Site icon Vistara News

Viral Video| ಈ ಹುಂಜ ಒಂದೇ ಸಮ ಕೂಗಿದ್ದೇಕೆ, ಉರುಳಿ ಬಿದ್ದಿದ್ದೇಕೆ?; ಕೋಳಿ ಕತೆಯಲ್ಲಿ ನೀತಿ ಹುಡುಕಿ

Rooster tale

ಉದ್ಯಮಿ ಆನಂದ್‌ ಮಹೀಂದ್ರಾ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. ತುಂಬ ಇಂಟರೆಸ್ಟಿಂಗ್‌, ಮನರಂಜನೆ ಜತೆಗೆ ಜೀವನ ಪಾಠ ಸಾರುವ ವಿಡಿಯೋ, ಫೋಟೋ, ವಿಷಯಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಹಾಸ್ಯ ಪ್ರವೃತ್ತಿಯವರಾದ ಆನಂದ್‌ ಮಹೀಂದ್ರಾ ತಮ್ಮ ಫಾಲೋವರ್ಸ್‌ಗೆ ಸದಾ ಒಂದಿಲ್ಲೊಂದು ಅದ್ಭುತ ಎನ್ನಿಸುವ ವಿಷಯಗಳನ್ನು ಫನ್ನಿಯಾದ ಕ್ಯಾಪ್ಷನ್‌ಗಳ ಮೂಲಕವೇ ತಿಳಿಸುತ್ತಿರುತ್ತಾರೆ. ಹಾಗೇ, ಈಗೊಂದು ಹುಂಜ ಕೂಗಿದ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಅದೆಷ್ಟು ವಿಚಿತ್ರವಾಗಿದೆ ಎಂದರೆ, ವಿಡಿಯೋ ನೋಡಿದ ಜನರು, ನಮಗೆ ನಕ್ಕು ನಕ್ಕು ಸುಸ್ತಾಯಿತು ಎಂದು ಕಮೆಂಟ್‌ ಬರೆದಿದ್ದಾರೆ.

ಹುಂಜವೊಂದು ಕೂಗಲು ಬಾಯಿ ತೆರೆದಿದೆ. ಅದು ಹೇಗೆ ಕೂಗಿದೆಯೆಂದರೆ, ಒಂದೇ ಸ್ವರದಲ್ಲಿ ಸುಮಾರು 20 ಸೆಕೆಂಡ್‌ಗಳ ಕಾಲ ಅರಚಿದೆ. ಅದರ ಧ್ವನಿಯಲ್ಲಿ ಚೂರೂ ಏರಿಳಿತವಾಗಿಲ್ಲ. ಹೀಗೇ ಕೂಗುತ್ತಲೇ ಕತ್ತನ್ನು ಹಿಂದಕ್ಕೆ ಬಾಗಿಸಿದೆ. ಬಳಿಕ ಅದರ ಪೂರ್ತಿ ದೇಹವೇ ಹಿಂದಕ್ಕೆ ವಾಲುತ್ತ ಹೋಗಿ, ಸುಸ್ತಾಗಿ ಉರುಳಿ ಬಿದ್ದಿದೆ. ಬಹುಶಃ ಹುಂಜ ಈ ಪರಿ ಕೂಗುವುದನ್ನು ನೀವೂ ನೋಡಿರಲಿಕ್ಕಿಲ್ಲ. ವಿಡಿಯೋ ಹಂಚಿಕೊಂಡು ಕ್ಯಾಪ್ಷನ್‌ ಬರೆದಿರುವ ಆನಂದ್‌ ಮಹೀಂದ್ರಾ, ʼಕೋಳಿ ಕೂಗಿ ಕೂಗಿ ಬಿದ್ದೇ ಹೋಯಿತು. ಈ ಕತೆಯ ನೀತಿಯೇನು ಎಂಬುದನ್ನು ಪತ್ತೆ ಹಚ್ಚಲು ನಾನು ಪ್ರಯತ್ನಿಸಿದೆ. ಆದರೆ ಅದನ್ನು ನಿಮ್ಮೆಲ್ಲರ ಎದುರು ಇಟ್ಟು, ಈ ಕತೆಯಿಂದ ಯಾವ ಪಾಠ ಕಲಿಯಬಹುದು ಎಂದು ಕೇಳುವುದೇ ಉತ್ತಮ ಅನ್ನಿಸಿತು. ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿʼ ಎಂದು ಹೇಳಿದ್ದಾರೆ.

ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದೆ. ಒಬ್ಬೊಬ್ಬರೂ ಒಂದೊಂದು ವಿಧದ ಕಮೆಂಟ್‌ ಮಾಡಿದ್ದಾರೆ. ಹೆಚ್ಚಿನವರು ಈ ವಿಡಿಯೋದಲ್ಲಿ ಯಾವುದೇ ನೀತಿ ಪಾಠವನ್ನೂ ಹುಡುಕಿಲ್ಲ. ಬದಲಿಗೆ ಹುಂಜ ಕೂಗಿದ ರೀತಿಯನ್ನು ಎಂಜಾಯ್‌ ಮಾಡಿ, ಹಾಸ್ಯ ಮಾಡಿದ್ದಾರೆ. ಕೆಲವೇ ಜನ ಮಾತ್ರ ಅದರಲ್ಲೊಂದು ಮೌಲ್ಯ ಹುಡುಕಿದ್ದಾರೆ. ʼನೀವು ಯಾವುದೇ ಕೆಲಸವನ್ನು ಅತಿಯಾಗಿ ಮಾಡಲು ಹೋದರೆ ಅದರಲ್ಲಿ ವಿಫಲಗೊಳ್ಳುತ್ತೀರಿ ಎಂದು ಈ ಹುಂಜ ತೋರಿಸಿದೆʼ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು, ʼಒಂದೇ ದಿನದಲ್ಲಿ ಎಲ್ಲವೂ ಆಗಿಬಿಡಬೇಕು ಎಂದರೆ ಹೀಗೇ ಆಗುತ್ತದೆ. ಅದರ ಬದಲು ಹಂತಹಂತವಾಗಿ ಕಲಿಯಬೇಕು-ಕೆಲಸ ಮಾಡಬೇಕು. ಕೌಶಲ ವೃದ್ಧಿಸಿಕೊಳ್ಳುವ ಮೂಲಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬಾತ, ʼಇದೇನು ಸರ್‌ ನಿಮ್ಮ ಕಂಪನಿಯಿಂದ ಬಿಡುಗಡೆಯಾಗುತ್ತಿರುವ ಹೊಸ ಕಾರು ಇದ್ದಂತಿದೆʼ ಎಂದು ಫನ್ನಿ ಕಮೆಂಟ್‌ ಬರೆದಿದ್ದಾರೆ.

ಇದನ್ನೂ ಓದಿ: Viral Video: ಭಯ ಹುಟ್ಟಿಸುವ ಮದುವೆ; ಹೂವಲ್ಲ, ಹಾವಿನ ಹಾರ ಹಾಕಿಕೊಂಡ ವಧು-ವರ

Exit mobile version