Site icon Vistara News

Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

Viral Video

ನವದೆಹಲಿ: ಈಗ ಪ್ರಾಣಿ-ಪಕ್ಷಿಗಳು ಮನುಷ್ಯರಿಗಿಂತ ಹೆಚ್ಚು ಟ್ಯಾಲೆಂಟೆಡ್‌ ಆಗಿರುತ್ತವೆ. ಸಾಮಾನ್ಯವಾಗಿ ನಾಯಿ, ಬೆಕ್ಕು, ಪಾಂಡಾ ಹೀಗೆ ಕೆಲವು ಪ್ರಾಣಿಗಳು ತಮ್ಮ ವಿಶೇಷ ಕಲೆ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ.ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ಈ ವಿಡಿಯೋದಲ್ಲಿ ಗಿಣಿ(Parrot)ಯೊಂದು ಇಂಗ್ಲಿಷ್‌ನಲ್ಲಿ ಮಾತನಾಡೋದು ಮಾತ್ರ ಅಲ್ಲ, ಬೇರೆ ಬೇರೆ ಶಬ್ದಗಳನ್ನು ಮಿಮಿಕ್ರಿಯನ್ನೂ ಮಾಡುವುದನ್ನು ಕಾಣಬಹುದಾಗಿದೆ.

ಬೂದು ಬಣ್ಣದ ಈ ಗಿಳಿ ಜೊತೆಗಿದ್ದ ವ್ಯಕ್ತಿ ಹೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸುವುದನ್ನು ಕಾಣಬಹುದಾಗಿದೆ. ಮೈಕ್‌ ನಲ್ಲಿ ಮಾತನಾಡನಾಡುವ ಗಿಳಿ ವಿವಿಧ ಶಬ್ಧಗಳನ್ನು ಮಾಡುತ್ತದೆ. ಇನ್ನು ಸ್ವತಃ ತಾನೇ ಮೈಕ್‌ ಅನ್ನು ಎಳೆದು ಮಾತನಾಡುವುದು ವಿಶೇಷವಾಗಿ ಗಮನಸೆಳೆಯುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು @birdslover212 ಎಂಬವರು ಶೇರ್‌ ಮಾಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಂಥಾ ಅಮೇಜಿಂಗ್‌ ಸಂಗತಿ ಎಂದು ಬರೆದುಕೊಂಡಿದ್ದಾರೆ.

ಈ ಗಿಣಿಯ ವಿಶೇಷತೆ ಏನು?

ಕಾಗೆ, ರಾವೆನ್‌ ಮತ್ತು ಜೇ ಹಕ್ಕಿಗಳಂತೆ ಬುದ್ಧಿವಂತ ಪಕ್ಷಿ ಆಫ್ರಿಕಾದ ಬೂದು ಬಣ್ಣದ ಗಿಳಿ. ಇದರ ವೈಜ್ಞಾನಿಕ ಹೆಸರು ಪಿಟ್ಟಾಕಸ್‌ ಎರಿಥಕಸ್‌ (95112005 61118605). ಆಫ್ರಿಕಾದಲ್ಲಿರುವ ಈ ಗಿಳಿ ಮಾತ್ರ ಬೂದು ಬಣ್ಣದಲ್ಲಿರುತ್ತದೆ. ಇದರಲ್ಲಿ ಈವರೆಗೆ ಎರಡು ತಳಿಗಳನ್ನು ಗುರುತಿಸಲಾಗಿದೆ. ಅವೆಂದರೆ ಕಾಂಗೊ ಆಫ್ರಿಕನ್‌ ಗ್ರೇ ಮತ್ತು
ಟಮ್‌ನೆ ಅಪ್ರಿಕನ್‌ ಗ್ರೇ. ಇದರ ದೇಹವು ಬೂದು ಬಣ್ಣದ ಗರಿಗಳಿಂದ ಅವೃತವಾಗಿರುತ್ತದೆ. ಇದರ ರೆಕ್ಕೆಗಳೂ ಕಪ್ಪು
ಮಿಶ್ರಿತ ಬೂದು ಬಣ್ಣದಲ್ಲಿ ಇರುತ್ತವೆ. ಬಾಲದ ಪುಕ್ಕಗಳು ಕೆಂಪು ಬಣ್ಣದಲ್ಲಿರುತ್ತವೆ. ಬಾಗಿದ ಕೊಕ್ಕು, ಹಳದಿ ಬಣ್ಣದ
ಕಣ್ಣಾಲಿಗಳನ್ನು ಹೊಂದಿರುತ್ತದೆ. ಆಫ್ರಿಕಾ ದೇಶಗಳ ಅರಣ್ಯಗಳು, ಹುಲ್ಲುಗಾವಲು, ಕೃಷಿ ಭೂಮಿ ಪ್ರದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ಇದನ್ನೂ ಓದಿ: Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

ಸಾಮಾನ್ಯವಾಗಿ ಈ ಗಿಳಿಗಳು ಮಾನವ ದ್ವನಿಯನ್ನು ಅನುಕರಿಸಬಲ್ಲವು. ಈ ಗಿಳಿ ಕೂಡಾ ಸಣ್ಣಪದ ಹಾಗೂ ಸರಳ
ವಾಕ್ಕಗಳನ್ನು ನುಡಿಯಬಲ್ಲದು. ಇದು ಒಂಟಿಯಾಗಿ ಜೀವಿಸಲು ಇಷ್ಟಪಡುತ್ತದೆ. ಇತರೆ ಪಕ್ಷಿಗಳಿಗೆ ಹೋಲಿಸಿದರೆ ಇದರ ಜೀವಿತಾವಧಿ ಸುದೀರ್ಘವಾಗಿರುತ್ತದೆ. ತಳಿಗಳಲ್ಲಿ ಅತಿ ಚಾಣಾಕ್ಷ ಪಕ್ಷಿ ಎಂದು ಇದನ್ನು ಪರಿಗಣಿಸಲಾಗಿದೆ. ಮನುಷ್ಯರ ಮಾತುಗಳನ್ನು ಅರ್ಥಮಾಡಿಕೊಳ್ಳುವ, ದ್ವನಿಯನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿದೆ.ಕೆಲವು
ಗಿಳಿಗಳು ವಸ್ತುಗಳನ್ನು ಗುರುತಿಸುವ, ವಿವರಿಸುವ ಹಾಗೂ ಎಣಿಸುವ ಸಾಮರ್ಥ್ಯವನ್ನೂ ಹೊಂದಿರುವುದು ವಿಶೇಷ.

Exit mobile version