ನವದೆಹಲಿ: ಸುಡು ಬಿಸಿಲಿನಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ವೃದ್ಧೆಯ ಸಂಕಟ ನೋಡಲಾಗದ ಪೊಲೀಸ್ ಅಧಿಕಾರಿಯೊಬ್ಬರು, ಆಕೆಯ ಬಳಿ ಮಾರಾಟಕ್ಕಿದ್ದ 2 ಕೆ.ಜಿ ಪೇರಲ ಹಣ್ಣುಗಳನ್ನು ಖರೀದಿಸಿ ವಿಶ್ರಾಂತಿಗಾಗಿ ಮನೆಗೆ ಕಳುಹಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನರ ಮೇಲೆ ಸ್ವಲ್ಪವೇ ಕರುಣೆ ತೋರಿಸಿದರೂ ಸಾಕು ಅದು ಬೀರುವ ಪರಿಣಾಮ ಬಹಳ ದೊಡ್ಡದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗುತ್ತಿದೆ(Viral Video).
ರಸ್ತೆಯ ಪಕ್ಕದಲ್ಲಿ ಮುದುಕಿಯೊಬ್ಬಳು ಪೇರಲ ಹಣ್ಣು ಮಾರುತ್ತಿರುತ್ತಾಳೆ. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿ ಆಕೆಯ ಪರಿಚಯವನ್ನು ಮಾಡಿಕೊಳ್ಳುತ್ತಾರೆ. ಎಲ್ಲ ಪೇರಲು ಹಣ್ಣು ಖರೀದಿಸಿದರೆ ಮನೆಗೆ ಹೋಗಿ ವಿಶ್ರಾಂತಿ ಮಾಡುತ್ತೀರಾ ಎಂದು ಕೇಳುತ್ತಾರೆ. ಅದಕ್ಕೆ ವೃದ್ಧೆ ಹೌದು ಎನ್ನುತ್ತಾಳೆ. ಬಳಿಕ, 1 ಕೆ.ಜಿ ಪೇರಲ ಹಣ್ಣಿಗೆ ಎಷ್ಟು ಎಂದು ಕೇಳುತ್ತಾರೆ. ಅಜ್ಜಿ 1 ಕೆ.ಜಿ. ಪೇರಲ ಹಣ್ಣಿಗೆ 20 ರೂ. ಎನ್ನುತ್ತಾಳೆ. ಪೊಲೀಸ್ ಅಧಿಕಾರಿ ನೂರರ ನೋಟು ನೀಡಿ, ಎಲ್ಲ ಹಣ್ಣನ್ನು ಖರೀದಿಸುತ್ತಾರೆ. ಬಳಿಕ, ಮನೆಗೆ ಹೋಗಿ ವಿಶ್ರಾಂತಿ ಮಾಡುವಂತೆ ಸೂಚಿಸುತ್ತಾರೆ. ಎಲ್ಲ ಹಣ್ಣು ಮಾರಾಟವಾದ ಖುಷಿಯಲ್ಲಿ ಪೊಲೀಸ್ ಅಧಿಕಾರಿಗೆ ಒಳ್ಳೆಯದಾಗಲಿ ಎಂದು ವೃದ್ಧೆ ಹಾರೈಸುತ್ತಾಳೆ. ಈ ವೃದ್ಧೆಯ ಹೆಸರು ಫೂಲ್‌ರಾಣಿ.
ಸುಮಾರು ಒಂದೂವರೆ ನಿಮಿಷದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. Bundeli Bauchhar ಎಂಬ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋ ಷೇರ್ ಮಾಡಲಾಗಿದ್ದು, ಅಧಿಕಾರಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಈವರೆಗೆ 1.1 ಮಿಲಿಯನ್ ವೀವ್ಸ್ ಬಂದಿದೆ.
ಇದನ್ನೂ ಓದಿ | Petrol Pump Robbery | ಪೆಟ್ರೋಲ್ ಪಂಪ್ ದರೋಡೆಗೆ ಬಂದು ಹೆಣವಾದ! ವಿಡಿಯೋ ವೈರಲ್