Site icon Vistara News

Viral Video : ತನ್ನನ್ನು ತಾನೇ ಕತ್ತರಿಸಿಕೊಂಡು ತಿಂದ ಮಹಿಳೆ? ವೈರಲ್‌ ಆಯ್ತು ವಿಡಿಯೊ

#image_title

ಬೆಂಗಳೂರು: ಕೇಕ್‌ ಎಂದಾಕ್ಷಣ ವೃತ್ತಾಕಾರ ಅಥವ ಚೌಕ/ಆಯತಾಕಾರದ ಕೇಕ್‌ ನೆನಪಾಗಬಹುದು. ಆದರೆ ಈಗ ಕಾಲ ಬದಲಾಗಿದೆ. ಭೂಮಿ ಮೇಲಿರುವ ಎಲ್ಲ ವಸ್ತುವಿನ ರೂಪದಲ್ಲೂ ಕೇಕ್‌ಗಳು ತಯಾರಾಗುತ್ತಿವೆ. ವಿಶೇಷವೆಂದರೆ ಮನುಷ್ಯರಂತೆಯೇ ಕಾಣುವ ಕೇಕ್‌ಗಳೂ ಕೂಡ ನಿರ್ಮಾಣವಾಗುತ್ತಿದ್ದು, ಅಂತಹದ್ದೊಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral Video: ಸಿರಿಯಾ ಭೂಕಂಪದ ಮಧ್ಯೆ ಮನಕಲಕುವ ದೃಶ್ಯ, ಅವಶೇಷಗಳಡಿಯಲ್ಲೇ ಹುಟ್ಟಿದ ಮಗುವಿನ ರಕ್ಷಣೆ
ಅಮೆರಿಕದ ಟೆಕ್ಸಾಸ್‌ನ ಪ್ರಸಿದ್ಧ ಕೇಕ್‌ ಬೇಕರ್‌ ಆಗಿರುವ ನಟಾಲಿಯಾ ಸೈಡ್ಸರ್ಫ್ ಈ ರೀತಿಯ ವಿಶೇಷವಾದ ಕೇಕ್‌ ಅನ್ನು ತಯಾರಿಸಿದ್ದಾರೆ. ತನ್ನದೇ ಮುಖಕ್ಕೆ ಹೋಲುವ ಕೇಕ್‌ ಅನ್ನು ತಯಾರಿಸಿ, ಅದನ್ನು ಕತ್ತರಿಸಿ ತಿಂದಿದ್ದಾರೆ ಕೂಡ. ಆ ವಿಡಿಯೊವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆರು ಸೆಕೆಂಡುಗಳಷ್ಟು ಇರುವ ವಿಡಿಯೋ ಲಕ್ಷಾಂತರ ಮಂದಿಯಿಂದ ವೀಕ್ಷಣೆ ಪಡೆದಿದೆ. ಲಕ್ಷಾಂತರ ಮಂದಿ ವಿಡಿಯೊವನ್ನು ಮೆಚ್ಚಿ, ಶೇರ್‌ ಮಾಡಿಕೊಂಡಿದ್ದಾರೆ ಕೂಡ.


ನಟಾಲಿಯಾ ತಯಾರಿಸುವ ಕೇಕ್‌ನಲ್ಲಿ ಸಣ್ಣ ಸಣ್ಣ ಸೂಕ್ಷ್ಮತೆಯನ್ನೂ ಜನರು ಗಮನಿಸಲಾರಂಭಿಸಿದ್ದಾರೆ. ನಟಾಲಿಯಾ ಕಣ್ಣಿನಂತೆಯೇ ಕೇಕ್‌ನಲ್ಲೂ ಕಣ್ಣುಗಳಿವೆ. ಕೂದಲಿನ ಬಣ್ಣದಿಂದ ಹಿಡಿದು ಪ್ರತಿಯೊಂದನ್ನೂ ಯತಾವತ್ತಾಗಿ ಮಾಡಿರುವುಕ್ಕೆ ನೆಟ್ಟಿಗರು ನಟಾಲಿಯಾಗೆ ಅಭಿನಂದನೆಗಳನ್ನು ಹೇಳಲಾರಂಭಿಸಿದ್ದಾರೆ. “ಇದುವರೆಗೆ ನಾನು ನೋಡಿರುವ ಕೇಕ್‌ ವಿಡಿಯೋಗಳಲ್ಲಿ ಇದುವೇ ಬೆಸ್ಟ್‌ ವಿಡಿಯೊ” ಎಂದು ಜನರು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.

Exit mobile version