Site icon Vistara News

Viral Video : ಮಾರುದ್ದದ ವಿಷಕಾರಿ ಹಾವನ್ನು ಕೈನಲ್ಲಿ ಹಿಡಿದು ವಿಡಿಯೊ ಮಾಡಿದ ವ್ಯಕ್ತಿ; ಇಲ್ಲಿದೆ ನೋಡಿ ವೈರಲ್‌ ವಿಡಿಯೊ

#image_title

ಬೆಂಗಳೂರು: ಹಾವೆಂದರೆ ಭಯದಿಂದ ಓಡುವವರು ಅನೇಕರು ಇರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಹಾವೆಂದರೆ ಭಯವೇ ಇಲ್ಲ. ಮಾರುದ್ದ ಇರುವ ವಿಷಕಾರಿ ಹಾವನ್ನು ಕೈನಲ್ಲಿ ಹಿಡಿದುಕೊಂಡೇ ವಿಡಿಯೊ ಕೂಡ ಮಾಡಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Cobras Trapped: ಮನೆಯೊಂದರಲ್ಲಿ ಕಂಡು ಬಂತು ಮೂರು ನಾಗರ ಹಾವು; ರಕ್ಷಿಸಿ ಕಾಡಿನೊಳಗೆ ಬಿಟ್ಟ ಉರಗ ರಕ್ಷಕ

ಸರೀಸೃಪಗಳ ಮೃಗಾಲಯ ನಡೆಸುತ್ತಿರುವ ಜೇ ಬ್ರೀವರ್‌ ವಿಡಿಯೊ ಮಾಡಿರುವ ವ್ಯಕ್ತಿ. ರ್ಯಾಟ್‌ ಸ್ನೇಕ್‌ ಎಂದು ಕರೆಯಲ್ಪಡುವ ವಿಷಕಾರಿ ಹಾವನ್ನು ಅವರು ಕೈನಲ್ಲಿ ಹಿಡಿದುಕೊಂಡು ವಿಡಿಯೊ ಮಾಡಿದ್ದಾರೆ. ಆ ಹಾವು 9 ಅಡಿಗಳಷ್ಟು ಉದ್ದ ಇರುವುದಾಗಿಯೂ ಅವರು ತಿಳಿಸಿದ್ದಾರೆ.

ವಿಡಿಯೊವನ್ನು ಜೇ ಬ್ರೀವರ್‌ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಈ ರೀತಿಯ ಹಾವನ್ನು ನಾನೂ ಕೂಡ ಈ ಹಿಂದೆ ನೋಡಿರಲಿಲ್ಲ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಹಾವುಗಳಲ್ಲಿ ಒಂದು. ಇದನ್ನು ಕೀಲಡ್‌ ರ್ಯಾಟ್‌ ಸ್ನೇಕ್‌ ಎಂದು ಕರೆಯಲಾಗುತ್ತದೆ. ಈ ಹಾವು ವಿಷ ಹೊರಹಾಕುವುದಕ್ಕೆ ನಿಮ್ಮನ್ನು ಕಚ್ಚುತ್ತದೆ. ಒಂದು ಖುಷಿಯ ವಿಚಾರವೇನೆಂದರೆ ಇವುಗಳಲ್ಲಿ ವಿಷದ ಪ್ರಮಾಣ ಕಡಿಮೆಯಿರುತ್ತದೆ. ಈ ಹಾವು ಮರದ ಮೇಲಾಗಲಿ, ನೀರಿನ ಮೇಲಾಗಲಿ ತುಂಬ ವೇಗವಾಗಿ ಚಲಿಸುತ್ತದೆ” ಎಂದು ಅವರು ವಿಡಿಯೊದೊಂದಿಗೆ ಬರೆದುಕೊಂಡಿದ್ದಾರೆ.


ಜೇ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದೆ. ಲಕ್ಷಾಂತರ ಮಂದಿ ವಿಡಿಯೊ ನೋಡಿದ್ದು, ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. “ಅಬ್ಬಾ, ನೋಡುವುದಕ್ಕೇ ಭಯವಾಗುತ್ತಿದೆ” ಎಂದು ಅನೇಕರು ಕಾಮೆಂಟ್‌ಗಳಲ್ಲಿ ತಿಳಿಸಿದ್ದಾರೆ.

Exit mobile version