ಬೆಂಗಳೂರು: ನಾಲಗೆ ಎಷ್ಟು ಉದ್ದ ಇರುತ್ತದೆ. ಹೆಚ್ಚೆಂದರೆ ಮೂಗಿನ ತುದಿಗೆ ತಾಕಿಸುವಷ್ಟು. ಆದರೆ ಅಮೆರಿಕದ ಈ ವ್ಯಕ್ತಿಯ ನಾಲಗೆ ಕೇವಲ ಮೂಗನ್ನಷ್ಟೇ ಅಲ್ಲ ಗಲ್ಲದ ತುದಿಯನ್ನೂ ಮುಟ್ಟುತ್ತದೆ. ವಿಶ್ವದಲ್ಲಿಯೇ ಅತ್ಯಂತ ಉದ್ದದ ನಾಲಗೆ ಹೊಂದಿರುವಾತ ಎನ್ನುವ ದಾಖಲೆ ಬರೆದಿದ್ದ ಅದೇ ವ್ಯಕ್ತಿ ಇದೀಗ ನಾಲಗೆ ಮೂಲಕವೇ ಮತ್ತೊಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾನೆ.
ಇದನ್ನೂ ಓದಿ: Viral News: ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ತಂದೆ; ತಮ್ಮ ಜೀಪ್‌ನಲ್ಲೇ ವಿದ್ಯಾರ್ಥಿನಿಯನ್ನು ಕೇಂದ್ರಕ್ಕೆ ಕರೆದೊಯ್ದ ಪೊಲೀಸ್
ನಿಕ್ ಸ್ಟೋಬರ್ಲ್ ಈ ರೀತಿ ದಾಖಲೆಗಳನ್ನು ಬರೆಯುತ್ತಿರುವ ವ್ಯಕ್ತಿ. ಜೆಂಗಾ ಬ್ಲಾಕ್ಸ್ ಆಟವನ್ನು ನೀವು ಆಡಿರಬಹುದು. ಒಂದರ ಮೇಲೆ ಒಂದರಂತೆ ಸಣ್ಣ ಸಣ್ಣ ಮರದ ತುಂಡುಗಳನ್ನು ಜೋಡಿಸಲಾಗಿರುತ್ತದೆ. ಅದರಲ್ಲಿ ಮೇಲಿನ ತುಂಡು ಬೀಳದಂತೆಯೇ ಕೆಳಗಿನ ತುಂಡನ್ನು ತಗೆಯುವ ಆಟವದು. ಅದನ್ನು ಕೈಗಳಲ್ಲಿ ಆಡುವುದು ಸಾಮಾನ್ಯ. ಆದರೆ ಈ ನಿಕ್ ಮಾತ್ರ ತನ್ನ ನಾಲಗೆಯ ಮೂಲಕವೇ ಈ ಆಟವನ್ನು ಆಡಿದ್ದಾರೆ. 55.526 ಸೆಕೆಂಡುಗಳಲ್ಲಿ ಐದು ಜೆಂಗಾ ಬ್ಲಾಕ್ ಅನ್ನು ಯಶಸ್ವಿಯಾಗಿ ಬೀಳಿಸಿದ್ದಾರೆ. ನಾಲಗೆಯ ಮೂಲಕವೇ ಐದು ಜೆಂಗಾ ಬ್ಲಾಕ್ ಅನ್ನು ಅತಿ ವೇಗದಲ್ಲಿ ಬೀಳಿಸಿರುವ ಸಲುವಾಗಿ ಗಿನ್ನಿಸ್ ವರ್ಲ್ ರೆಕಾರ್ಡ್ ದಾಖಲಾಗಿದೆ. ಅದರ ವಿಡಿಯೊ ಅನ್ನು ಕೂಡ ಗಿನ್ನಿಸ್ ರೆಕಾರ್ಡ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೊ ವೈರಲ್ ಆಗಿದೆ.
ಅಂದ ಹಾಗೆ ಸಾಮಾನ್ಯ ಮನುಷ್ಯನ ನಾಲಗೆ ಮೂರು ಇಂಚಿನಷ್ಟು ಉದ್ದವಿರುತ್ತದೆ. ಹೆಣ್ಣು ಮಕ್ಕಳಿಗೆ 3.11 ಇಂಚು ಹಾಗೂ ಗಂಡು ಮಕ್ಕಳಿಗೆ 3.34 ಇಂಚಿನ ನಾಲಗೆ ಇರುವುದು ಸಾಮಾನ್ಯ. ಆದರೆ ಈ ನಿಕ್ ಬಾಯಿಯಲ್ಲಿರುವುದು ನಾಲ್ಕು ಇಂಚಿನ ನಾಲಗೆ.
ಇದನ್ನೂ ಓದಿ: Viral Video: ಗಾಯಕ ಸ್ನೇಹದೀಪ್ರ ಕೇಸರಿಯಾ ಹಾಡಿಗೆ ಪ್ರಧಾನಿ ಮೋದಿ ಫಿದಾ; ವಿವಿಧತೆಯಲ್ಲಿ ಏಕತೆಯ ಪ್ರತಿಬಿಂಬ ಎಂದು ಟ್ವೀಟ್
ಜೆಂಗಾ ಬ್ಲಾಕ್ಸ್ ಮೂಲಕ ದಾಖಲೆ ಬರೆಯುವುದಕ್ಕೂ ಮೊದಲು ಅಮೆರಿಕದ ಟಾಕ್ ಶೋ ಒಂದರಲ್ಲಿ ಭಾಗವಹಿಸಿದ್ದ ನಿಕ್ ಅಲ್ಲಿ ನಾಲಗೆ ಮೂಲಕವೇ ಚಿತ್ರ ಬಿಡಿಸಿದ್ದರು. ನಾಲಗೆಗೆ ಪ್ಲಾಸ್ಟಿಕ್ ಸುತ್ತಿ, ಅದಕ್ಕೆ ಬಣ್ಣ ಹಚ್ಚಿಕೊಂಡು ಪೇಪರ್ ಮೇಲೆ ಚಿತ್ರಕಲೆ ಬರೆದ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿತ್ತು. ಈ ರೀತಿ ನಾಲಗೆಯಿಂದ ಚಿತ್ರ ಬಿಡಿಸುವುದಕ್ಕೆ ಭಾರತೀಯ ವ್ಯಕ್ತಿಯೊಬ್ಬರಿಂದ ಸ್ಫೂರ್ತಿ ಪಡೆದಿದ್ದಾಗಿ ತೈ ಅವರು ಹೇಳಿಕೊಂಡಿದ್ದರು.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತನ್ನ ಜೀವನವನ್ನು ಬದಲಾಯಿಸಿದೆ ಎಂದು ನಿಕ್ ಹೇಳಿಕೊಂಡಿದ್ದಾರೆ. ಈ ದಾಖಲೆಯಿಂದಾಗಿ ಪ್ರಪಂಚ ಸುತ್ತಲು ಸಾಧ್ಯವಾಗಿದೆ, ವೈವಿಧ್ಯಮಯ ಸಂಸ್ಕೃತಿಗಳನ್ನು ನೋಡಲು ಮತ್ತು ರುಚಿಕರವಾದ ತಿನಿಸುಗಳನ್ನು ತಿನ್ನಲು ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.