Site icon Vistara News

Viral Video: ಇಡೀ ಮನೆ ಹೊತ್ತಿ ಉರಿಯವಂತೆ ಮಾಡಿದ ಶ್ವಾನ! ಸಾಕು ಪ್ರಾಣಿ ಪ್ರಿಯರು ಈ ವಿಡಿಯೋ ನೋಡ್ಲೇಬೇಕು

Viral Video

ವಾಷಿಂಗ್ಟನ್‌: ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವುದು ಎಷ್ಟು ಅಪಾಯಕಾರಿಯೋ ಅಷ್ಟೇ ಸಾಕು ಪ್ರಾಣಿಗಳನ್ನು ಬಿಟ್ಟುಹೋಗುವುದು ಕೂಡ. ಸ್ವಲ್ಪ ನಿರ್ಲಕ್ಷ್ಯ ವಹಿಸದರೂ ದೊಡ್ಡ ಪ್ರಮಾಣದಲ್ಲಿ ಅಪಾಯ ಎದುರಿಸಬೇಕಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಆಘಾತಕಾರಿ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಆರಾಮಾಗಿ ಮಲಗಿದ್ದ ನಾಯಿಯೊಂದು ಸೋಫಾದ ಮೇಲೆ ಬಿದ್ದಿದ್ದ ಲಿಥಿಯಂ-ಐಯಾನ್​ ಬ್ಯಾಟರಿ(Lithium-Ion Battery)ಯನ್ನು ಜಗಿದಿದ್ದರಿಂದ ಬ್ಯಾಟರಿ ಸ್ಫೋಟಗೊಂಡು ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಅಮೆರಿಕ(America)ದ ಓಕ್ಲಾದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ

ಘಟನೆ ವಿವರ:

ತುಲ್ಸಾ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವೀಡಿಯೊದ ಆರಂಭದಲ್ಲಿ, ಎರಡು ಸಾಕು ನಾಯಿಗಳು ಮತ್ತು ಬೆಕ್ಕು ಲಿವಿಂಗ್ ರೂಮ್‌ನಲ್ಲಿ ಆಟವಾಡುತ್ತಿರುವುದು ಕಂಡುಬಂದಿದೆ. ಈ ಮಧ್ಯೆ, ನಾಯಿಯೊಂದು ಸೋಫಾದ ಮುಂಭಾಗದ ಹಾಸಿಗೆಯ ಮೇಲೆ ಇರಿಸಲಾದ ಲಿಥಿಯಂ ಬ್ಯಾಟರಿಯನ್ನು ಅಗಿಯಲು ಪ್ರಾರಂಭಿಸುತ್ತದೆ. ಇದಕ್ಕಿದ್ದಂತೆ ಬ್ಯಾಟರಿಯಿಂದ ಸ್ಪಾರ್ಕ್ ಉಂಟಾಗಿದ್ದು, ಕೆಲ ಕ್ಷಣದಲ್ಲಿ ಹಾಸಿಗೆ ಸೋಫಾ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ನಾಯಿ ಹಾಗೂ ಬೆಕ್ಕಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಸಣ್ಣ ಸ್ಪಾರ್ಕ್ ಸ್ಪೋಟಗೊಂಡು ಹಾಸಿದ್ದ ಬೆಡ್ ಮೇಲೆ ಬೆಂಕಿ ಹತ್ತುತ್ತದೆ.​ ತಕ್ಷಣ ಅಲ್ಲಿ ಕುಳಿತಿದ್ದ ಬೆಕ್ಕು ಓಡಿ ಹೋಗುತ್ತದೆ. ಆದರೆ 2 ನಾಯಿಗಳಿಗೆ ಮಾತ್ರ ಏನಾಗುತ್ತಿದೆ ಎಂಬುದೇ ತಿಳಿಯದೇ ಅದನ್ನೇ ನೋಡಿ ಬೊಗಳಲು ಶುರು ಮಾಡಿದೆ. ಸಣ್ಣ ಪುಟ್ಟ ಗಾಯಗಳಿಂದ ಭಯಭೀತರಾದ 2 ನಾಯಿಗಳು, ಬೆಕ್ಕು ಅವುಗಳಿಗೆಂದೇ ಇದ್ದ ಪೆಟ್ ಬಾಗಿಲಿಂದ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿವೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಇನ್ನು ವಿಡಿಯೋವನ್ನು ಟಲ್ಸಾ ಅಗ್ನಿಶಾಮಕ ದಳ 7 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಿಮ್ಮ ಕುಟುಂಬದ ಸುರಕ್ಷತೆಗಾಗಿ ವಿಡಿಯೋವನ್ನು ಎಲ್ಲರೂ ನೋಡುವಂತೆ ವಿನಂತಿಸಿದೆ. ನಿಮ್ಮ ಮನೆಯಲ್ಲಿ ಲಿಥಿಯಂ-ಐಯಾನ್​ ಬ್ಯಾಟರಿಗಳಿದ್ದರೆ, ಅವುಗಳ ಬಳಕೆ, ಚಾರ್ಜಿಂಗ್​ಗಳ ಬಗ್ಗೆ ಖಚಿತಪಡಿಸಿಕೊಳ್ಳಿ. ದೇಶದಾದ್ಯಂತ ಲಿಥಿಯಂ ಐಯಾನ್ ಬ್ಯಾಟರಿಗಳಿಂದಾಗುತ್ತಿರುವ ಅಗ್ನಿ ಅವಘಡಗಳನ್ನು ನೋಡಿದ್ದೇವೆ ಎಂದು ಟಲ್ಸಾ ಅಗ್ನಿಶಾಮಕ ದಳ ಹೇಳಿದೆ. ಇದೀಗ ಈ ವಿಡಿಯೋ ಒಂದೇ ದಿನದಲ್ಲಿ 1 ಕೋಟಿಯ 93ಲಕ್ಷ ​​​ ವೀಕ್ಷಣೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Viral Video: ಐದನೇ ಮಹಡಿಯಿಂದ ಬಾಲಕಿ ಮೇಲೆ ಬಿದ್ದ ಶ್ವಾನ; ಆಮೇಲೆ ಆಗಿದ್ದೇನು? ವಿಡಿಯೋ ಇದೆ

Exit mobile version