ಪಾಟ್ನಾ: ʼಮಾಡಿದ್ದುಣ್ಣೋ ಮಹಾರಾಯʼ ಎನ್ನುವ ಮಾತಿದೆ. ನಾವು ಏನನ್ನು ಮಾಡುತ್ತೇವೆಯೋ ಅದಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತದೆ ಎನ್ನುವುದು ಈ ಮಾತಿನ ಅರ್ಥ. ಈ ಮಾತು ಮೊಬೈಲ್ ಕಳ್ಳನೊಬ್ಬನಿಗೆ ಸರಿಯಾಗಿ ಅರ್ಥವಾದಂತಿದೆ. ಅಷ್ಟಕ್ಕೂ ರೈಲು ಪ್ರಯಾಣಿಕರು ಕಳ್ಳನಿಗೆ ಹೇಗೆ ಪಾಠ ಕಲಿಸಿದ್ದಾರೆ ಎನ್ನುವುದನ್ನು ತಿಳಿಯಲು ಈ ವೈರಲ್ ವಿಡಿಯೊ (Viral Video) ನೋಡಿ.
चलती ट्रेन से पैसेंजर का फोन छीनकर भाग रहे झपटमार को यात्री ने पकड़ लिया और करीब 1 किमी तक ट्रेन की खिड़की से लटकाए रखा।
— Priya singh (@priyarajputlive) January 17, 2024
वीडियो बिहार के भागलपुर का बताया जा रहा है। pic.twitter.com/tHbKphUIQe
ವಿಡಿಯೊದಲ್ಲೇನಿದೆ?
ಬಿಹಾರದ ನಡೆದ ಘಟನೆ ಇದು ಎನ್ನಲಾಗಿದೆ. ಮೊಬೈಲ್ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ಹೇಗೆ ಅದರ ಪರಿಣಾಮ ಎದುರಿಸಿದ ಎನ್ನುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ. ರೈಲಿನೊಳಗಿದ್ದ ಪ್ರಯಾಣಿಕರೊಬ್ಬರು ಮೊಬೈಲಿನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಇದು ಕಣ್ಣಿಗೆ ಬಿದ್ದಿದ್ದೇ ತಡ ಕಳ್ಳನೊಬ್ಬ ಇವತ್ತಿನ ಭರ್ಜರಿ ಬೇಟೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತ ನಿಧಾನವಾಗಿ ಆ ಪ್ರಯಾಣಿಕನ ಬಳಿ ಬಂದ. ಬೊಬೈಲ್ ಕಸಿದು ಇನ್ನೇನು ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಆತನ ಅದೃಷ್ಟ ಕೈ ಕೊಟ್ಟಿದೆ. ಸಹ ಪ್ರಯಾಣಿಕರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಕೆಲವರು ಕಿಟಕಿಯ ಮೂಲಕ ಆತನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಹೀಗೆ ಆತ ಬರೋಬ್ಬರಿ ಒಂದು ಕಿಲೋ ಮೀಟರ್ ದೂರದವರೆಗೆ ರೈಲಿನ ಕಿಟಕಿಯ ಹೊರಗಿನಿಂದ ನೇತಾಡಿಕೊಂಡೇ ಪ್ರಾಣಿಸಿದ್ದಾನೆ. ಇದರ ಜತೆಗೆ ಧರ್ಮದೇಟನ್ನೂ ತಿಂದಿದ್ದಾನೆ. ಬಹುಶಃ ಆತ ಇನ್ನೆಂದೂ ಕಳ್ಳತನಕ್ಕೆ ಇಳಿಯಲಾರ. ಅ ಮಟ್ಟಿಗೆ ಆತನಿಗೆ ಇದು ಮರೆಯಲಾರದ ಅನುಭವ ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ‘ಬಿಹಾರದ ಭಾಗಲ್‌ಪುರದ ಬಳಿ ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ. ಆ ವೇಳೆಯಲ್ಲಿ ಸಿಕ್ಕಿಹಾಕಿಕೊಂಡ ಆತನನ್ನು ಪ್ರಯಾಣಿಕರೆಲ್ಲರೂ ಸೇರಿ ಒಂದು ಕಿಲೋ ಮೀಟರ್ವರೆಗೂ ರೈಲಿನ ಹೊರಗಿನಿಂದ ನೇತಾಡಿಸಿಕೊಂಡು ಹೋಗಿದ್ದಾರೆʼ ಎಂಬ ವಿವರಣೆಯನ್ನು ನೀಡಲಾಗಿದೆ.
ಇದನ್ನೂ ಓದಿ: Viral video: ಸಿವಿಲ್ ಸರ್ವೀಸ್ ವಿದ್ಯಾರ್ಥಿ ಕೋಚಿಂಗ್ ಕ್ಲಾಸ್‌ನಲ್ಲಿಯೇ ಕುಸಿದು ಸಾವು
ನೆಟ್ಟಿಗರು ಏನಂದ್ರು?
ಈ ಪೋಸ್ಟ್ ಸಹಜವಾಗಿ ನೆಟ್ಟಿಗರ ಗಮನ ಸೆಳೆದಿದೆ. ಸದ್ಯ ಈ ವಿಡಿಯೊವನ್ನು 6 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜತೆಗೆ ಕಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ”ಕೆಟ್ಟ ಕೆಲಸದ ಪರಿಣಾಮ ಯಾವತ್ತೂ ಕೆಟ್ಟದ್ದೇ ಆಗಿರುತ್ತದೆ” ಎಂದು ಒಬ್ಬರು ಹೇಳಿದ್ದಾರೆ. ”ಈ ವಿಡಿಯೊ ನೋಡಿದ ಬಳಿಕ ಖಂಡಿತವಾಗಿಯೂ ಹಲವರು ಬುದ್ಧಿ ಕಲಿಯಲಿದ್ದಾರೆ. ಅದರಲ್ಲೂ ಈ ಕಳ್ಳ ಬಿಡಿ, ಆತನ ಕುಟುಂಬದ ಯಾರೊಬ್ಬರೂ ಇನ್ನೆಂದೂ ಕಳವಿನ ಪ್ರಯತ್ನಕ್ಕೆ ಕೈ ಹಾಕಲಾರರುʼʼ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಖದೀಮರಿಗೆ ಬುದ್ಧಿ ಕಲಿಸಲು ಉತ್ತಮ ಮಾರ್ಗʼʼ ಎಂದು ಮಗದೊಬ್ಬರು ಕಮೆಂಟ್ ಮಾಡಿದ್ದಾರೆ. ʼʼಈ ಘಟನೆ ಎಲ್ಲರಿಗೂ ಪಾಠವಾಗಬೇಕುʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಈ ರೀತಿ ಚಲಿಸುತ್ತಿರುವ ರೈಲಿನಲ್ಲಿ ನೇತಾಡಿಸಿಕೊಂಡು ಹೋಗಿದ್ದು ಅಪಾಯಕಾರಿಯಾದರೂ ಕಳವಿನಂತಹ ದುಸ್ಸಾಹಸಕ್ಕೆ ಕೈ ಹಾಕದಿರಲು ಇಂತಹ ಕಠಿಣ ಕ್ರಮ ಅನಿವಾರ್ಯ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ