Site icon Vistara News

Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

Viral Video

ಬೆಂಗಳೂರು: ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು ಸಹಿಸಲಾಗದೇ ಜನರು ಕಂಗಾಲಾಗಿದ್ದಾರೆ. ಫ್ಯಾನ್, ಕೂಲರ್ ಗಾಳಿ ಮೈಗೆ ತಟ್ಟದ ಕಾರಣ ಸಾಲವಾದರೂ ಪರ್ವಾಗಿಲ್ಲ ಎಸಿ ಹಾಕೋಣ ಅನ್ನುವ ಮಟ್ಟಿಗೆ ಈ ವರ್ಷದ ಬಿಸಿಲು ಚುರುಕು ಮುಟ್ಟಿಸಿದೆ. ಬಸ್, ರೈಲು, ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಇತರ ಯಾವುದೇ ಸ್ಥಳಕ್ಕೆ ಹೋಗುವಾಗ ಜನರು ಎಸಿ ಇದೆಯಾ ಎಂದು ಮೊದಲು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಮೊದಲೇ ಬಿಸಿಲಿನ ತಾಪ ತಾಳಲಾರದೇ ಮಂಡೇ ಬಿಸಿಯಾಗಿರುತ್ತದೆ. ಇದರ ಮಧ್ಯೆ ತಾನು ಆಯ್ಕೆ ಮಾಡಿದ ಎಸಿ ರೂಂಗಳು ಸಿಗದೇ ಹೋದರೆ ವ್ಯಕ್ತಿಯ ಪರಿಸ್ಥಿತಿ ಹೇಗಾಗಿರಬಹುದು ಹೇಳಿ? ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ತಾನು ಆಯ್ಕೆ ಮಾಡಿದ ಎಸಿ ಕೋಚ್ ಸಿಗದ ಕಾರಣ ವ್ಯಕ್ತಿಯೊಬ್ಬ ಮಾಡಿದ ಅವಾಂತರದ ವಿಡಿಯೋ ಈಗ ಎಲ್ಲೆಡೆ ವೈರಲ್ (Viral Video) ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡಿದೆ.

ಸೆಕೆಯ ಹೊಡೆತಕ್ಕೆ ಸಿಕ್ಕ ವ್ಯಕ್ತಿಯೊಬ್ಬ ರೈಲಿನಲ್ಲಿ ತಾನು ಕಾಯ್ದಿರಿಸಿದ ಎಸಿ ಕೋಚ್ ಹತ್ತಲು ಸಾಧ್ಯವಾಗದೇ ಕೋಪಗೊಂಡು ರೈಲಿನ ಬಾಗಿಲಿನ ಗಾಜನ್ನೆ ಒಡೆದು ಹಾಕಿದ ಘಟನೆ ಕೈಫಿಯಾತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ.

ವ್ಯಕ್ತಿ ಕೈಫಿಯಾತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ಎಸಿ 3 ಕೋಚ್ ನಲ್ಲಿ ಸೀಟ್ ಬುಕ್ ಮಾಡಿದ್ದ. ಆದರೆ ಟಿಕೆಟ್ ಇಲ್ಲದ ಪ್ರಯಾಣಿಕರು ಅವರನ್ನು ಒಳಗೆ ಪ್ರವೇಶಿಸಲು ನಿರಾಕರಿಸಿದರು, ಇದರಿಂದ ಕೋಪಗೊಂಡ ವ್ಯಕ್ತಿ ರೈಲಿನ ಬಾಗಿಲಿನ ಗಾಜನ್ನು ಒಡೆದು ಪುಡಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 32 ಸೆಕೆಂಡುಗಳ ಈ ವಿಡಿಯೊ ಕ್ಲಿಪ್ ಗೆ 2 ಮಿಲಿಯನ್ ವೀವ್ಸ್ ಸಿಕ್ಕಿದೆ.

ವಿಡಿಯೊದಲ್ಲಿ ಕಂಡುಬಂದಂತೆ ಕೋಚ್ ಬಾಗಿಲಿನ ಮುಂಭಾಗದಲ್ಲಿ ನೆಲದ ಮೇಲೆ ಕುಳಿತಿರುವ ಜನರಿಂದ ತುಂಬಿತ್ತು. ಆ ವೇಳೆ ಒಬ್ಬ ಪ್ರಯಾಣಿಕ ಬಾಗಿಲನ್ನು ತೆರೆಯಲು ಜನರನ್ನು ಕೇಳಿದಾಗ ಅಲ್ಲಿದ್ದ ವ್ಯಕ್ತಿಯೊಬ್ಬ “ಅಲ್ಲಿ ಜಾಗವಿಲ್ಲ” ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಪ್ರಯಾಣಿಕ ರೈಲಿನ ಬಾಗಿಲಿನ ಗಾಜನ್ನು ಒಡೆದುಹಾಕಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಆಗಾಗ ರೈಲಿನ ಪ್ರಯಾಣದ ಕುರಿತಾದ ವಿಡಿಯೋಗಳು ಹರಿದಾಡುತ್ತಿದ್ದು, ಈ ಹಿಂದೆ ಕಾಶಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಭೀಕರ ಸ್ಥಿತಿಯನ್ನು ತೋರಿಸಿದೆ. ಕೋಚ್ ನಲ್ಲಿ ಎಸಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಆಹಾರ ಮತ್ತು ನೀರು ನೀಡಲಾಗಿಲ್ಲ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

ಹಾಗೇ ಭಾರತೀಯ ರೈಲ್ವೆಗೆ ಸಂಬಂಧಿಸಿದ ಮತ್ತೊಂದು ವಿಡಿಯೊದಲ್ಲಿ ಮಹಿಳೆಯೊಬ್ಬಳು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದು, ಈ ಬಗ್ಗೆ ತನ್ನ ಸಹ ಪ್ರಯಾಣಿಕರೊಂದಿಗೆ ಜಗಳವಾಡುತ್ತಿರುವ ಘಟನೆ ನಡೆದಿದೆ.

Exit mobile version