Site icon Vistara News

Viral Video: ಸೆಲ್ಫಿ ವಿಡಿಯೋ ಮಾಡ್ತಿದ್ದ ಹುಡುಗಿಯ ಸ್ಕರ್ಟ್‌ ಎತ್ತಿ ನೋಡಿದ ಪೋಲಿ ಕಪಿ !

Viral Video

ಕೋತಿಗಳೆಂದರೆ ಮೊದಲು ಮನಸಿಗೆ ಬರುವುದು ಚೇಷ್ಟೆ. ಮಾನವ ಕುಲಕ್ಕೆ ಅತ್ಯಂತ ಹತ್ತಿರ ಎನ್ನಿಸುವ ಪ್ರಾಣಿಗಳಿವು. ಕೋತಿಗಳ ತುಂಟಾಟ, ಚೇಷ್ಟೆಯನ್ನು ತೋರಿಸುವ ಹತ್ತು-ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತವೆ. ಅದರ ಸಾಲಿಗೆ ಇಲ್ಲೊಂದು ವಿಡಿಯೋ ಸೇರ್ಪಡೆಯಾಗಿದೆ. ಅದನ್ನು ನೋಡಿದ ನೆಟ್ಟಿಗರಂತೂ ಕೋತಿಯನ್ನು ತುಂಟ ಕಪಿ ಎಂದೇ ಕರೆದಿದ್ದಾರೆ. ಕೋತಿಯಿಂದ ಮುಜುಗರಕ್ಕೀಡಾದ ಯುವತಿಯ ಕಾಲೆಳೆದವರೂ ಇದ್ದಾರೆ. naturre ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್‌ ಆಗಿರುವ ಈ ವಿಡಿಯೋವನ್ನು (Viral Video) ಇಲ್ಲಿಯವರೆಗೆ 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್‌ ಕೊಟ್ಟಿದ್ದಾರೆ.

ಯುವತಿಯೊಬ್ಬಳು ಪಾರ್ಕ್‌ವೊಂದರಲ್ಲಿ ಕುಳಿತು ಸೆಲ್ಫಿ ವಿಡಿಯೋ ಮಾಡುತ್ತಿದ್ದಾಳೆ. ಅಲ್ಲಿ ಮೂರ್ನಾಲ್ಕು ಕೋತಿಗಳು ಇವೆ. ಮೊದಲು ಒಂದು ಕೋತಿ ಯುವತಿಯ ಬಳಿ ಬಂದು ಸೆಲ್ಫಿ ಕ್ಯಾಮರಾವನ್ನ ನೋಡುತ್ತದೆ. ಬಳಿಕ ಆ ಯುವತಿ ಹಾಕಿದ್ದ ಸರಕ್ಕಿದ್ದ ಪೆಂಡಾಲ್‌ನ್ನು ಮುಟ್ಟಿ ನೋಡಿಕೊಂಡು ಹೋಗುತ್ತದೆ. ಅದು ಅತ್ತ ಹೋಗುತ್ತಿದ್ದಂತೆ ಮತ್ತೊಂದು ಕೋತಿ ಯುವತಿಯ ಪಕ್ಕ ನಿಧಾನ್ಕೆ ಬಂದು ಕುಳಿತುಕೊಳ್ಳುತ್ತದೆ. ಈ ಕೋತಿ ಒಂದೆರಡು ಸೆಕೆಂಡ್‌ ಅತ್ತಿತ್ತ ನೋಡಿ ಹುಡುಗಿಯ ಸ್ಕರ್ಟ್‌ ಎತ್ತಿ ಅದರಡಿಯಲ್ಲಿ ಏನಿದೆ ಎಂದು ಕುತೂಹಲದಿಂದ ನೋಡುತ್ತದೆ. ಆ ಮಂಗ ಯುವತಿಯ ಸ್ಕರ್ಟ್‌ನ್ನು ಪೂರ್ತಿಯಾಗಿ ಎತ್ತಿ ಅದರಲ್ಲಿ ತನ್ನ ತಲೆ ತೂರಿಸಿ ನೋಡುತ್ತಿದ್ದಂತೆ ಆಕೆ ತನ್ನ ಕೈಯಿಂದ ಸ್ಕರ್ಟ್‌ನ್ನು ಎಳೆದುಕೊಂಡು ದೊಡ್ಡಾಗಿ ನಕ್ಕಿದ್ದಾಳೆ. ಕೋತಿ ದೂರ ಓಡಿ ಹೋಗಿದೆ. ಅಲ್ಲಿಗೆ ವಿಡಿಯೋವೂ ಕಟ್‌ ಆಗಿದೆ.

ಇದನ್ನೂ ಓದಿ: ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿರೂಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌

Exit mobile version