ಹೊಸದಿಲ್ಲಿ: ಇತ್ತೀಚೆಗೆ ಪಾಗಲ್ ಪ್ರೇಮಿಗಳ ಹಾವಳಿ ಹೆಚ್ಚಾಗಿದೆ. ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಪ್ರೀತಿಸಿದವಳನ್ನೇ ಕೊಲೆಗೈಯುವುದು, ಹಲ್ಲೆ ನಡೆಸಿ ಅಟ್ಟಹಾಸ ಮೆರೆಯುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ಇದೀಗ ಎಲ್ಲೆಡೆ ಸದ್ದು ಮಾಡಿದೆ. ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಬೈಕ್‌ನಲ್ಲಿ ಕೂರಿಸಿಕೊಂಡು ಲೈವ್ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ಫುಲ್ ವೈರಲ್(Viral Video) ಆಗಿದೆ.
ಸಮೀರ್ ಎಂಬ ಕಿಡಿಗೇಡಿ ಕಿಯಾರಾ ಎಂಬ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಬೈಕ್‌ನಲ್ಲಿ ಕೂರಿಸಿಕೊಂಡು ಲೈವ್ ವಿಡಿಯೋ ಮಾಡುತ್ತಾ ಎಲ್ಲರಿಗೂ ಬೆದರಿಕೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಕಿಯಾರಾ ಮನೆಯಿಂದ ಹೊರಬರುತ್ತಿದ್ದಂತೆ ಇಬ್ಬರು ಯುವಕರು ಬೈಕ್ ನಲ್ಲಿ ಬಂದು ಹುಡುಗಿಯನ್ನು ಕಿಡ್ನಾಪ್ ಮಾಡಿದ್ದಾರೆ. ಅಲ್ಲದೇ ಬೈಕ್ ನಲ್ಲಿ ಕರೆದೊಯ್ಯುವಾಗ ಆಕೆಯ ಕೂದಲು ಎಳೆದು ಹಿಂಸೆ ನೀಡಿದ್ದಾರೆ. ಸದ್ಯ ಘಟನೆಯ ನಿಖರವಾದ ಸಮಯ ಮತ್ತು ಸ್ಥಳ ತಿಳಿದಿಲ್ಲ, ಆದರೆ ವೀಡಿಯೊದ ದೃಶ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
जबतक गिरफ्तार ना हो "Repost" रुकना नहीं चाहिए 🙏
— MANOJ SHARMA LUCKNOW UP🇮🇳🇮🇳🇮🇳 (@ManojSh28986262) June 21, 2024
घर वालों को धोखा देकर की दोस्ती की, इस कमिने को "तो अच्छा लगा"
कियारा नाम की एक लड़की ने इस कमिने समीर नाम के एक शख्स को धोखा दिया तो बाईक पर जबरदस्ती ले जा रहा है !!
"लड़की के बाल उखाड़ रहा है" "मारते हुए ले जा रहा है" "गाली दे… pic.twitter.com/hTnMaRd1UH
ವಿಡಿಯೋದಲ್ಲಿ ಕಿಯಾರಾಳ ಕೂದಲನ್ನು ಹಿಡಿದೆಳೆದ ಸಮೀರ್ ಸರಿಯಾಗಿ ಥಳಿಸಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸ್ ಅಧಿಕಾರಿಗಳು ಶೀಘ್ರವೇ ಸಮೀರ್‌ನನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಕಿಯಾರಾಗೆ ನ್ಯಾಯ ದೊರಕಿಸಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದು, ಕಾನೂನು ಜಾರಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Sonakshi Sinha: ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಇಸ್ಲಾಂಗೆ ಮತಾಂತರಗೊಳ್ಳುತ್ತಾರಾ? ವರನ ತಂದೆ ಹೇಳಿದ್ದೇನು?