ನವದೆಹಲಿ: ಲೋಕಸಭಾ ಸಂಸತ್ತು ಎಂದಾಕ್ಷಣ ಒಂದು ಗಂಭೀರ ಸಭೆಯ ಚಿತ್ರಣ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಅಲ್ಲೂ ಕೂಡ ಕೆಲವು ಹಾಸ್ಯಮಯ ವ್ಯಕ್ತಿಗಳಿರುತ್ತಾರೆ. ಅವರಿಂದ ಆಗಾಗ ನಗೆ ಚಟಾಕಿಗಳೂ ಕೇಳಿ ಬರುತ್ತಿರುತ್ತವೆ. ಅಂಥದ್ದೊಂದು ಹಾಸ್ಯಮಯ ಸನ್ನಿವೇಶ ಇತ್ತೀಚೆಗೆ ಕೇಂದ್ರ ಸಚಿವ ರಾಮ್‌ದಾಸ್ ಅಠವಳೆ ಅವರಿಂದ ಉಂಟಾಗಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಕೂಡ ಆಗಿದೆ.
ಇದನ್ನೂ ಓದಿ: Viral Video : ʼಇವರೇ ನೋಡಿ ಫಾದರ್ ಆಫ್ ದಿ ಇಯರ್ʼ ಎನ್ನುತ್ತಿದ್ದಾರೆ ನೆಟ್ಟಿಗರು; ವೈರಲ್ ಆಗಿದೆ ವಿಡಿಯೊ
ಮೇಲ್ಮನೆಯಲ್ಲಿ ರಾಷ್ಟ್ರಪತಿಗಳ ಭಾಷಣವಾದ ನಂತರ ರಾಮ್‌ದಾಸ್ ಅವರು ಮಾತನಾಡುತ್ತಿದ್ದರು. ಆ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಒಂದು ಕವನವನ್ನೂ ವಾಚಿಸಿದ್ದಾರೆ. “ಮೋದಿ ಜಿ ಆದ್ಮಿ ಹೈ ಖಾಸ್, ಇಸ್ಲಿಯೇ ಉನಕೆ ಸಾಥ್ ಹೈ ರಾಮದಾಸ್” (ಮೋದಿ ಜೀ ವಿಶೇಷ ವ್ಯಕ್ತಿ, ಹಾಗಾಗಿ ಅವರೊಂದಿಗಿದ್ದಾರೆ ರಾಮ್‌ದಾಸ್) ಎಂದು ಕವನ ಹೇಳಿದ್ದಾರೆ. ಈ ಕವನ ಕೇಳುತ್ತಿದ್ದಂತೆಯೇ ಸಂಸತ್ತಿನಲ್ಲಿದ್ದ ಸದಸ್ಯರು ಜೋರಾಗಿ ನಗಲಾರಂಭಿಸಿದ್ದಾರೆ.
ಅಷ್ಟಕ್ಕೇ ನಿಲ್ಲಿಸದ ರಾಮ್‌ದಾಸ್ ರಾಹುಲ್ ಗಾಂಧಿ ಅವರು ಉದ್ದ ಗಡ್ಡ ಬಿಟ್ಟಿರುವ ಬಗ್ಗೆಯೂ ಅವರ ಕಾಲೆಳೆದಿದ್ದಾರೆ. ಕಾಂಗ್ರೆಸ್ ಕಾಲೆಳೆದು, ಮೋದಿಯನ್ನು ಹೊಗಳಿರುವ ರಾಮ್‌ದಾಸ್ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ ಆಗಿದೆ. “ಈ ರೀತಿಯ ಸದಸ್ಯರು, ಸಚಿವರು ಸಂಸತ್ತಿನಲ್ಲಿರಬೇಕು” ಎಂದು ಜನರು ನಗುತ್ತಾ ಚರ್ಚೆ ಮಾಡಿಕೊಳ್ಳಲಾರಂಭಿಸಿದ್ದಾರೆ.