Site icon Vistara News

Viral Video: ಅಂಬಾನಿಗಿಂತಲೂ ರಿಚ್‌ ಈತ.. ಗದ್ದೆ ಉಳುಮೆಗೆ 20 ಲಕ್ಷದ ಕಾರೇ ಬೇಕು..!

Viral video

ನವದೆಹಲಿ: ಈಗಿನ ಕಾಲದಲ್ಲಿ ಜನಪ್ರಿಯತೆ ಪಡೆಯಲು ಅಥವಾ ಪ್ರಚಾರ ಪಡೆಯಲು ಜನ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಬೇಗ ಫೇಮಸ್‌ ಆಗ್ಬೇಕು ಅನ್ನೋ ಹುಚ್ಚಿಗೆ ಬಿದ್ದು ಎಂಥಾ ರಿಸ್ಕ್‌ ತೆಗೆದುಕೊಳ್ಳೋಕೂ ರೆಡಿ ಆಗಿರುತ್ತಾರೆ. ಇಲ್ಲ, ತಮ್ಮ ಬೆಲೆ ಬಾಳುವ ವಸ್ತುಗಳನ್ನೂ ತಮ್ಮ ಮೋಜಿಗೆ ಪಣಕ್ಕಿಡುತ್ತಾರೆ. ಒಟ್ಟಿನಲ್ಲಿ ಪ್ರಚಾರ ಸಿಕ್ಕರೆ ಸಾಕು ಎಂಬ ಭಾವನೆ ಅವರದ್ದಾಗಿರುತ್ತದೆ. ಇದೀಗ ಅಂತಹದ್ದೇ ಒಂದು ಬಹಳ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಗದ್ದೆ, ಹೊಲ ಉಳಮೆ ಮಾಡಲು ಟ್ರ್ಯಾಕ್ಟರ್‌ ಅಥವಾ ಸಾಂಪ್ರದಾಯಿಕ ಪದ್ಧತಿ ಅನುಸರಿಸುವುದಾದರೆ ಎತ್ತುಗಳನ್ನು ಬಳಸುತ್ತೇವೆ. ಆದರೆ ಇಲ್ಲೊಬ್ಬ ಭೂಪ ಗದ್ದೆ ಉಳುಮೆ ಬಳಸಿರೋದು ದುಬಾರಿ ಕಾರು(Car). ಈ ಕಾರಿನ ಬೆಲೆ ಐದಲ್ಲ.. ಹತ್ತಲ್ಲ ಬರೋಬ್ಬರಿ 20 ಲಕ್ಷ ರೂ. ಸಾಮಾಜಿಕ ಜಾಲತಾಣ(Social Media)ದಲ್ಲಿ ವಿಡಿಯೋ(Viral Video)ವೊಂದು ವೈರಲ್‌ ಆಗುತ್ತಿದೆ.

ಸ್ಕೋರ್ಪಿಯೋ N ಎಂಬ 20 ಲಕ್ಷ ರೂ ಬೆಲೆ ಈ ದುಬಾರಿ ಕಾರನ್ನು ರೋಡಿನಲ್ಲಿ ಓಡಿಸುವ ಬದಲು ಇಲ್ಲೊಬ್ಬ ಗದ್ದೆ ಉಳುಮೆಗೆ ಬಳಸಿದ್ದಾನೆ. ಲಕ್ಷಾಂತರ ರೂ ಬೆಲೆ ಈ ಸುಂದರ ಕಾರನ್ನು ಟ್ರ್ಯಾಕ್ಟರ್‌ಗಳಾಗಿ ಪರಿವರ್ತಿಸಿ ಉಳುಮೆ ಮಾಡಿದ್ದಾನೆ. ವ್ಯಕ್ತಿಯೊಬ್ಬ ಐಷಾರಾಮಿ ಕಾರಿನೊಂದಿಗೆ ಕೆಸರು ಗದ್ದೆಯನ್ನು ಉಳುಮೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ವೀಡಿಯೋದಲ್ಲಿ ಕಾರಿನ ಹಿಂಬದಿಯಲ್ಲಿ ಟ್ರ್ಯಾಕ್ಟರ್ ನೇಗಿಲು ಜೋಡಿಸಲಾಗಿದ್ದು, ಕಾರು ಹೊಲವನ್ನು ಉಳುಮೆ ಮಾಡಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಾರಿನಿಂದ ಹಾಗೆಯೇ ಇಳಿಯುತ್ತಾನೆ. ಕಾರು ತನ್ನಷ್ಟಕ್ಕೆ ಮುಂದಕ್ಕೆ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಚಾಲಕ ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿರುವುದರಿಂದ ಅವನ ಗುರುತು ಪತ್ತೆ ಆಗಿಲ್ಲ. ಇನ್ನು ಡ್ರೈವರ್‌ ಇಲ್ಲದೆಯೇ ಕಾರು ಚಲಿಸುತ್ತದೆ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಇನ್ನು ಇದು ಬರೀ ರೀಲ್ಸ್‌ಗಾಗಿ ಮಾಡಿರುವಂತೆ ಕಾಣುತ್ತಿದೆ. ಈ ಅಚ್ಚರಿಯ ವಿಡಿಯೋ ನೋಡಿ ಹಲವರು ದಂಗಾಗಿದ್ದಾರೆ. ದುಬಾರಿ ಕಾರನ್ನು ಕೊಂಡುಕೊಳ್ಳುವುದಕ್ಕೇ ಕಷ್ಟ ಪಡುತ್ತಿದ್ದರೆ ಈತ ಈ ರೀತಿಯಾಗಿ ಕಾರನ್ನು ಧೂಳಲ್ಲಿ ಮುಳುಗಿಸಿ ಗದ್ದೆ ಉಳುಮೆ ಮಾಡುತ್ತಿದ್ದಾನೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:Narendra Modi: “ನಾನು ಇಸ್ಲಾಂ ವಿರೋಧಿ ಅಲ್ಲ, ಆದರೆ ಮುಸ್ಲಿಮರು…”; ಕಾಂಗ್ರೆಸ್‌ ಆರೋಪದ ಬಗ್ಗೆ ಮೋದಿ ಹೇಳಿದ್ದೇನು?

ಈ ಶಾಕಿಂಗ್‌ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ @TorqueIndia ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. ಕೇವಲ 32 ಸೆಕೆಂಡ್ ಗಳ ಈ ವೀಡಿಯೋವನ್ನು ಇದುವರೆಗೆ 2 ಲಕ್ಷ 83 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೂರಾರು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. Instagram ನಲ್ಲಿ ರಾಹುಲ್ ರಾವ್ (@rahul_raosaheb) ಅವರು ಹಂಚಿಕೊಂಡಿರುವ ಈ ವಿಡಿಯೋ ನೋಡಿದ ಜನರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದು, ಈತ ಅಂಬಾನಿಗಿಂತಲೂ ಶ್ರೀಮಂತ ಎಂದು ರಿಯಾಕ್ಟ್‌ ಮಾಡಿದ್ದಾರೆ.

Exit mobile version