Site icon Vistara News

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Viral video

ನವದೆಹಲಿ: ರೈಲೆಂದರೆ(Indian Railway) ಸಾಕು ಸದಾ ತುಂಬಿ ತುಳುಕುವ ಜನ, ಸೀಟು ಸಿಗೋದು ಬಿಡಿ ಸರಿಯಾಗಿ ನಿಲ್ಲುವುದಕ್ಕೂ ಸ್ಥಳ ಇಲ್ಲದಿರುವಂತಹ ಸ್ಥಿತಿ ಇದೇ ನೆನಪಾಗುತ್ತದೆ. ಇನ್ನು ಚಲಿಸುತ್ತಿರುವ ರೈಲಿಗೆ ಹತ್ತಲು ಹೋಗಿ ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಳ್ಳವವರೂ ಇದ್ದಾರೆ. ಇಲ್ಲ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರೂ ಜನ ಮಾತ್ರ ತಮ್ಮ ಪ್ರಾಣದ ಹಂಗು ತೊರೆದು ರೈಲಿನೊಳಗೆ ನುಗ್ಗಲು ಯತ್ನಿಸುವುದನ್ನು ಆಗಾಗ ಕಾಣುತ್ತೇವೆ. ಇದೀಗ ಅಂತಹದ್ದೇ ಘಟನೆವೋಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ. ತುಂಬಿ ತುಳುಕುತ್ತಿದ್ದ ರೈಲಿಗೆ ಜನ ಹತ್ತಲು ನೂಕು ನುಗ್ಗಲು ಮಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸ್ವಲ್ಪ ಆಯಾ ತಪ್ಪಿದರೂ ಮೆಟ್ಟಿಲಿನಲ್ಲಿ ನಿಂತ್ತಿದ್ದ ಅಷ್ಟೂ ಜನ ಹಳಿಗೆ ಬೀಳುವುದಂತೂ ಗ್ಯಾರಂಟಿ.

ವಿಡಿಯೋದಲ್ಲೇನಿದೆ?

ಚಲಿಸುತ್ತಿರುವ ರೈಲಿಗೆ ಪುರುಷ ಮತ್ತು ಮಹಿಳೆಯ ಲಗೇಜ್‌ ಸಮೇತ ಹತ್ತಲು ಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಮೊದಲಿಗೆ ಆ ವ್ಯಕ್ತಿ ಮಹಿಳೆಗೆ ಹತ್ತಲು ಸಹಾಯ ಮಾಡುತ್ತಾನೆ. ಆನಂತರದಲ್ಲಿ ತಾನೂ ಹೇಗಾದರೂ ಮಾಡಿ ಮೆಟ್ಟಿಲಿಗೆ ಹತ್ತುತ್ತಾನೆ. ಒಂದು ಕೈಯಲ್ಲಿ ರೈಲಿನ ಕಂಬಿ ಮತ್ತೊಂದು ಕೈಯಲ್ಲಿ ಭಾರೀ ಗಾತ್ರದ ಬ್ಯಾಗ್‌ ಹಿಡಿದುಕೊಂಡು ಆತನ ನೇತಾಡುತ್ತಿರುವುದನ್ನು ವಿಡಿಯೋ ಕಾಣಬಹುದಾಗಿದೆ. ಹೇಗಾದರೂ ಮಾಡಿ ರೈಲಿನೊಳಗೆ ಹತ್ತುವುದಷ್ಟೇ ಅವರ ಉದ್ದೇಶ. ಅದಕ್ಕಾಗಿ ಪ್ರಾಣದ ಹಂಗನ್ನೂ ಲೆಕ್ಕಿಸದೇ ರೀತಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ವಿಡಿಯೋ ನೋಡಿದವರು, ಇದು ಅತ್ಯಂತ ಅಪಾಯಕಾರಿ. ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸವವರೆಗೆ ಇಂತಹ ಪರಿಸ್ಥಿತಿ ಹೀಗೆ ಮುಂದುವರೆಯುತ್ತದೆ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಜನ ಟಿಕೆಟ್‌ ತೆಗೆದುಕೊಂಡು ರೈಲು ಹತ್ತಬೇಕು. ಟಿಕೆಟ್‌ ಇಲ್ಲದೇ ಪ್ರಯಾಣಿಸುವ ಪ್ರಯಾಣಿಕರ ಮೇಲೆ ನನಗೆ ಯಾವುದೇ ರೀತಿಯ ಕನಿಕರ ಇಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇಂತಹ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳ ಸೇವೆ ಕಲ್ಪಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಇದನ್ನು ಓದಿ:HD Kumaraswamy: ದೇವರಾಜೇಗೌಡರಿಗೆ ಜೈಲಲ್ಲಿ ಜೀವ ಭಯ ಇದೆ; ಕಾರಣ ಬಿಚ್ಚಿಟ್ಟ ಎಚ್‌ಡಿ ಕುಮಾರಸ್ವಾಮಿ

ಉತ್ತರಾಖಂಡದ ಲಸ್ಕರ್‌ ರೈಲ್ವೇ ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದೆ ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿದ್ದ ವ್ಯಕ್ತಿ ಫ್ಲ್ಯಾಟ್‌ಫಾರ್ಮ್‌ ಮತ್ತು ರೈಲಿನ ನಡುವಿನ ಸಂದಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಜಿಆರ್‌ಪಿ ಕಾನ್‌ಸ್ಟೇಬಲ್‌ ಉಮಾ, ಆಪದ್ಬಾಂಧವಳಂತೆ ಬಂದು ಆತನನ್ನು ರಕ್ಷಿಸಿದ್ದಾರೆ. ಇನ್ನು ಈ ಘಟನೆ ಏ.24ರಂದು ನಡೆದಿದ್ದು, ಆಹಾರ ಮತ್ತು ಜ್ಯೂಸ್‌ ತೆಗೆದು ಕೊಳ್ಳಲೆಂದು ಆ ವ್ಯಕ್ತಿ ರೈಲಿನಿಂದ ಇಳಿದಿದ್ದ. ತಕ್ಷಣ ಹೊರಡುತ್ತಿದ್ದನ್ನು ಗಮನಿಸಿದ ಆ ಓಡಿ ಹೋಗಿ ಹತ್ತಿದ್ದಾನೆ ಎನ್ನಲಾಗಿದೆ. ಕೈನಲ್ಲಿ ಆಹಾರ ಪೊಟ್ಟಣಗಳು ಇದ್ದ ಕಾರಣ ಆತನಿಗೆ ಸುಲಭವಾಗಿ ಹತ್ತಲು ಸಾಧ್ಯವಾಗಿಲ್ಲ. ಹೀಗಾಗಿ ಆಯ ತಪ್ಪಿ ಕೆಳಗೆ ಬಿದ್ದಿದ್ದ.

Exit mobile version