ಬೆಂಗಳೂರು: ಪ್ರಾಣಿಗಳು ಬೇಟೆಯಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುತ್ತವೆ. ಅದೇ ರೀತಿ ಇದೀಗ ಹುಲಿಯೊಂದು ಬೇಟೆಯಾಡಿದ್ದ ಆಹಾರವನ್ನು ಹೆಣ್ಣು ಹುಲಿ ಕದಿಯಲು ಯತ್ನಿಸಿದ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ (Viral Video) ಆಗಿದೆ.
ಹುಲಿಯೊಂದು ದೊಡ್ಡದೊಂದು ಜಿಂಕೆಯನ್ನು ಬೇಟೆಯಾಡಿ ರಸ್ತೆ ಮೇಲೆ ಇಟ್ಟುಕೊಂಡಿರುತ್ತದೆ. ಅದು ಸ್ವಲ್ಪ ಕಣ್ಮರೆಯಾದ ತಕ್ಷಣ ಹೆಣ್ಣು ಹುಲಿಯೊಂದು ಆ ಜಿಂಕೆಯತ್ತ ಬರುತ್ತದೆ. ನಿಧಾನವಾಗಿ ಜಿಂಕೆಯನ್ನು ಎಳೆದುಕೊಂಡು ಹೋಗುವುದಕ್ಕೆ ಯತ್ನಿಸುತ್ತದೆ. ಅಷ್ಟರಲ್ಲಿ ಹುಲಿ ತನ್ನ ಬೇಟೆಯಿದ್ದ ಸ್ಥಳಕ್ಕೆ ವಾಪಸು ಬರುತ್ತದೆ. ಬೇಟೆಯನ್ನು ಎಳೆದುಕೊಂಡು ಹೋಗುತ್ತಿದ್ದ ಹೆಣ್ಣು ಹುಲಿ ಜತೆ ಜೋರಾಗಿ ಕುಸ್ತಿಗೆ ಬೀಳುತ್ತದೆ.
ಇದನ್ನೂ ಓದಿ: Karnataka Election Results 2023 : ಕಾಂಗ್ರೆಸ್ ಸೇರಿದ ಸವದಿ ಗೆದ್ದರು, ಶೆಟ್ಟರ್ ಸೋತರು
ಹುಲಿ ಮತ್ತು ಹೆಣ್ಣು ಹುಲಿ ಕೆಲ ಸೆಕೆಂಡುಗಳ ಕಾಲ ಕುಸ್ತಿಯಾಡುತ್ತವೆ. ಕೊನೆಗೆ ಎರಡೂ ಸುಸ್ತಾಗಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತವೆ. ಮತ್ತೆ ತನ್ನ ಬೇಟೆಯತ್ತ ಸಾಗುವ ಹುಲಿ ಅದನ್ನು ಎಳೆದುಕೊಂಡು ಹೋಗುತ್ತದೆ. ಇತ್ತ ಹೆಣ್ಣು ಹುಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಸುಮ್ಮನೆ ಕುಳಿತುಕೊಂಡು ನೋಡುತ್ತಿರುತ್ತದೆ.
ಈ ದೃಶ್ಯವಿರುವ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಲೇಟೆಸ್ಟ್ ಸೈಟಿಂಗ್ ಹೆಸರಿನ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೇ 10ರಂದು ಹಂಚಿಕೊಳ್ಳಲಾದ ಈ ವಿಡಿಯೊ ಈಗಾಗಲೇ ಐದು ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೊ ರಂಥಂಬೋರ್ ರಾಷ್ಟ್ರೀಯ ಉದ್ಯಾನವನದ್ದು. ಹಾಗೆಯೇ ಈ ವಿಡಿಯೊ ಮಾಡಿರುವವರ ಹೆಸರು ವಿಜಯ್ ಕುಮಾವತ್ ಎಂದು ವಿಡಿಯೊದಲ್ಲಿ ತಿಳಿಸಲಾಗಿದೆ. ಅನೇಕರು ಈ ವಿಡಿಯೊಗೆ ಹಲವಾರು ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.