾಗಿದ್ದ ಆಸ್ಪತ್ರೆಯ ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆಗೆ ಶಿಫ್ಟ್‌ ಮಾಡಲು ರೆಡಿ ಆಗಿದ್ದಾರೆ. ಆದ್ರೆ ಆ ವೇಳೆಗಾಗಲೇ ಸಮಯ ಮೀರಿದ್ದ ಕಾರಣ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಮಹಿಳೆಗೆ ಬಸ್‌ ಒಳಗಡೆಯೇ ಹೆರಿಗೆ ಮಾಡಿಸಿದ್ದಾರೆ. ಬಳಿಕ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಮಹಿಳೆಗೆ ಹೆರಿಗೆ ಮಾಡಿಸುವವರೆಗೂ ಬಸ್ ಹಾಗೂ ಪ್ರಯಾಣಿಕರು ಕಾದು ಕುಳಿತಿದ್ದು, ಪ್ರಸವದ ಬಳಿಕ ಬಸ್ ಮುಂದಕ್ಕೆ ಚಲಿಸಿದೆ. ಬಸ್‌ ನಿರ್ವಾಹಕ ಹಾಗೂ ಡ್ರೈವರ್ ಅವರ ಸಮಯ ಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

Exit mobile version