Viral Video : ಹುಲಿ ಬೇಟೆಯನ್ನು ಕದಿಯಲು ನೋಡಿದ ಹೆಣ್ಣು ಹುಲಿ! ಮುಂದೇನಾಯ್ತು? Vistara News
Connect with us

ವೈರಲ್ ನ್ಯೂಸ್

Viral Video : ಹುಲಿ ಬೇಟೆಯನ್ನು ಕದಿಯಲು ನೋಡಿದ ಹೆಣ್ಣು ಹುಲಿ! ಮುಂದೇನಾಯ್ತು?

ಸಿಂಹ ಬೇಟೆಯಾಡಿದ್ದ ಜಿಂಕೆಯನ್ನು ಸಿಂಹಿಣಿ ಕದ್ದೊಯ್ಯಲು ಯತ್ನಿಸಿ ಕೊನೆಗೆ ಎರಡೂ ಜಗಳವಾಡುವ ವಿಡಿಯೊವೊಂದು ಯೂಟ್ಯೂಬ್‌ನಲ್ಲಿ ವೈರಲ್‌ (Viral Video) ಆಗಿದೆ.

VISTARANEWS.COM


on

Koo

ಬೆಂಗಳೂರು: ಪ್ರಾಣಿಗಳು ಬೇಟೆಯಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುತ್ತವೆ. ಅದೇ ರೀತಿ ಇದೀಗ ಹುಲಿಯೊಂದು ಬೇಟೆಯಾಡಿದ್ದ ಆಹಾರವನ್ನು ಹೆಣ್ಣು ಹುಲಿ ಕದಿಯಲು ಯತ್ನಿಸಿದ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ (Viral Video) ಆಗಿದೆ.

ಹುಲಿಯೊಂದು ದೊಡ್ಡದೊಂದು ಜಿಂಕೆಯನ್ನು ಬೇಟೆಯಾಡಿ ರಸ್ತೆ ಮೇಲೆ ಇಟ್ಟುಕೊಂಡಿರುತ್ತದೆ. ಅದು ಸ್ವಲ್ಪ ಕಣ್ಮರೆಯಾದ ತಕ್ಷಣ ಹೆಣ್ಣು ಹುಲಿಯೊಂದು ಆ ಜಿಂಕೆಯತ್ತ ಬರುತ್ತದೆ. ನಿಧಾನವಾಗಿ ಜಿಂಕೆಯನ್ನು ಎಳೆದುಕೊಂಡು ಹೋಗುವುದಕ್ಕೆ ಯತ್ನಿಸುತ್ತದೆ. ಅಷ್ಟರಲ್ಲಿ ಹುಲಿ ತನ್ನ ಬೇಟೆಯಿದ್ದ ಸ್ಥಳಕ್ಕೆ ವಾಪಸು ಬರುತ್ತದೆ. ಬೇಟೆಯನ್ನು ಎಳೆದುಕೊಂಡು ಹೋಗುತ್ತಿದ್ದ ಹೆಣ್ಣು ಹುಲಿ ಜತೆ ಜೋರಾಗಿ ಕುಸ್ತಿಗೆ ಬೀಳುತ್ತದೆ.

ಇದನ್ನೂ ಓದಿ: Karnataka Election Results 2023 : ಕಾಂಗ್ರೆಸ್‌ ಸೇರಿದ ಸವದಿ ಗೆದ್ದರು, ಶೆಟ್ಟರ್‌ ಸೋತರು
ಹುಲಿ ಮತ್ತು ಹೆಣ್ಣು ಹುಲಿ ಕೆಲ ಸೆಕೆಂಡುಗಳ ಕಾಲ ಕುಸ್ತಿಯಾಡುತ್ತವೆ. ಕೊನೆಗೆ ಎರಡೂ ಸುಸ್ತಾಗಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತವೆ. ಮತ್ತೆ ತನ್ನ ಬೇಟೆಯತ್ತ ಸಾಗುವ ಹುಲಿ ಅದನ್ನು ಎಳೆದುಕೊಂಡು ಹೋಗುತ್ತದೆ. ಇತ್ತ ಹೆಣ್ಣು ಹುಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಸುಮ್ಮನೆ ಕುಳಿತುಕೊಂಡು ನೋಡುತ್ತಿರುತ್ತದೆ.


ಈ ದೃಶ್ಯವಿರುವ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಲೇಟೆಸ್ಟ್‌ ಸೈಟಿಂಗ್‌ ಹೆಸರಿನ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೇ 10ರಂದು ಹಂಚಿಕೊಳ್ಳಲಾದ ಈ ವಿಡಿಯೊ ಈಗಾಗಲೇ ಐದು ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೊ ರಂಥಂಬೋರ್‌ ರಾಷ್ಟ್ರೀಯ ಉದ್ಯಾನವನದ್ದು. ಹಾಗೆಯೇ ಈ ವಿಡಿಯೊ ಮಾಡಿರುವವರ ಹೆಸರು ವಿಜಯ್‌ ಕುಮಾವತ್‌ ಎಂದು ವಿಡಿಯೊದಲ್ಲಿ ತಿಳಿಸಲಾಗಿದೆ. ಅನೇಕರು ಈ ವಿಡಿಯೊಗೆ ಹಲವಾರು ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ವೈರಲ್ ನ್ಯೂಸ್

Viral Video: ಕ್ರೂರ ಮೊಸಳೆ-ಜಾಣ ಜಿಂಕೆ; ಒಂದೇ ಜಂಪ್​​ ನಲ್ಲಿ ಜೀವ ಉಳಿಯಿತು!

ಆನಂದ್ ಮಹೀಂದ್ರಾ ಅವರು ಸೋಮವಾರದ ಸ್ಫೂರ್ತಿ (Monday Motivation) ಎಂದು ಕ್ಯಾಪ್ಷನ್ ಬರೆದು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಹಾಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ. ನಾವು ಯಾವತ್ತೂ ಅಲರ್ಟ್​ ಆಗಿರಬೇಕು ಎಂದಿದ್ದಾರೆ.

VISTARANEWS.COM


on

Edited by

Deer Drinking Water
Koo

ಉದ್ಯಮಿ ಆನಂದ್ ಮಹೀಂದ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ಆ್ಯಕ್ಟಿವ್​. ವಿಶೇಷವಾದ, ಹೊಸತನ ತುಂಬಿರುವ ವಿಡಿಯೊ, ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ನೀವು ಒಮ್ಮೆ ಅವರ ಟ್ವಿಟರ್ ಅಕೌಂಟ್​ಗೆ ಭೇಟಿ ಕೊಟ್ಟರೆ ಅಂಥ ಹಲವು ವಿಡಿಯೊಗಳನ್ನು ನೋಡಬಹುದು.ಅಂದಹಾಗೇ ಆನಂದ್ ಮಹೀಂದ್ರಾ ಅವರು ಈಗ ಶೇರ್​ ಮಾಡಿಕೊಂಡಿದ್ದು ಒಂದು ಜಿಂಕೆ ಮತ್ತು ಮೊಸಳೆ ವಿಡಿಯೊವನ್ನು. ಆ ವಿಡಿಯೊ (Viral Video) ನೋಡಿದರೆ ಒಂದು ಕ್ಷಣ ಮೈ-ಮನಸ್ಸು ಜುಂ ಎನ್ನುತ್ತದೆ.

ವನ್ಯಜೀವಿಗಳ ಲೋಕವೇ ಹಾಗೆ, ಅಲ್ಲಿ ಬೇಟೆಯಾಡುವ ದೊಡ್ಡ ಪ್ರಾಣಿಗಳ ಚುರುಕುತನ, ಅದನ್ನು ತಪ್ಪಿಸಿಕೊಳ್ಳುವ ಚಿಕ್ಕಪುಟ್ಟ ಪ್ರಾಣಿಗಳ ಚಾಣಾಕ್ಷತನ ಪ್ರಕೃತಿ ಸಹಜ. ಪ್ರತಿನಿತ್ಯವೂ ಇಂಥದ್ದೆಲ್ಲ ನಡೆಯುತ್ತಿದ್ದರೂ, ಅಪರೂಪಕ್ಕೆ ಅದು ಮನುಷ್ಯರ ಕಣ್ಣಿಗೆ ಗೋಚರಿಸುತ್ತದೆ. ವನ್ಯಜೀವಿ ಫೋಟೋ ಗ್ರಾಫರ್​ಗಳ ಕ್ಯಾಮರಾದಲ್ಲಿ ಅಂಥ ದೃಶ್ಯಗಳು ಸೆರೆಯಾಗುತ್ತವೆ. ಇದೀಗ ಆನಂದ್​ ಮಹೀಂದ್ರಾ ಶೇರ್ ಮಾಡಿಕೊಂಡಿರುವ ವಿಡಿಯೊ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

ಇಲ್ಲಿ ಬೇಟೆಗೆ ಬರುವ ಮೊಸಳೆಯ ಕ್ರೌರ್ಯ, ಒಂದೇ ಕ್ಷಣದಲ್ಲಿ ಜಿಂಕೆಯನ್ನು ಹಿಡಿದು ಬಾಯಿಗೆ ಹಾಕಿಕೊಳ್ಳಲು ಅದಕ್ಕಿರುವ ತವಕ ಮತ್ತು ಅಷ್ಟೇ ಸೆಕೆಂಡ್​​ಗಳಲ್ಲಿ ಜಿಂಕೆ ಒಂದು ಜಂಪ್​ ಮಾಡಿ, ತಪ್ಪಿಸಿಕೊಳ್ಳುವ ದೃಶ್ಯವನ್ನು ನೋಡಬಹುದು. ಆ ಜಿಂಕೆ ನೀರು ಕುಡಿಯಲೆಂದು ಒಂದು ಕೊಳದ ಬಳಿ ಬಂದು ಇನ್ನೇನು ನೀರಿಗೆ ಬಾಯಿ ಹಾಕಿತ್ತು, ಅಷ್ಟರಲ್ಲಿ ಬೃಹದಾಕಾರದ ಮೊಸಳೆ ಜಿಂಕೆಯನ್ನು ಹಿಡಿದು ತಿನ್ನಲು, ದೊಡ್ಡದಾಗಿ ಬಾಯ್ತೆರೆದುಕೊಂಡು ನೀರಿಂದ ಹೊರಗೆ ಬಂದಿತ್ತು. ಆಹಾ..ಆ ಜಿಂಕೆಯ ಜಿಗಿತವನ್ನು ನೀವು ವಿಡಿಯೋದಲ್ಲೇ ನೋಡಬೇಕು..! ಕ್ರಿಕೆಟ್​ನಲ್ಲೆಲ್ಲ 1 ಬಾಲ್​ಗೆ 6 ರನ್​ ಬೇಕಿದ್ದಾಗ, ಲಾಸ್ಟ್​ ಬಾಲ್​​ನಲ್ಲಿ ಸಿಕ್ಸರ್​ ಹೊಡೆದು ಗೆಲ್ಲಿಸುತ್ತಾರಲ್ಲ, ಜಿಂಕೆಯ ಜಿಗಿತವೂ ಹಾಗೇ ಗೋಚರಿಸುತ್ತದೆ. ಎಷ್ಟಾದರೂ ಜೀವದ ವಿಷಯ ಇದು ನೋಡಿ..ಅತ್ಯಂತ ಚಾಣಾಕ್ಷತನದಿಂದ ಜಿಂಕೆ ತನ್ನನ್ನು ತಾನು ಉಳಿಸಿಕೊಂಡಿದೆ.

ಆನಂದ್ ಮಹೀಂದ್ರಾ ಅವರು ಸೋಮವಾರದ ಸ್ಫೂರ್ತಿ (Monday Motivation) ಎಂದು ಕ್ಯಾಪ್ಷನ್ ಬರೆದು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಹಾಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ. ನಾವು ಯಾವತ್ತೂ ಅಲರ್ಟ್​ ಆಗಿರಬೇಕು. ನಾವೆಲ್ಲಿದ್ದೇವೆ, ಏನಾಗುತ್ತಿದೆ ಎಂಬ ಬಗ್ಗೆ ಸದಾ ಗಮನ ಇಟ್ಟಿರಬೇಕು ಎಂದು ಹೇಳಿದ್ದಾರೆ. ಈಗಾಗಲೇ 3.56 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವ ವಿಡಿಯೊಕ್ಕೆ 10 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಕೊಟ್ಟಿದ್ದಾರೆ. ನೆಟ್ಟಿಗರು ಅಚ್ಚರಿ ಮತ್ತು ಜಿಂಕೆಯ ಜಾಣತನವನ್ನು ಹೊಗಳುತ್ತಿದ್ದಾರೆ.

Continue Reading

ಪ್ರಮುಖ ಸುದ್ದಿ

Fact Check: ಸ್ವೀಡನ್‌ನಲ್ಲಿ ‘ಸೆಕ್ಸ್ ಚಾಂಪಿಯನ್‌ಶಿಪ್’, ರತಿಕ್ರೀಡೆ ಟೂರ್ನಿ ಗೆಲ್ಲಲು ರೆಡಿಯಾಗಿದ್ರು 20 ಮಂದಿ!

Fact Check:ಸ್ವೀಡನ್‌ನಲ್ಲಿ ಈ ತಿಂಗಳು ಸೆಕ್ಸ್ ಚಾಂಪಿಯನ್‌ಶಿಪ್ ನಡೆಯಲಿದೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಇರಲಿಲ್ಲ.

VISTARANEWS.COM


on

Edited by

Sex Championship
Koo

ನವದೆಹಲಿ: ಸಾಮಾನ್ಯವಾಗಿ ಚಾಂಪಿಯನ್‌ಶಿಪ್ ಎಂದ ಕೂಡಲೇ ಕ್ರೀಡೆಗೆ ಸಂಬಂಧಿಸಿದ ಯಾವುದೇ ಪಂದ್ಯಾವಳಿ ಇರಬಹುದು ಎಂದು ಭಾವಿಸುತ್ತೇವೆ. ಸ್ವೀಡನ್‌ನಲ್ಲಿ (Sweden) ಆಯೋಜಿಸಲಾಗುತ್ತಿದೆ ಎನ್ನಲಾದ ಸೆಕ್ಸ್ ಚಾಂಪಿಯನ್‌ಶಿಪ್ (Sex Championship) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದ ಹಾಗೆ, ಇದು ಸಾಮಾನ್ಯ ಕ್ರೀಡೆ ಅಲ್ಲ, ‘ರತಿಕ್ರೀಡೆ’ಗೆ ಸಂಬಂಧಿಸಿದ ಚಾಂಪಿಯನ್‌ಶಿಪ್! ಹೌದು, ಸ್ವೀಡನ್‌ನಲ್ಲಿ ಜೂನ್ ತಿಂಗಳಲ್ಲಿ ಸೆಕ್ಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗುತ್ತಿದೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ(Fact Check).

ಟ್ವಿಟರ್‌ನಲ್ಲಿ ಮೊದಲು ಪ್ರಕಟವಾದ ಸುದ್ದಿಯ ವಿವರಗಳನ್ನು ಹಲವಾರು ಸುದ್ದಿವಾಹಿನಿಗಳು ಪ್ರಕಟಿಸಿದವು. ಈ ಸೆಕ್ಸ್ ಚಾಂಪಿಯನ್‌ಶಿಪ್ ಜೂನ್ 8 ರಂದು ಪ್ರಾರಂಭವಾಗುತ್ತದೆ ಮತ್ತು ಹಲವಾರು ವಾರಗಳವರೆಗೆ ಇರುತ್ತದೆ, ಭಾಗವಹಿಸುವವರು ಪ್ರತಿದಿನ ಆರು ಗಂಟೆಗಳ ಕಾಲ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಆದರೆ, ಈ ಸುದ್ದಿಯು ನಕಲಿ ಎಂದು ತಿಳಿದುಬಂದಿದೆ. ಸ್ವೀಡಿಷ್‌ನ ಗೋಟರ್ಬೋರ್ಗ್ಸ್-ಪೋಸ್ಟೆನ್ ಪ್ರಕಾರ, ಸೆಕ್ಸ್ ಚಾಂಪಿಯನ್‌ಶಿಪ್ ನಡೆಸುವ ಪ್ರಸ್ತಾಪಕ್ಕೆ ಅಲ್ಲಿ ಸರ್ಕಾರವು ಕಳೆದ ಏಪ್ರಿಲ್‌ನಲ್ಲಿ ಅನುಮತಿಯನ್ನು ನೀಡಿಲ್ಲ ಎನ್ನಲಾಗಿದೆ.

ಈಗಿರುವ ರದಿಗಳ ಪ್ರಕಾರ, ಸ್ವೀಡನ್‌ನಲ್ಲಿ ಫೆಡರೇಷನ್ ಆಫ್ ಸೆಕ್ಸ್ ಸಂಸ್ಥೆ ಇದೆ. ಅದರ ಮುಖ್ಸ್ಥ ಡ್ರಾಗನ್ ಬ್ರಾಸ್ಟಿಕ್ ಸೆಕ್ಸ್ ಚಾಂಪಿಯನ್‌ಶಿಪ್ ಆಯೋಜಿಸುವ ಬಗ್ಗೆ ನಿರ್ಧಾರ ಮಾಡಿದ್ದರು. ಆ ಮೂಲಕ ಮಾನವರ ಮೇಲೆ ಲೈಂಗಿಕತೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪ್ರಭಾವವನ್ನು ಎತ್ತಿ ತೋರಿಸುವುದಾಗಿತ್ತು. ಆದರೆ, ರಾಷ್ಟ್ರೀಯ ಕ್ರೀಡಾ ಒಕ್ಕೂಟದ ಸದಸ್ಯರಾಗಲು ಸೆಕ್ಸ್ ಫೆಡರೇಶನ್‌ನ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ಗೊಟರ್‌ಬೋರ್ಗ್ಸ್-ಪೋಸ್ಟನ್ ತನ್ನ ವರದಿಯಲ್ಲಿ ತಿಳಿಸಿತ್ತು. ಈ ವರ್ಷದ ಆರಂಭದಲ್ಲೇ ಬ್ರಾಸ್ಟಿಕ್ ಅವರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದರು.

ಸೆಕ್ಸ್ ಚಾಂಪಿಯನ್ ಶಿಪ್ ನಮ್ಮ ಅವಶ್ಯಕತೆಗಳನ್ನು ಪೂರೈಸುವುದಿಲ್ಲ ಮತ್ತು ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನಾವು ಇತರ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಕ್ರೀಡಾ ಒಕ್ಕೂಟದ ಮುಖ್ಯಸ್ಥ ಜಾರ್ನ್ ಎರಿಕ್ಸನ್ ಸ್ಥಳೀಯ ಸುದ್ದಿ ಔಟ್ಲೆಟ್ಗೆ ತಿಳಿಸಿದ್ದರು. ಫೆಡರೇಷನ್ ಆಫ್ ಸೆಕ್ಸ್‌ನ ಅಧ್ಯಕ್ಷ ಬ್ರಾಕ್ಟಿಕ್ ಅವರು ಸ್ವೀಡನ್‌ನಲ್ಲಿ ಸ್ಟ್ರಿಪ್ ಕ್ಲಬ್‌ಗಳನ್ನು ನಡೆಸುತ್ತಿದ್ದಾರೆ ಮತ್ತು ಲೈಂಗಿಕತೆಯನ್ನು ಕ್ರೀಡೆಯಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸುತ್ತಾರೆ.

ಇದನ್ನೂ ಓದಿ: Same Sex Marriage: ಸಲಿಂಗ ವಿವಾಹ ಕಾನೂನುಬದ್ಧಗೊಳಿಸಿದರೆ ಲೈಂಗಿಕ ರೋಗ ಉಲ್ಬಣ: ಆರ್‌ಎಸ್‌ಎಸ್‌ ಸಮೀಕ್ಷೆ ವರದಿ

ಚಟುವಟಿಕೆಗಳು ಅಥವಾ ‘ರತಿಕ್ರೀಡೆಗಳು’ 45 ನಿಮಿಷದಿಂದ 1 ಗಂಟೆಯ ಅವಧಿಯಾಗಿರುವ ಸಾಧ್ಯತೆಗಳಿರುತ್ತವೆ ಎಂಬ ಮಾಹಿತಿ ಇರುವ ಟ್ವೀಟ್‌ಗಳು ವೈರಲ್ ಆಗಿದ್ದವು. ಪ್ರತಿ ಭಾಗವಹಿಸುವವರು 5 ರಿಂದ 10 ಅಂಕಗಳನ್ನು ಗಳಿಸುವ ಮೂಲಕ 16 ವಿಭಾಗಗಳು ಇರುತ್ತವೆ ಎಂದು ತಿಳಿಸಲಾಗಿತ್ತು. ಮಜಾ ಅಂದರೆ, ಅಧಿಕೃತವಲ್ಲದೇ ಈ ಸುದ್ದಿಯನ್ನು ನಂಬಿ 20 ಜನರು ನೋಂದಣಿ ಕೂಡ ಮಾಡಿಸಿಕೊಂಡಿದ್ದರು.

Continue Reading

ದೇಶ

ಯೂನಿವರ್ಸಿಟಿಯಲ್ಲಿ ಸೆಕ್ಯೂರಿಟಿ ಗಾರ್ಡ್​​ಗಳು, ವಿದ್ಯಾರ್ಥಿಗಳ ಮಧ್ಯೆ ಬಡಿದಾಟ, ವಾಹನಗಳು ಧ್ವಂಸ; 33 ಜನರ ಬಂಧನ

ಕಾಲೇಜು ವಿದ್ಯಾರ್ಥಿಗಳು ಮತ್ತು ಖಾಸಗಿ ಏಜೆನ್ಸಿಗೆ ಸೇರಿದ ಭದ್ರತಾ ಸಿಬ್ಬಂದಿ ನಡುವಿನ ಸಂಘರ್ಷದ ಹಲವು ವಿಡಿಯೊಗಳು ವೈರಲ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಹರಿದಾಡುತ್ತಿವೆ.

VISTARANEWS.COM


on

Edited by

Fight Between Guards And Students In Noida 33 Detained
Koo

ನವ ದೆಹಲಿ: ಕಾಲೇಜುಗಳಲ್ಲಿ, ಯೂನಿವರ್ಸಿಟಿಗಳಲ್ಲಿ ಹೊಡೆದಾಟ-ಗಲಾಟೆ ನಡೆಯುತ್ತಿರುತ್ತದೆ. ಎಂಥಾ ಸಣ್ಣಸಣ್ಣ ಕಾರಣಗಳೆಲ್ಲ ದೊಡ್ಡದಾಗಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟುಬಿಡುತ್ತವೆ. ಹಾಗೇ, ಗ್ರೇಟರ್​ ನೊಯ್ಡಾದ ಗೌತಮ ಬುದ್ಧ ಯೂನಿವರ್ಸಿಟಿ (ಸರ್ಕಾರಿ)ಯಲ್ಲೂ ಒಂದಷ್ಟು ವಿದ್ಯಾರ್ಥಿಗಳು ಮತ್ತು ಅದೇ ಯೂನಿವರ್ಸಿಟಿಯ ಸೆಕ್ಯೂರಿಟಿ ಗಾರ್ಡ್​​ಗಳ ಮಧ್ಯೆ ಮಾರಾಮಾರಿ ಜಗಳ ನಡೆದು, ಸದ್ಯ ಪೊಲೀಸರು 33 ಜನರನ್ನು ವಶಕ್ಕೆ ಪಡೆದಿದ್ದಾರೆ.

‘ಭಾನುವಾರ ಬೆಳಗ್ಗೆ 10.30ರ ಹೊತ್ತಿಗೆ ಒಂದಷ್ಟು ವಿದ್ಯಾರ್ಥಿಗಳು ಯೂನಿವರ್ಸಿಟಿಯ ಕ್ಯಾಂಪಸ್​​ನಲ್ಲಿರುವ ಮುಂಶಿ ಪ್ರೇಮಚಂದ್​ ಹಾಸ್ಟೆಲ್​​​ ಮುಂಭಾಗ ನಿಂತು ಸಿಗರೇಟ್​ ಸೇದುತ್ತಿದ್ದರು. ಅಲ್ಲೆಲ್ಲ ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದೆಲ್ಲ ಕಟ್ಟುನಿಟ್ಟಾಗಿ ನಿಷಿದ್ಧ. ಅಂಥದ್ದರಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್​​ ಬಳಿ ಸ್ಮೋಕಿಂಗ್ ಮಾಡುತ್ತಿರುವದನ್ನು ನೋಡಿ ಅಲ್ಲಿನ ಸೆಕ್ಯೂರಿಟಿ ಗಾರ್ಡ್​ಗಳು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಇದೇ ಸಂಘರ್ಷಕ್ಕೆ ಕಾರಣವಾಯಿತು. ವಿದ್ಯಾರ್ಥಿಗಳು ಸೆಕ್ಯೂರಿಟಿ ಸಿಬ್ಬಂದಿಯನ್ನೇ ತರಾಟೆಗೆ ತೆಗೆದುಕೊಂಡರು. ಮಾತಿಗೆ ಮಾತು ಬೆಳೆದು ಮಾರಾಮಾರಿ ಹೊಡೆದಾಡಿಕೊಂಡಿದ್ದಾರೆ. ಸದ್ಯ 33ಜನರನ್ನು ವಶಕ್ಕೆ ಪಡೆದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: MS Dhoni : ಇನ್ನು ಮುಂದೆ ಧೋನಿಗೆ ಕಾಲು ನೋವು ಬರದು; ಮುಂಬಯಿ ವೈದ್ಯರು ಹೀಗೆ ಹೇಳಿದ್ದು ಯಾಕೆ?

ಕಾಲೇಜು ವಿದ್ಯಾರ್ಥಿಗಳು ಮತ್ತು ಖಾಸಗಿ ಏಜೆನ್ಸಿಗೆ ಸೇರಿದ ಭದ್ರತಾ ಸಿಬ್ಬಂದಿ ನಡುವಿನ ಸಂಘರ್ಷದ ಹಲವು ವಿಡಿಯೊಗಳು ವೈರಲ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಹರಿದಾಡುತ್ತಿವೆ. ಕೆಲವರು ಬಡಿಗೆಗಳನ್ನು ಹಿಡಿದುಕೊಂಡು ಬೈಕ್​, ಕಾರುಗಳಿಗೆ ಬಡಿದು ಹಾನಿಗೊಳಿಸುತ್ತಿರುವುದನ್ನೂ ವಿಡಿಯೊದಲ್ಲಿ ನೋಡಬಹುದು. ಹುಡುಗರ ಬಾಯಯಲ್ಲಿ ಬರಿ ಬೈಗುಳವೇ ಕೇಳುತ್ತಿದೆ.

Continue Reading

ವೈರಲ್ ನ್ಯೂಸ್

Video: ಯಾವ ಉದ್ಯೋಗಿಯೂ ಹೊರಗೆ ಹೋಗಬಾರದು; ಕಂಪನಿ ಬಾಗಿಲಿಗೆ ಸರಪಳಿ ಬೀಗ ಹಾಕಿದ ವಾಚ್​ಮ್ಯಾನ್

ಉದ್ಯೋಗಿಗಳು ಅನುಮತಿ ಇಲ್ಲದೆ ಹೊರಗೆ ಹೋಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾಗಿ ವಾಚ್​ಮ್ಯಾನ್​ ಹೇಳುವುದು ವಿಡಿಯೊದಲ್ಲಿ ಕೇಳಿಸುತ್ತದೆ.

VISTARANEWS.COM


on

Edited by

Company Locked Employees Inside Office Video viral
Koo

ಕಂಪನಿಗಳಲ್ಲಿ ಅವಧಿಗೂ ಮೀರಿ ಕೆಲಸ ಮಾಡಿಸಿಕೊಳ್ಳುವುದು ಸಾಮಾನ್ಯ. ಎಲ್ಲ ಕಂಪನಿಗಳಲ್ಲೂ ಅಲ್ಲವೆಂದರೂ ಸಾಮಾನ್ಯವಾಗಿ ಬಹುತೇಕ ಕಚೇರಿ/ಸಂಸ್ಥೆಗಳಲ್ಲಿ ಲಾಗಿನ್​ ಆಗುವ ಸಮಯ ಮಾತ್ರ ಸರಿಯಾಗಿರಬೇಕು ಎಂಬ ನಿಯಮ ಮಾಡಿರುತ್ತಾರೆ ಹೊರತು, ಉದ್ಯೋಗಿಗಳು ಲಾಗೌಟ್ ಆಗುವ ಅಂದರೆ ಕೆಲಸ ಮುಗಿಸಿ ಹೊರಡುವ ಸಮಯಕ್ಕೆ ಯಾವುದೇ ನಿಯಮ ಇರುವುದಿಲ್ಲ. ಅವಧಿಗೂ ಮುನ್ನ ಹೋಗುವಂತಿಲ್ಲ. ಸಮಯಕ್ಕೆ ಸರಿಯಾಗಿ ಎದ್ದು ಹೋಗಬಹುದು. ಅಗತ್ಯ ಬಿದ್ದರೆ, ಕೆಲಸದ ಅವಧಿ ಮುಗಿದ ಬಳಿಕವೂ ಕುಳಿತುಕೊಳ್ಳಬೇಕು..ಇದು ಸಾಮಾನ್ಯವಾಗಿ ಉದ್ಯೋಗಸ್ಥರ ಜೀವನ.

ಹೀಗೆಲ್ಲ ಇರುವಾಗ ಕಂಪನಿಯೊಂದರಲ್ಲಿ ವಾಚ್​​ಮ್ಯಾನ್​ವೊಬ್ಬರು ಬಾಗಿಲು ಮುಚ್ಚಿ, ಸರಪಳಿಯ ಬೀಗ ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ. ಉದ್ಯೋಗಿಗಳು ಅನುಮತಿ ಇಲ್ಲದೆ ಹೊರಗೆ ಹೋಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾಗಿ ಆತ ಹೇಳುವುದು ವಿಡಿಯೊದಲ್ಲಿ ಕೇಳಿಸುತ್ತದೆ. ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಹಾಗೇ, ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ.

ಎಡ್​ಟೆಕ್​ ಕಂಪನಿಯೊಂದರಲ್ಲಿ ಉದ್ಯಮಿಯಾಗಿರುವ ರವಿ ಹಂಡಾ ಎಂಬುವರು ಈ ವಿಡಿಯೊವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೀಗೆ ಬಾಗಿಲನ್ನು ಲಾಕ್​ ಮಾಡಿದ್ದು ಯಾವ ಕಂಪನಿಯಲ್ಲಿ ಎಂಬುದು ಗೊತ್ತಾಗಿಲ್ಲ. ಹೀಗ್ಯಾಕೆ ಬಾಗಿಲನ್ನು ಮುಚ್ಚುತ್ತೀದ್ದೀರಿ ಎಂದು ವಿಡಿಯೊ ಮಾಡುತ್ತಿರುವವರು, ವಾಚ್​​ಮ್ಯಾನ್​​ನನ್ನು ಪ್ರಶ್ನೆ ಮಾಡಿದ್ದಕ್ಕೆ ಆತ ‘ಈ ಕಂಪನಿಯ ಮ್ಯಾನೇಜರ್​ ಒಬ್ಬರು ಹೇಳಿದ್ದಕ್ಕೆ ಮಾಡುತ್ತಿದ್ದೇನೆ. ಇಲ್ಲಿನ ಯಾವ ಉದ್ಯೋಗಿಯೂ ನನ್ನ ಅನುಮತಿ ಪಡೆಯದೆಯೇ ಹೊರಗೆ ಹೋಗುವಂತಿಲ್ಲ. ಮನೆಗೂ ಹೋಗುವಂತಿಲ್ಲ. ಹೀಗಾಗಿ ಬಾಗಿಲನ್ನು ಲಾಕ್​ ಮಾಡು ಎಂದಿದ್ದಾರೆ’ ಎಂದು ವಾಚ್​ಮ್ಯಾನ್ ಹೇಳುತ್ತಾನೆ.

ವಿಡಿಯೊ ಸಿಕ್ಕಾಪಟೆ ವೈರಲ್ ಆಗುತ್ತಿದೆ. ವಿಡಿಯೊ ಶೇರ್ ಮಾಡಿಕೊಂಡಿರುವ ರವಿ ಹಂಡಾ ‘ಭಾರತದ ಎಡ್​​ಟೆಕ್​ ಕಂಪನಿಗಳನ್ನು ಹುಟ್ಟುಹಾಕಿದವರು ಈಗ ಅವರ ಉದ್ಯೋಗಿಗಳನ್ನು ಹೀಗೆ ಕೂಡಿ ಹಾಕುತ್ತಿದ್ದಾರೆ. ಇಂಥ ನರಕಸದೃಶ ಕಂಪನಿಗಳನ್ನು ಈ ದೇಶದಿಂದ ಹೊರಹಾಕಬೇಕು. ಇನ್ಯಾವುದೇ ದೇಶದಲ್ಲೂ ಹೀಗೆ ಕಂಪನಿಗಳು ಬಾಗಿಲು ಹಾಕುವ ಧೈರ್ಯವನ್ನು ಮಾಡುವುದಿಲ್ಲ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

Coding Ninjas ಎಂಬ ಗುರುಗ್ರಾಮ ಮೂಲದ ಕಂಪನಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ Coding Ninjas ಕಂಪನಿ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದೆ. ಹೀಗೆ ಬಾಗಿಲು ಹಾಕಲು ಸೂಚನೆ ನೀಡಿದ ಉದ್ಯೋಗಿಯನ್ನು ಪತ್ತೆ ಹಚ್ಚಲಾಯಿತು. ಅವರೂ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ ಎಂದು ತಿಳಿಸಿದೆ. ಕಂಪನಿಯ ಸಂಸ್ಥಾಪಕರಿಗೂ ಈ ಬಗ್ಗೆ ವಿಷಯ ಗೊತ್ತಾಗಿದೆ. ಕ್ಷಮೆ ಕೇಳಿದರೂ ಉದ್ಯೋಗಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು Coding Ninjas ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಕಂಪನಿಯ ಸಂಸ್ಥಾಪಕನ ಹೆಸರು ಅಂಕುಶ್ ಸಿಂಗ್ಲಾ ಎಂದಾಗಿದ್ದು, ಅವರೂ ಕೂಡ ಟ್ವೀಟ್ ಮಾಡಿಕೊಂಡಿದ್ದಾರೆ. ಕಳೆದ ವಾರ ನಮ್ಮ ಕಂಪನಿಯಲ್ಲಿ ಹೀಗಾಗಿದ್ದು ನಿಜ. ಸೇಲ್ಸ್ ವಿಭಾಗದ ಒಬ್ಬ ಮ್ಯಾನೇಜರ್​​ನಿಂದಾಗಿ ಸಮಸ್ಯೆಯಾಯಿತು. ತಕ್ಷಣವೇ ಕ್ರಮ ವಹಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಕಂಪನಿಯ ಹೇಳಿಕೆಗಳು ಮತ್ತು ಅಂಕುಶ್​ ಸಿಂಗ್ಲಾ ಟ್ವೀಟ್​ನ್ನು ಕೂಡ ರವಿ ಹಂಡಾ ಶೇರ್ ಮಾಡಿಕೊಂಡಿದ್ದಾರೆ. ಆದರೆ ನೆಟ್ಟಿಗರು ವಿಡಿಯೊ ನೋಡಿ, ಇದು ಅತಿರೇಕದ ವರ್ತನೆ ಎಂದು ಹೇಳಿದ್ದಾರೆ.

Continue Reading
Advertisement
Transport Minister Ramalinga reddy
ಕರ್ನಾಟಕ2 hours ago

Ramalinga Reddy: 4 ಸಾರಿಗೆ ನಿಗಮಗಳ ಅಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ನೇಮಕ

DCM DK Shivakumar
ಕರ್ನಾಟಕ3 hours ago

Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು

Indian Railways help desk
ದೇಶ3 hours ago

Odisha Train Accident : ಅವಘಡದಲ್ಲಿ ಮೃತಪಟ್ಟವರನ್ನು ಗುರುತಿಸಲು ಭಾರತೀಯ ರೈಲ್ವೆ ಮನವಿ

Water tap
ಕರ್ನಾಟಕ4 hours ago

Koppal News: ಕನಕಗಿರಿಯಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Rehena Fathima
ದೇಶ4 hours ago

ಬೆತ್ತಲೆಯಾಗುವುದು ಯಾವಾಗಲೂ ಅಶ್ಲೀಲವಲ್ಲ: ಬೆತ್ತಲಾದ 33 ವರ್ಷದ ಮಹಿಳೆಗೆ ಕೇರಳ ಹೈಕೋರ್ಟ್​​ನಿಂದ ರಿಲೀಫ್​

A sapling was planted on the banks of Tunga in Shivamogga
ಕರ್ನಾಟಕ4 hours ago

World Environment Day: ಶಿವಮೊಗ್ಗದಲ್ಲಿ ಸಹಸ್ರ ವೃಕ್ಷಾರೋಪಣ; ಸಾವಿರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ

Ashwini Vaishnav
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ರೈಲು ದುರಂತ ಬಳಿಕ ಪರಿಹಾರ ಕಾರ್ಯ; ರೈಲ್ವೆ ಸಚಿವರ ನಡೆ ಅನುಕರಣೀಯ

World Environment Day celebration at Shirsi veda health centere
ಉತ್ತರ ಕನ್ನಡ5 hours ago

Uttara Kannada News: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

Ekana Stadium
ಕ್ರಿಕೆಟ್5 hours ago

ತಾಯಿ, ಮಗಳ ಜೀವ ತೆಗೆಯಿತು ಐಪಿಎಲ್ ಲಕ್ನೊ ತಂಡದ ಹೋರ್ಡಿಂಗ್

Bike Accident in Charmadi Ghat
ಕರ್ನಾಟಕ5 hours ago

Bike Accident: ಚಾರ್ಮಾಡಿ ಘಾಟ್‌ನಲ್ಲಿ ಸಾರಿಗೆ ಬಸ್‌ ಚಕ್ರಕ್ಕೆ ಸಿಲುಕಿ ಸ್ಕೂಟರ್‌ ಸವಾರ ಸಾವು

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Land Surveyor Recruitment
ಉದ್ಯೋಗ4 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Chakravarthy Sulibele and MB Patil
ಕರ್ನಾಟಕ15 hours ago

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Sevanthige Flower Farming
ಕೃಷಿ15 hours ago

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Horoscope Today
ಪ್ರಮುಖ ಸುದ್ದಿ22 hours ago

Horoscope Today : ಈ ನಾಲ್ಕು ರಾಶಿಯ ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಂತೆ!

Mangalore Moral Policing News
ಉಡುಪಿ2 days ago

Video: ನಮ್ಮ ನಿದ್ದೆಗೆಡಿಸಿದ್ದಾರೆ; ಮುಸ್ಲಿಮರೊಂದಿಗೆ ಬೀಚ್​​ಗೆ ಬಂದಿದ್ದ ಹುಡುಗಿಯರ ವಿರುದ್ಧ ನಿಂತ ಮಹಿಳೆಯರು

horoscope today
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಲೇಬೇಕು!

South facing house vastu
ಭವಿಷ್ಯ3 days ago

Vastu Tips : ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆ ಕೂಡ ಶುಭವಂತೆ! ಹೌದೇ? ಏನೆನ್ನುತ್ತದೆ ವಾಸ್ತು ಶಾಸ್ತ್ರ?

jackfruit
ಕೃಷಿ3 days ago

Krishi Khajane : ಹುಲುಸಾಗಿ ಹಲಸು ಬೆಳೆಯಿರಿ, ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ!

Bus Driver
ಕರ್ನಾಟಕ3 days ago

Viral Video: ಬೆಂಗಳೂರು ಟ್ರಾಫಿಕ್‌ನಲ್ಲೇ ಊಟ ಮಾಡಿ ಮುಗಿಸಿದ ಡ್ರೈವರ್! ಇಲ್ಲಿದೆ ನೋಡಿ ವಿಡಿಯೊ

horoscope today
ಪ್ರಮುಖ ಸುದ್ದಿ3 days ago

Horoscope Today : ಈ ಮೂರು ರಾಶಿಯವರಿಗೆ ಖರ್ಚು ಹೆಚ್ಚು; ಇಂದು ನಿಮ್ಮ ಭವಿಷ್ಯ ಹೀಗಿದೆ

Siddaramaiah
ಕರ್ನಾಟಕ3 days ago

Congress Guarantee : ಹೂ ಈಸ್‌ ಯುವರ್‌ ಯಜಮಾನಿ? ಸಿದ್ದರಾಮಯ್ಯ ಸುದ್ದಿಗೋಷ್ಠಿಯ ತಮಾಷೆ ಪ್ರಸಂಗಗಳು ಇಲ್ಲಿವೆ!

ಟ್ರೆಂಡಿಂಗ್‌

error: Content is protected !!