Site icon Vistara News

Viral Video: ಅಬ್ಬಾ..ಎಂಥಾ ಭೀಕರ ದೃಶ್ಯ! ನೋಡ ನೋಡ್ತಿದ್ದಂತೆ ಕುಸಿದು ಬಿದ್ದು ಬಾಲಕ ಸಾವು

Viral Video

ಮೀರತ್‌: ಸಾವು ಯಾರಿಗೆ ಹೇಗೆ ಬೇಕಾದರೂ ಬರಬಹುದು. ಅದನ್ನು ಊಹಿಸೋದಕ್ಕೂ ಸಾಧ್ಯವಿಲ್ಲ. ಅದರಲ್ಲೂ ಈಗೀಗ ಗಟ್ಟಿಮುಟ್ಟಾದ ಯುವಕರು ನೋಡ ನೋಡ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶ(Uttar Pradesh)ದ ಮೀರತ್‌ನಲ್ಲಿ ನಡೆದಿದೆ. 15 ವರ್ಷದ ಬಾಲಕನೋರ್ವ ಸ್ವಿಮ್ಮಿಂಗ್‌ ಪೂಲ್‌(Swimming pool) ಸಮೀಪ ಎಲ್ಲರೂ ನೋಡುತ್ತಿದ್ದಂತೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಶಾಕಿಂಗ್‌ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ

ಸಿವಾಲ್ಖಾಸ್‌ ಪ್ರದೇಶದ ನಿವಾಸಿಯಾಗಿರುವ 15 ವರ್ಷದ ಬಾಲಕ ಸಮೀರ್‌ ಬ್ಲೂ ಹೆವನ್‌ ಸ್ವಿಮ್ಮಿಂಗ್‌ಪೂಲ್‌ಗೆ ಈಜಾಡಲು ಬಂದಿದ್ದ. ನೀರಿನಿಂದ ಹೊರ ಬರುತ್ತಿದ್ದಂತೆ ಸಮೀರ್‌ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅದಾಗ್ಯೂ ಈ ಬಗ್ಗೆ ಬಾಲಕನ ಕುಟುಂಬಸ್ಥರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶುಕ್ರವಾರ ಮಧ್ಯಾಹ್ನ ಕ್ರಿಕೆಟ್‌ ಆಟ ಆಡಿದ ಬಳಿಕ ಸಮೀರ್‌ ಬ್ಲೂ ಹೆವೆನ್‌ ಸ್ವಿಮ್ಮಿಂಗ್‌ಪೂಲ್‌ಗೆ ಬಂದಿದ್ದ. ಈಜುಕೊಳದಲ್ಲಿ ಮುಳುಗಿ ಮೇಲೆದ್ದು ಬರುತ್ತಾನೆ. ನಾಲ್ಕು ಹೆಜ್ಜೆ ನಡೆಯುವಾಗಲೇ ಆತ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಉಳಿದವರು ಏನೂ ಅರಿದಂತೆ ಎಂಜಾಯ್‌ ಮಾಡುತ್ತಿರುತ್ತಾರೆ. ಕೆಲವರು ಬಾಲಕ ಕುಸಿದು ಬೀಳುತ್ತಿದ್ದಂತೆ ಓಡಿ ಬಂದು ಏನಾಯ್ತು ಎಂದು ನೋಡುತ್ತಾರೆ. ಅಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ.

ಇಂತಹದ್ದೇ ಒಂದು ಘಟನೆ ತುಮಕೂರಿನಲ್ಲೂ ಕೆಲವು ದಿನಗಳ ಹಿಂದೆ ನಡೆದಿತ್ತು. 9ನೇ ತರಗತಿ ವಿದ್ಯಾರ್ಥಿಯೊಬ್ಬ ಆಟ ಆಡುತ್ತಿರುವಾಗ‌ಲೇ ದಿಢೀರ್ ಕುಸಿದುಬಿದ್ದು ಸಾವಿಗೀಡಾದ ಆತಂಕಕಾರಿ ದುರ್ಘಟನೆ (Student Death) ನಡೆದಿತ್ತು. ತುಮಕೂರು‌ ತಾಲೂಕು‌ ಸಿರಿವಾರ‌ದಲ್ಲಿ ಘಟನೆ ನಡೆದಿದ್ದು, ಧನು (14) ಎಂಬ ವಿದ್ಯಾರ್ಥಿ ಮೃತ ದುರ್ದೈವಿ.

ಸಿರಿವಾರದ ಸರ್ಕಾರಿ ಪ್ರೌಢಾಶಾಲಾ ಆವರಣದಲ್ಲಿ ಆಟವಾಡುತ್ತಿದ್ದಾಗ ಬಾಲಕ ಕುಸಿದು ಬಿದ್ದಿದ್ದ. ಗೆಳೆಯರ ಜೊತೆಗೆ ವಾಲಿಬಾಲ್ ಆಡುವ ವೇಳೆ ಈತ ಕುಸಿದು ಬಿದ್ದಿದ್ದು, ಗೆಳೆಯರು ಬಳಿ ಬಂದು ನೋಡಿದಾಗ ಉಸಿರಾಟ ನಿಂತಿತ್ತು. ನಂತರ ಅಧ್ಯಾಪಕರು ಈತನ ಪೋಷಕರಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಜೀವ ಹೋಗಿತ್ತು.

ಇದನ್ನೂ ಓದಿ: Viral Video: ಕಾರು ತಡೆದ ಟ್ರಾಫಿಕ್‌ ಪೊಲೀಸ್‌ ಕ್ಯಾಬ್‌ ಡ್ರೈವರ್‌ ಮಾಡಿದ್ದೇನು ಗೊತ್ತಾ?

Exit mobile version